ಬಹಳ ವರ್ಷಗಳಿಂದ ಪೋಲಿಯೋ ಲಸಿಕೆಯನ್ನು ಹಾಕಲಾಗುತ್ತಿದ್ದು ಪೋಲಿಯೋ ನಿಮೂರ್ಲನೆ ಹಂತಕ್ಕೆ ಬಂದಿದ್ದು ಸಂರ್ಪೂಣವಾಗಿ ನಿಮೂರ್ಲನೆ ಮಾಡಲು ಎಲ್ಲರೂ ಕೈಜೋಡಿಸುವಂತೆ ಡಾ.ರಾಜೇಶ್ ತಿಳಿಸಿದರು. ಉಚಿತ ಸಿಗುವುದೆಂದು ಉಡಾಫೆ ಮಾಡದೆ ಮಕ್ಕಳಿಗೆ ಹಾಕಿಸಲು ಮುಂದಾಗಬೇಕು. ಬಸವಾಪಟ್ಟಣ ಕೇಂದ್ರದಲ್ಲಿ ಒಟ್ಟು ೧೬ ಬೂತ್ ಮೂಲಕ ೫ ವೈದ್ಯಾಧಿಕಾರಿಗಳಿಗೆ ಮೇಲ್ವಿಚಾರಣೆಯಲ್ಲಿ ೬೪ ಸಿಬ್ಬಂದಿ ಪೋಲಿಯೋ ಲಸಿಕೆ ಹಾಕಲು ಕ್ರಮಕೈಗೊಳ್ಳಲಾಗಿದೆ. ಬಸವಾಪಟ್ಟಣ ಗ್ರಾಮಪಂಚಾಯ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು ೧೮೨೪ ಮಕ್ಕಳಿಗೆ ಲಸಿಕೆ ಹಾಕಲು ಸಮೀಕ್ಷೆ ನಡೆಸಲಾಗಿದೆ ಎಂದು ಡಾ.ರಾಜೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ರಾಜ್ಯದ ಎಲ್ಲೆಡೆಯಂತೆ ಭಾನುವಾರದಂದು ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಪಲ್ಸ್ ಪೋಲಿಯೋ ಉಚಿತ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಅರೋಗ್ಯಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ರಾಜೇಶ್, ಪೋಲಿಯೋ ಎಂಬುಂದು ಮಾರಕವಾದದು. ಇದು ಒಮ್ಮೆ ಬಂದರೆ ಇದರ ಪರಿಣಾಮವನ್ನು ಸರಿಪಡಿಸುವುದು ಚಿಕಿತ್ಸೆಯಿಂದ ಅಸಾಧ್ಯ. ಆದ್ದರಿಂದ ಪೋಲಿಯೋ ಬರುವ ಮುನ್ನವೆ ಜಾಗೃತರಾಗಿ ಲಸಿಕೆಯನ್ನು ಮಕ್ಕಳಿಗೆ ಕೊಡಿಸಿದಲ್ಲಿ ಪೋಲಿಯೋ ಮುಕ್ತರಾನ್ನಾಗಿಸಬಹುದು. ಬಹಳ ವರ್ಷಗಳಿಂದ ಪೋಲಿಯೋ ಲಸಿಕೆಯನ್ನು ಹಾಕಲಾಗುತ್ತಿದ್ದು ಪೋಲಿಯೋ ನಿಮೂರ್ಲನೆ ಹಂತಕ್ಕೆ ಬಂದಿದ್ದು ಸಂರ್ಪೂಣವಾಗಿ ನಿಮೂರ್ಲನೆ ಮಾಡಲು ಎಲ್ಲರೂ ಕೈಜೋಡಿಸುವಂತೆ ಡಾ.ರಾಜೇಶ್ ತಿಳಿಸಿದರು. ಉಚಿತ ಸಿಗುವುದೆಂದು ಉಡಾಫೆ ಮಾಡದೆ ಮಕ್ಕಳಿಗೆ ಹಾಕಿಸಲು ಮುಂದಾಗಬೇಕು. ಬಸವಾಪಟ್ಟಣ ಕೇಂದ್ರದಲ್ಲಿ ಒಟ್ಟು ೧೬ ಬೂತ್ ಮೂಲಕ ೫ ವೈದ್ಯಾಧಿಕಾರಿಗಳಿಗೆ ಮೇಲ್ವಿಚಾರಣೆಯಲ್ಲಿ ೬೪ ಸಿಬ್ಬಂದಿ ಪೋಲಿಯೋ ಲಸಿಕೆ ಹಾಕಲು ಕ್ರಮಕೈಗೊಳ್ಳಲಾಗಿದೆ. ಬಸವಾಪಟ್ಟಣ ಗ್ರಾಮಪಂಚಾಯ್ತಿ ಪ್ರಾಥಮಿಕ ಅರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು ೧೮೨೪ ಮಕ್ಕಳಿಗೆ ಲಸಿಕೆ ಹಾಕಲು ಸಮೀಕ್ಷೆ ನಡೆಸಲಾಗಿದೆ ಎಂದು ಡಾ.ರಾಜೇಶ್ ತಿಳಿಸಿದರು.

ಇದೇ ವೇಳೆ ಬಸವಾಪಟ್ಟಣ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ರಾಧಶೇಖರ್ ಮಾತನಾಡಿ, ಪೋಲಿಯೋ ಮುಕ್ತ ರಾಷ್ಟ್ರ ಮಾಡಲು ಎಲ್ಲರೂ ಸಹಕರಿಸುವಂತೆ ತಿಳಿಸಿದರು. ಇದೇ ವೇಳೆ ಗ್ರಾಮ ಅರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಗಣೇಶ್ ಬಿ.ಜಿ ಅಂಗನವಾಡಿ ಕಾರ್ಯಕರ್ತೆಯರು ಅಲ್ಲದೆ ಪ್ರಾಥಮಿಕ ಅರೋಗ್ಯ ಕೇಂದ್ರದ ಹಿರಿಯ ಶೂಶ್ರೂಷಕಿಯರಾದ ಪದ್ಮ, ಸವಿತಾ, ಆರೋಗ್ಯ ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.