ಉಡುಪಿ ಜಿಲ್ಲಾಸ್ಪತ್ರೆಗೆ ದಾನಿಗಳಿಂದ ಪರಿಕರ ಕೊಡುಗೆ

| Published : Apr 19 2024, 01:00 AM IST

ಉಡುಪಿ ಜಿಲ್ಲಾಸ್ಪತ್ರೆಗೆ ದಾನಿಗಳಿಂದ ಪರಿಕರ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ನಿವಾಸಿಯಾದ ಗುರುಪ್ರಸಾದ್ ಭಟ್ ಅವರು ಜಿಲ್ಲಾ ಆಸ್ಪತ್ರೆಯ ರೋಗಿಗಳ ವಾರ್ಡಗಳಿಗೆ 5 ಸಿಲಿಂಗ್ ಫ್ಯಾನ್ ಕೊಡುಗೆ ನೀಡಿದರು. ದಾನಿಗಳಾದ ವೆಂಕಟೇಶ್ ರಾವ್ ಇವರು ವೀಲ್‌ಚೇರ್‌ ಹಾಗೂ ಹಾಸಿಗೆ ಹಿಡಿದ ರೋಗಿಗಳಿಗೆ ಬೇಕಾಗುವ ಪರಿಕರಗಳನ್ನು ಕೊಡುಗೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಅಜ್ಜರಕಾಡಿನ ಉಡುಪಿ ಜಿಲ್ಲಾ ಆಸ್ಪತ್ರೆಗೆ ಅಗತ್ಯವಿರುವ ಪರಿಕರಗಳನ್ನು ಜಿಲ್ಲಾ ನಾಗರಿಕ ಸಮಿತಿಯ ನೇತೃತ್ವದಲ್ಲಿ ದಾನಿಗಳ ಮೂಲಕ ಕೊಡುಗೆಯಾಗಿ ಜಿಲ್ಲಾ ಸರ್ಜನ್ ಡಾ. ಎಚ್.ಅಶೋಕ್ ಅವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಉಡುಪಿ ನಿವಾಸಿಯಾದ ಗುರುಪ್ರಸಾದ್ ಭಟ್ ಅವರು ಜಿಲ್ಲಾ ಆಸ್ಪತ್ರೆಯ ರೋಗಿಗಳ ವಾರ್ಡಗಳಿಗೆ 5 ಸಿಲಿಂಗ್ ಫ್ಯಾನ್ ಕೊಡುಗೆ ನೀಡಿದರು.

ದಾನಿಗಳಾದ ವೆಂಕಟೇಶ್ ರಾವ್ ಇವರು ವೀಲ್‌ಚೇರ್‌ ಹಾಗೂ ಹಾಸಿಗೆ ಹಿಡಿದ ರೋಗಿಗಳಿಗೆ ಬೇಕಾಗುವ ಪರಿಕರಗಳನ್ನು ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಎಚ್.ಅಶೋಕ್ ಮಾತನಾಡಿ, ಉಳ್ಳವರು ಅಶಕ್ತರಿಗೆ ಮಾಡುವ ದಾನ ದೇಗುಲಕ್ಕೆ ಕೊಡುಗೆ ಕೊಟ್ಟಷ್ಟೇ ಪುಣ್ಯದ ಕೆಲಸವಾಗಿದೆ. ನಮ್ಮ ಜಿಲ್ಲಾ ಆಸ್ಪತ್ರೆಯಲ್ಲಿ ಈ ತರಹದ ಪುಣ್ಯ ಕೆಲಸಗಳಿಂದ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಸಿಗುವಂತೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿಯಾದ ಡಾ.ವಾಸುದೇವ್ ಮಾತನಾಡಿ, ಕೊಡುಗೈ ದಾನಿಗಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಜ್ಞ ಸರ್ಜನ್ ಡಾ.ಸುಜಿತ್ ಹಾಗೂ ಜಿಲ್ಲಾ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು.