ಸಾರಾಂಶ
ಮಾತೃಭಾಷೆ ಎಂಬುದು ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಸಂಕೇತವಾಗಬೇಕು, ಇಚ್ಛಾಶಕ್ತಿ ಕೊರತೆ ಕಾರಣ ಕನ್ನಡ ಭಾಷೆಯ ಮೇಲೆ ಕಾರ್ಮೋಡಗಳು ಆವರಿಸಿದ್ದು, ಅಭಿಮಾನ ಶೂನ್ಯರಾಗದೇ ಇನ್ನಾದರೂ ನಾವೆಲ್ಲರೂ ಸೇರಿ ಕನ್ನಡದ ಹಿಂದಿನ ಗತ ವೈಭವ ಮರಳಿಸಲು ಪ್ರಯತ್ನಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಕರೆ ನೀಡಿದರು.
ಬ್ಯಾಡಗಿ: ಮಾತೃಭಾಷೆ ಎಂಬುದು ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಸಂಕೇತವಾಗಬೇಕು, ಇಚ್ಛಾಶಕ್ತಿ ಕೊರತೆ ಕಾರಣ ಕನ್ನಡ ಭಾಷೆಯ ಮೇಲೆ ಕಾರ್ಮೋಡಗಳು ಆವರಿಸಿದ್ದು, ಅಭಿಮಾನ ಶೂನ್ಯರಾಗದೇ ಇನ್ನಾದರೂ ನಾವೆಲ್ಲರೂ ಸೇರಿ ಕನ್ನಡದ ಹಿಂದಿನ ಗತ ವೈಭವ ಮರಳಿಸಲು ಪ್ರಯತ್ನಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಕರೆ ನೀಡಿದರು.
ಕನ್ನಡ ಜಾಗೃತಿ ರಥಯಾತ್ರೆ ಸ್ವಾಗತ ಕೋರಿ ಬಳಿಕ ಮಾತನಾಡಿದ ಅವರು, ಕನ್ನಡ, ಇದೊಂದು ಭಾಷೆ ಎನ್ನುವುದಕ್ಕಿಂತ 2 ಸಾವಿರ ವರ್ಷಗಳಿಂದ ಮುಂದುವರೆದು ಬಂದಿರುವ ಸಂಸ್ಕೃತಿ ಆದರೆ ಕನ್ನಡ ಭಾಷೆ, ಕನ್ನಡಿಗರು ಹಾಗೂ ಕರ್ನಾಟಕ ಈ 3 ಆತಂಕದಲ್ಲಿದ್ದು ಕನ್ನಡದ ಅಸ್ಮಿತೆ ಉಳಿಸಬೇಕಾಗಿದೆ ಎಂದರು.ರಥಯಾತ್ರೆಗೆ ಸ್ವಾಗತ: ಮೊದಲು ಕದರಮಂಡಲಗಿ ಗ್ರಾಮಕ್ಕೆ ಆಗಮಿಸಿದ ಕನ್ನಡ ಜಾಗೃತಿ ರಥಯಾತ್ರೆಯು ಗ್ರಾಪಂ.ಅಧ್ಯಕ್ಷೆ ಶಿವಗಂಗಮ್ಮ ಕಾಯಕದ, ಉಪಾಧ್ಯಕ್ಷೆ ತುಳಸಮ್ಮ ಕಾಳೇರ, ಪಂಚಾಯತಿಯ ಸರ್ವ ಸದಸ್ಯರು ತಹಶೀಲ್ದಾರ ಎಫ್.ಎ.ಸೋಮನಕಟ್ಟಿ, ತಾಲೂಕ ಕಸಾಪ ಅಧ್ಯಕ್ಷ ಬಿ.ಎಂ.ಜಗಾಪೂರ. ಬಿಇಒ ಎಸ್.ಜಿ.ಕೋಟಿ ಸೇರಿದಂತೆ ತಾಲೂಕಾಧಿಕಾರಿಗಳು ಸ್ವಾಗತಿಸಿದರು.
ಬಳಿಕ ಬ್ಯಾಡಗಿ ಪಟ್ಟಣಕ್ಕೆ ಆಗಮಿಸಿದ ರಥಯಾತ್ರೆಯನ್ನು ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಉಪಾಧ್ಯಕ್ಷ ಸುಭಾಸ್ ಮಾಳಗಿ, ಮುಖ್ಯಾಧಿಕಾರಿ ವಿನಯಕುಮಾರ ಸೇರಿದಂತೆ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ, ಕದಳಿ ವೇದಿಕೆಯ ಸದಸ್ಯರು, ಕಸಾಪ ಸದಸ್ಯರು, ವಿವಿಧ ಸಂಘಟನೆಯವರು ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು, ಮೊಟೇಬೆನ್ನೂರಗೆ ಆಗಮಿಸಿದ ರಥಯಾತ್ರೆಯನ್ನು ಗ್ರಾಮಪಂಚಾಯತಿಯ ಸರ್ವ ಸದಸ್ಯರು, ಗ್ರಾಮದ ಮುಖಂಡರು, ಶಿಕ್ಷಕರು ವಿದ್ಯರ್ಥಿಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡು ಬಳಿಕ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.