ಸಾರಾಂಶ
ಕೇರಳಾಪುರದ ನಿವಾಸಿಯಾದ ಹಾಗೂ ಕೇರಳಾಪುರ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರೂ ಆದ ಡಿ ಮಂಜುನಾಥ್ ಅವರು ಕೇರಳಾಪುರದಲ್ಲಿ ಜನತಾ ಬಡಾವಣೆಗೆ ಹೊಸದಾಗಿ ಮಂಜೂರಾಗಿರುವ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ೩೦*೪೦ ಅಳತೆಯ ಸುಮಾರು ೩೦ ಲಕ್ಷ ಬೆಲೆಬಾಳುವ ನಿವೇಶನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೆಸರಿಗೆ ದಾನ ನೀಡಿದ್ದಾರೆ.
ಬಸವಾಪಟ್ಟಣ: ಕೇರಳಾಫುರದ ನಿವಾಸಿಯಾದ ಹಾಗೂ ಕೇರಳಾಪುರ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರೂ ಆದ ಡಿ ಮಂಜುನಾಥ್ ಅವರು ಕೇರಳಾಪುರದಲ್ಲಿ ಜನತಾ ಬಡಾವಣೆಗೆ ಹೊಸದಾಗಿ ಮಂಜೂರಾಗಿರುವ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ೩೦*೪೦ ಅಳತೆಯ ಸುಮಾರು ೩೦ ಲಕ್ಷ ಬೆಲೆಬಾಳುವ ನಿವೇಶನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೆಸರಿಗೆ ದಾನ ನೀಡಿದ್ದಾರೆ.
ಭೂದಾನ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ವೆಂಕಟೇಶ್‌ರವರು ಸ್ವೀಕರಿಸಿ ಮಂಜುನಾಥ್‌ರವರ ಕಾರ್ಯ ಶ್ಲಾಘನೀಯವಾದುದು ಮತ್ತು ಮಾದರಿ ಎಂದು ತಿಳಿಸಿದರು. ಅಲ್ಲದೆ ಕೇರಳಾಪುರ ಗ್ರಾಮ ಪಂಚಾಯ್ತಿ ಗ್ರಾಮಸಭೆಯಲ್ಲಿ ಭೂಮಿದಾನ ನೀಡಿದ ಮಂಜುನಾಥ್‌ರವರನ್ನು ಸನ್ಮಾನಿಸಲಾಯಿತು.ಇದೇ ವೇಳೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಗಂಗಾಮಣಿ, ಉಪಾಧ್ಯಕ್ಷರಾದ ಚಂದ್ರು, ಸದಸ್ಯರಾದ ಕೆ.ಎಂ ಶಿವಣ್ಣ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲೋಕೇಶ್, ಇತರೆ ಸದಸ್ಯರು ಹಾಜರಿದ್ದರು.