ಸಾರಾಂಶ
ಹುಬ್ಬಳ್ಳಿಯ ವಿಶ್ವಕರ್ಮ ಸಮಾಜ ಬಾಂಧವರು ವಿಶ್ವಕರ್ಮ ಸಾಹಿತ್ಯ ಗ್ರಂಥಾಲಯವನ್ನು ಆರಂಭಿಸಿರುವುದು ಅವಳಿ ನಗರಗಳ ಈ ಸಮಾಜದ ಸಾಮಾನ್ಯ ಓದುಗರು, ಸಾಹಿತ್ಯ ಆಸಕ್ತರು, ಚಿಂತಕರು ಹಾಗೂ ಲೇಖಕರ ಹೆಚ್ಚಿನ ಅಭ್ಯಾಸಕ್ಕೆ ಅನುಕೂಲವಾಗಲಿದೆ.
ಹುಬ್ಬಳ್ಳಿ:
ಯಾವುದೇ ಸಮಾಜಕ್ಕೆ ಸಾಹಿತ್ಯವೇ ಶಕ್ತಿ. ಸಮಾಜವು ತನ್ನ ಸಾಹಿತ್ಯವನ್ನು ಮರೆತರೆ ತನ್ನ ಅಸ್ಮಿತೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಸಮಾಜ ಬಾಂಧವರು ಸಾಹಿತ್ಯ ಅಧ್ಯಯನ ಕಡೆಗಣಿಸಬಾರದು ಎಂದು ಕವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಪಿ. ಈರಣ್ಣ ಹೇಳಿದರು.ಇಲ್ಲಿನ ಅಕ್ಕಸಾಲಿಗರ ಓಣಿಯ ಶ್ರೀಕಾಳಿಕಾ ಸಮುದಾಯ ಭವನದಲ್ಲಿ ವಿಶ್ವಕರ್ಮ ಸಾಹಿತ್ಯ ಕೃತಿಗಳ "ಶ್ರೀಕಾಳಿಕಾ ಗ್ರಂಥಾಲಯ " ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹುಬ್ಬಳ್ಳಿಯ ವಿಶ್ವಕರ್ಮ ಸಮಾಜ ಬಾಂಧವರು ವಿಶ್ವಕರ್ಮ ಸಾಹಿತ್ಯ ಗ್ರಂಥಾಲಯವನ್ನು ಆರಂಭಿಸಿರುವುದು ಅವಳಿ ನಗರಗಳ ಈ ಸಮಾಜದ ಸಾಮಾನ್ಯ ಓದುಗರು, ಸಾಹಿತ್ಯ ಆಸಕ್ತರು, ಚಿಂತಕರು ಹಾಗೂ ಲೇಖಕರ ಹೆಚ್ಚಿನ ಅಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.ಗ್ರಂಥಾಲಯ ಉದ್ಘಾಟಿಸಿದ ಶಂಕರಾಚಾರ್ಯ ಕಡ್ಲಾಸ್ಕರ್ ಮಾತನಾಡಿ, ವೈಶ್ವಕರ್ಮಣ ಸಾಹಿತ್ಯದ ಮೇಲೆ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಶ್ವಕರ್ಮ ಸಮಾಜದ ಮಹತ್ವದ 500ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ಈ ಗ್ರಂಥಾಲಯದಲ್ಲಿ ಸಂಗ್ರಹಿಸಿರುವುದು ವಿಶೇಷವಾಗಿದೆ. ಸಾಮಾನ್ಯ ಓದುಗರಿಗೂ ಸಹ ವಿಶ್ವಕರ್ಮ ಸಾಹಿತ್ಯ ಜ್ಞಾನಾರ್ಜನೆಗೆ ಈ ಗ್ರಂಥಾಲಯ ಅನುಕೂಲವಾಗಲಿದೆ ಎಂದು ಹೇಳಿದರು.
ಹಳೆ ಹುಬ್ಬಳ್ಳಿಯ ಕಾಳಿಕಾ ಮಹಿಳಾ ಮಂಡಳದ ಅಧ್ಯಕ್ಷೆ ವೀಣಾ ಲಕ್ಕುಂಡಿ ಮತ್ತು ವಿಶ್ವಕರ್ಮ ಮಹಾಸಭಾದ ಮಹಿಳಾ ತಾಲೂಕು ಘಟಕದ ಅಧ್ಯಕ್ಷೆ ಭಾರತಿ ಆಚಾರ್ಯ ಮಾತನಾಡಿದರು. ಹುಬ್ಬಳ್ಳಿಯ ವಿಶ್ವಕರ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮನೋಹರ ಲಕ್ಕುಂಡಿ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮಲಾ ಶಿಲಾಕಾಂತ ಪತ್ತಾರ ಸೇರಿದಂತೆ ಹಲವರಿದ್ದರು. ಜ್ಯೋತಿ ಬೆಳ್ಳಿಗಟ್ಟಿ ಸಹೋದರಿಯರು ಪ್ರಾರ್ಥಿಸಿದರು. ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಸಂಚಾಲಕ ಭೀಮಸೇನ ಬಡಿಗೇರ ಸ್ವಾಗತಿಸಿದರು. ವರವಿ ಮೌನೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮೋಹನ ನರಗುಂದ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))