ಐಡಿಬಿಐ ಬ್ಯಾಂಕ್ ಗದಗ ಬ್ರಾಂಚ್ ಮ್ಯಾನೇಜರ್ ವಿಕ್ರಂ ಕಡೆಮನೆ ಅವರು, ತಮ್ಮ ಬ್ಯಾಂಕ್‌ ಕೂಡ ಸಾರ್ವಜನಿಕರ ಹಿತಕ್ಕೆ, ಸಾಮಾಜಿಕ ಕಾರ್ಯಗಳಿಗೆ ಸಹಕಾರ ನೀಡುತ್ತಿದೆ ಎಂದರು.

ಮುಳಗುಂದ: ಸಮೀಪದ ಯಲಿಶಿರೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಗದಗ ಸೆಂಟ್ರಲ್ ಹಾಗೂ ಐಡಿಬಿಐ ಬ್ಯಾಂಕ್ ಸಹಯೋಗದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೊಡುಗೆ ನೀಡಲಾಯಿತು.ರೋಟರಿ ಗದಗ ರೆವಿನ್ಯೂ ಡಿಸ್ಟ್ರಿಕ್ಟ್‌ನ ಅಸಿಸ್ಟಂಟ್ ಗವರ್ನರ್ ವಿ.ಕೆ. ಗುರುಮಠ ಹಾಗೂ ಮಾಜಿ ಅಸಿಸ್ಟಂಟ್ ಗವರ್ನರ್ ಎಂ.ಸಿ. ಐಲಿ ಮಾತನಾಡಿ, ರೋಟರಿ ಸಂಸ್ಥೆ ಸಾರ್ವಜನಿಕರಿಗಾಗಿ ಹಮ್ಮಿಕೊಂಡ ಸೇವಾ ಕಾರ್ಯಗಳ ಕುರಿತು ತಿಳಿಸಿದರು.

ಐಡಿಬಿಐ ಬ್ಯಾಂಕ್ ಗದಗ ಬ್ರಾಂಚ್ ಮ್ಯಾನೇಜರ್ ವಿಕ್ರಂ ಕಡೆಮನೆ ಅವರು, ತಮ್ಮ ಬ್ಯಾಂಕ್‌ ಕೂಡ ಸಾರ್ವಜನಿಕರ ಹಿತಕ್ಕೆ, ಸಾಮಾಜಿಕ ಕಾರ್ಯಗಳಿಗೆ ಸಹಕಾರ ನೀಡುತ್ತಿದೆ. 150 ಲೀಟರ್‌ ಸಾಮರ್ಥ್ಯದ ₹85 ಸಾವಿರಕ್ಕೆ ಒಂದು ಘಟಕದಂತೆ ಎರಡೂ ಶಾಲೆಗೆ ತಲಾ ಒಂದೊಂದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೀಡಲಾಗಿದೆ ಎಂದರು.

ಬ್ಯಾಂಕಿನ ಪ್ರಾದೇಶಿಕ ಅಧಿಕಾರಿ ರಮೇಶ್, ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷ ಚೇತನ್ ಅಂಗಡಿ ಮಾತನಾಡಿದರು. ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ರಾಧಾ ಜಾಲರಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಯಲಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಪ್ರಗತಿ ಗುಡ್ಡದ, ಎಸ್‌ಡಿಎಂಸಿ ಅಧ್ಯಕ್ಷ ಎನ್.ಎಫ್. ಪಾಟೀಲ, ರಾಜು ಉಮನಾಬಾದಿ, ಡಾ. ಪ್ರಭು ಗಂಜಿಹಾಳ, ಸುರೇಶ ಅಬ್ಬಿಗೇರಿ, ವಿಜಯಕುಮಾರ ಹಿರೇಮಠ, ಮಂಜುನಾಥ ಕಬಾಡಿ, ಸುನೀಲ ಮಿರಜಕರ ಹಾಗೂ ರೋಟರಿ ಸದಸ್ಯರು, ಶಾಲಾ ಶಿಕ್ಷಕರು ಇದ್ದರು.