ಸ್ನೇಹ ಬಳಗದಿಂದ ಸರ್ಕಾರಿ ಶಾಲೆಗೆ ವಾಹನ ಕೊಡುಗೆ

| Published : Feb 10 2024, 01:49 AM IST

ಸಾರಾಂಶ

ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಾಲೆಗೆ ಬರುವುದಕ್ಕೆ ಅತ್ಯಗತ್ಯವಾಗಿದ್ದ ಈ ಶಾಲಾ ವಾಹನವನ್ನು ಶುಕ್ರವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಾಲೆಯ ಮುಖ್ಯೋಪಾಧ್ಯರಿಗೆ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿರುವ ಇಲ್ಲಿನ ಕರ್ವಾಲು ಗ್ರಾಮದ ಶ್ರೀ ವಿಷ್ಣುಮೂರ್ತಿ ಸ್ನೇಹ ಬಳಗ ವತಿಯಿಂದ ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಉಪಯೋಗಕ್ಕಾಗಿ ಶಾಲಾ ವಾಹನವನ್ನು ಒದಗಿಸಲಾಗಿದೆ.

ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಾಲೆಗೆ ಬರುವುದಕ್ಕೆ ಅತ್ಯಗತ್ಯವಾಗಿದ್ದ ಈ ಶಾಲಾ ವಾಹನವನ್ನು ಶುಕ್ರವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಾಲೆಯ ಮುಖ್ಯೋಪಾಧ್ಯರಿಗೆ ಹಸ್ತಾಂತರಿಸಿದರು.

ನಂತರ ಮಾತನಾಡಿದ ಶಾಸಕರು, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಕೊರತೆಯಾಗುವ ಇಂತಹ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ದಾನಿಗಳ ಅವಶ್ಯಕತೆ ಇದೆ. ಈ ಸಮಾಜಮುಖಿ ಕಾರ್ಯಕ್ಕೆ ಮುಂದಾದ ಕರ್ವಾಲು ಶ್ರೀ ವಿಷ್ಣುಮೂರ್ತಿ ಸ್ನೇಹ ಬಳಗವು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಕರ್ವಾಲು ಶ್ರೀ ವಿಷ್ಣುಮೂರ್ತಿ ಸ್ನೇಹ ಬಳಗದ ಅಧ್ಯಕ್ಷ ಶ್ರೀಕಾಂತ್ ನಾಯಕ್, ಬೆಳ್ಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಶಿಧರ್ ವಾಗ್ಲೆ, ಮುಖ್ಯೋಪಾಧ್ಯಾಯರಾದ ಸವಿತಾ, ವಾಹನ ದಾನಿಗಳಾದ ಕೃಷ್ಣ ಕುಲಾಲ್ ವರ್ವಾಡಿ, ಸುಮನ ಸತೀಶ್ ಆಚಾರ್ಯ ಮರ್ಣೆ, ಗಣಪತಿ ಪಾಟ್ಕರ್, ಭಜನಾ ಮಂಡಳಿಯ ಅಧ್ಯಕ್ಷರಾದ ನಾಗರಾಜ್ ಆಚಾರ್ಯ, ಗುರುಕೃಪಾ ರಾವ್, ಸಂತೋಷ್, ರಾಮಚಂದ್ರ ನಾಯಕ್ ಮಣಿಪಾಲ, ಗೀತಾ ಸೇರಿಗಾರ್ ಸಂಘದ ಸದಸ್ಯರುಗಳಾದ ಮಹೇಂದ್ರ ಪ್ರಭು, ರಾಘವೇಂದ್ರ ಆಚಾರ್ಯ, ವಿಘ್ನೇಶ್ ನಾಯಕ್, ರೋಹಿತ್ ಪ್ರಭು, ರಾಘವೇಂದ್ರ, ಮಂಜ, ದಿನೇಶ್ ಪ್ರಭು, ಸುಬ್ಬು ಮತ್ತು ಶಿಕ್ಷಕವೃಂದ ಉಪಸ್ಥಿತರಿದ್ದರು.