ಸಾರಾಂಶ
ಶೃಂಗೇರಿ ಮಠದಿಂದ ₹7.50 ಲಕ್ಷ ರು. ಚೆಕ್ ಶ್ರೀ ಶಂಕರ ಭಾರತಿ ಟ್ರಸ್ಟ್ ಅಧ್ಯಕ್ಷಗೆ ಹಸ್ತಾಂತರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಶೃಂಗೇರಿ ಮಠದಿಂದ ಎನ್.ಆರ್.ಪುರ ಅಗ್ರಹಾರದ ಗಾಯಿತ್ರಿ ದೇವಿ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಿರುವ ಶ್ರೀ ಶಂಕರ ಭಾರತೀ ಸಭಾ ಭವನಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಶೃಂಗೇರಿ ಗುರುಭವನದಲ್ಲಿ ₹7.50 ಲಕ್ಷ ರುಪಾಯಿಗಳ ಚೆಕ್ ನ್ನು ಶ್ರೀ ಶಂಕರ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ರವಿಶಂಕರ್ ಅವರಿಗೆ ಹಸ್ತಾಂತರಿಸಿದರು.
ಈ ಹಿಂದೆ ಅಗ್ರಹಾರದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಗಾಯಿತ್ರಿ ದೇವಿ ಪ್ರತಿಷ್ಟಾಪನೆ, ಕುಂಬಾಭಿಷೇಕ ಹಾಗೂ ಶ್ರೀ ಶಂಕರ ಭಾರತಿ ಸಭಾ ಭವನದ ಶಂಕುಸ್ಥಾಪನೆ ನೇರವೇರಿಸಿದ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳು ತಮ್ಮ ಅನುಗ್ರಹ ಭಾಷಣದಲ್ಲಿ ಶೃಂಗೇರಿ ಶಾರದಾ ಪೀಠದಿಂದ ಶಾರದ ಪ್ರಸಾದ ರೂಪದಲ್ಲಿ ಶ್ರೀ ಶಂಕರ ಭಾರತಿ ಸಭಾ ಭವನಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದರು.ಅದರಂತೆ ಶೃಂಗೇರಿ ಮಠದ ಗುರುಭವನದಲ್ಲಿ ₹7.50 ಲಕ್ಷ ರು. ಚೆಕ್ ನ್ನು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಶ್ರೀ ಶಂಕರ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ರವಿಶಂಕರ್, ಕಾರ್ಯದರ್ಶಿ ಎಸ್.ಎನ್.ಅನಂತಪದ್ಮನಾಭ, ತಾಲೂಕು ಬ್ರಾಹ್ಮಣ ಮಹಾ ಸಬಾದ ಅಧ್ಯಕ್ಷ ಕೊನೋಡಿ ಗಣೇಶ್, ಉಪಾಧ್ಯಕ್ಷೆ ಅನ್ನಪೂರ್ಣ ಗೋಪಾಲಕೃಷ್ಣ, ಕಾರ್ಯದರ್ಶಿ ಎಸ್.ಎನ್.ಸುರೇಶ, ಗೌರವಾಧ್ಯಕ್ಷ ಹಾಗೂ ಟ್ರಸ್ಟಿ ಬಿ.ಕೆ.ನಾರಾಯಣಸ್ವಾಮಿ, ಖಜಾಂಚಿ ಅಭಿಷೇಕ್, ಸದಸ್ಯರಾದ ನಾಗಲಕ್ಷ್ಮಿ,ಗೀತಾ, ಶ್ರೀವಲ್ಲಿ, ಟ್ರಸ್ಟ್ ಸದಸ್ಯ ರಮೇಶ ಚಂದ್ರ ಶರ್ಮಾ ಇದ್ದರು.