ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಸನಾತನ ಧರ್ಮದಲ್ಲಿ ಗೋವನ್ನು ತಾಯಿಗೆ ಹೋಲಿಸಿದ್ದಾರೆ. ಗೋ ಮಾತೆಯನ್ನು ಪೂಜೆಸಿದರೆ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ. ಗೋವಿನ ಮಹತ್ವ ಬಗ್ಗೆ ನಮ್ಮ ಧರ್ಮಗಳು ಸಾರಿ ಹೇಳುತ್ತವೆ. ಗೋವಿನಲ್ಲಿ ದೇವತೆಗಳು ವಾಸವಾಗಿದ್ದಾರೆ. ಗೋ ದಾನ ಬಹಳ ಶ್ರೇಷ್ಠ ವಾದುದು ಎಂದು ಕಾರ್ಕಳದ ಸಿಎ ಕಮಲಾಕ್ಷ ಕಾಮತ್ ಹೇಳಿದರು.ಅವರು ಬಜಗೋಳಿಯಲ್ಲಿ ಡಾ. ರವೀಂದ್ರ ಶೆಟ್ಟಿ ಆಚರಿಸುತ್ತಿರುವ ಗೋ ದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಡಾ.ಸುಧಾಕರ್ ಶೆಟ್ಟಿ ಮಾತನಾಡಿ, ದನ ಕಾಯುವವನನ್ನು ಧನ ಕಾಯುತ್ತದೆ ಎಂಬ ಮಾತಿದೆ. ಗೋ ಮಾತೆ ಎಲ್ಲ ಕಾಲಗಳಲ್ಲೂ ಶ್ರೇಷ್ಠತೆಯನ್ನು ಪಡೆಯುತ್ತಾಳೆ. ಗೋವನ್ನು ಪೂಜೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.ಖ್ಯಾತ ವಿದ್ವಾನ್ ದಾಮೋದರ ಶರ್ಮಾ ಮಾತನಾಡಿ, ಗೋ ಮಾತೆ ತನ್ನನ್ನು ಸಾಕಿದವರಿಗೆ ಮಾತ್ರ ಅಲ್ಲ. ತನ್ನನ್ನು ಕಡಿಯುವ ದೂರ್ತರಿಗೂ ಹಾಲು ಕೊಡುವ ಕಾಮಧೇನು. ಅನೇಕ ಪುಣ್ಯಾತ್ಮರನ್ನು ಒಳಗೊಂಡ ಈ ಪುಣ್ಯ ಭೂಮಿಯಲ್ಲಿ ರವೀಂದ್ರ ಶೆಟ್ಟಿಯವರು ಕೂಡ ಜನ್ಮ ತಳೆದು ಸಮಾಜಕ್ಕೆ ಒಳಿತು ಮಾಡಲು ಹೊರಟಿದ್ದಾರೆ. ಇದು ಸಮಾಜಕ್ಕೆ ಸಂತಸ ತರುವ ವಿಚಾರ ಎಂದು ಹೇಳಿದರು.ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಯೋಜನಾ ನಿರ್ದೇಶಕ ಅನಿಲ್ ಕುಮಾರ್, ಉದ್ಯಮಿ ಹಾಗೂ ಸಮಾಜ ಸೇವಕ ಬೋಳ ಪ್ರಶಾಂತ್ ಕಾಮತ್ ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶ ಸಮಿತಿ ಅಧ್ಯಕ್ಷ ಗಣಪತಿ ಹೆಗ್ಡೆ ವಹಿಸಿದ್ದರು.ಕಾರ್ಯಕ್ರಮದ ರುವಾರಿ ಡಾ.ರವೀಂದ್ರ ಶೆಟ್ಟಿ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ. ಉತ್ತಮ ಕಾರ್ಯ ಮಾಡುವ ಜೊತೆಗೆ ಉತ್ತಮ ಕಾರ್ಯವನ್ನು ಮಾಡುವವರಿಗೆ ಕೂಡ ಸಹಕಾರ ನೀಡಬೇಕು. ರಾಜಕೀಯವಾಗಿ, ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಹಿಂದುತ್ವದ ಪರವಾಗಿ ಸಹಕಾರ ನೀಡುವವರಿಗೆ ಮಾತ್ರ ನಾವು ರಾಜಕೀಯ ಬೆಂಬಲ ನೀಡಬೇಕು. ಪ್ರಸ್ತುತ ಸಮಾಜದಲ್ಲಿರುವ ಸಮಸ್ಯೆಗಳನ್ನು ಸರಿ ಪಡಿಸಲು ಎಲ್ಲರೂ ಧ್ವನಿ ಎತ್ತಬೇಕು. ಆಗ ಮಾತ್ರ ಹಿಂದೂ ಸಮಾಜ ಉಳಿಯಲು ಸಾಧ್ಯವಿದೆ ಎಂದರು.ಈ ಸಂದರ್ಭ ವೀರಾಂಜಯ್ ಹೆಗ್ಡೆ ಹಾಗೂ ರಾಜೇಂದ್ರ ಚಕ್ಕೇರಾ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ನಂದ ಕುಮಾರ ಹೆಗ್ಡೆ ಅಜೆಕಾರು, ಕರ್ನಾಟಕ ಜೈನ ವಿವಿಧೊದ್ದೇಶ ಸಹಕಾರ ಸಂಘ ಅಧ್ಯಕ್ಷ ನೇಮಿರಾಜ ಅರಿಗ, ಸತ್ಯೇಂದ್ರ ಭಟ್ ಕಾರ್ಕಳ, ಕೂಷ್ಮಾಂಡಿನಿ ಬಳಗದ ಮಹಾವೀರ್ ಜೈನ್, ಸುಲ್ಕೆರಿ ಶ್ರೀ ರಾಮ ಶಾಲೆಯ ಸಂಚಾಲಕ ಗಣೇಶ್ ಹೆಗ್ಡೆ, ಅಮ್ಮ ಚಾರಿಟೇಬಲ್ ಟ್ರಸ್ಟ್‌ನ ಅವಿನಾಶ್ ಶೆಟ್ಟಿ, ಗುರುಪ್ರಸಾದ್ ನಾರಾವಿ, ಸುಂದರ ಹೊಸ್ಮಾರು, ಬಜರಂಗದಳದ ಜಿಲ್ಲಾ ಸಂಚಾಲಕ ಚೇತನ್ ಪೇರಲ್ಕೆ, ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.ಶ್ರೇಯಾ ರವೀಂದ್ರ ಶೆಟ್ಟಿ ಪ್ರಾರ್ಥನೆ ಮಾಡಿದರು. ಡಾ.ಸ್ನೇಹ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಸತೀಶ್ ಕುಲಾಲ್ ಹೊಸ್ಮಾರ್ ಪ್ರಸ್ತಾವನೆಗೈದರು. ಶ್ರೇಯಾ ರವೀಂದ್ರ ಶೆಟ್ಟಿ ವಂದಿಸಿದರು.ನಾಗೇಶ್ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಯತೀಶ್ ಶೆಟ್ಟಿ, ಅಶೋಕ್ ಎಂ.ಕೆ., ಶ್ರೇಯಾಂಕ್ ಆರ್. ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.