ಸಾರಾಂಶ
ಕುಕನೂರು ತಾಲೂಕು ಕೇಂದ್ರವಾದರೂ ಕ್ರೀಡಾಂಗಣ ಇಲ್ಲ. ಜನಪ್ರತಿನಿಧಿಗಳು ತಮ್ಮ ಭಾಷಣದಲ್ಲಿ ಮಾತ್ರ ಕ್ರೀಡಾಂಗಣದ ಭರವಸೆ ನೀಡಿದ್ದಾರೆಯೇ ಹೊರತೂ ಕಾರ್ಯನ್ಮುಖವಾಗಿಲ್ಲ ಎಂದು ತಾಲೂಕು ಕ್ರೀಡಾಂಗಣದ ಹೋರಾಟ ಸಮಿತಿಯ ಹನುಮಂತಪ್ಪ ಗುಡಿಮನಿ ಹೇಳಿದರು.
ಕುಕನೂರು: ಕುಕನೂರು ತಾಲೂಕು ಕೇಂದ್ರವಾದರೂ ಕ್ರೀಡಾಂಗಣ ಇಲ್ಲ. ಜನಪ್ರತಿನಿಧಿಗಳು ತಮ್ಮ ಭಾಷಣದಲ್ಲಿ ಮಾತ್ರ ಕ್ರೀಡಾಂಗಣದ ಭರವಸೆ ನೀಡಿದ್ದಾರೆಯೇ ಹೊರತೂ ಕಾರ್ಯನ್ಮುಖವಾಗಿಲ್ಲ ಎಂದು ತಾಲೂಕು ಕ್ರೀಡಾಂಗಣದ ಹೋರಾಟ ಸಮಿತಿಯ ಹನುಮಂತಪ್ಪ ಗುಡಿಮನಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳ ತಾಲೂಕು ಕ್ರೀಡಾಂಗಣ ಹೋರಾಟ ಸಮಿತಿ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿಗೆ ಒಂದು ಸುಸಜ್ಜಿತ ಕ್ರೀಡಾಂಗಣ ಅವಶ್ಯಕತೆ ಇದೆ. ನಮ್ಮ ತಾಲೂಕಿನಲ್ಲಿ ವಿದ್ಯಾರ್ಥಿಗಳು, ಯುವಕರು ಅತ್ಯುತ್ತಮ ಕ್ರೀಡಾ ಪ್ರತಿಭೆಗಳಿದ್ದಾರೆ. ನಮ್ಮ ವಿಧಾನಸಭಾ ಕ್ಷೇತ್ರದ ಒಂದು ಪಟ್ಟಣದಲ್ಲಿ ಕುಕನೂರು ಪಟ್ಟಣ ಜನಸಂಖ್ಯೆಯಲ್ಲಿಯೇ ಹೆಚ್ಚಿದೆ. ಆದರೆ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಭಾಗವಹಿಸಲು ದೈಹಿಕವಾಗಿ ಸಿದ್ಧತೆಗೊಳ್ಳಲು ತರಬೇತಿಗೆ ಮೈದಾನದ ಕೊರತೆ ಇದೆ. ಇದರಿಂದಾಗಿ ಪ್ರತಿಭೆಗಳ ಸಂಖ್ಯೆ, ಅವಕಾಶಗಳು ಕ್ಷೀಣಿಸುತ್ತಿವೆ. ಹಿರಿಯರು, ವೃದ್ಧರು, ಯುವಕರು, ಮಹಿಳೆಯರು ಹೀಗೆ ಹಲವಾರು ಜನತೆಗೆ ಕ್ರೀಡಾಂಗಣವಿದ್ದರೆ ವ್ಯಾಯಾಮ ಮಾಡಲು, ವಾಯುವಿಹಾರಕ್ಕೆ ಅನುಕೂಲವಾಗುತ್ತದೆ ಎಂದರು.ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಲು ನಮ್ಮ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಪ್ರಯತ್ನ ಮಾಡಬೇಕು ಎಂದರು.ಕ್ರೀಡಾಂಗಣ ಸಮಿತಿಯ ರಫೀ ಮಂಡಲಗೇರಿ, ರಾಘವೇಂದ್ರ ಕಾತರಕಿ, ರಸೂಲ್ ಬನ್ನಿಕಟ್ಟಿ, ಮುತ್ತಪ್ಪ ರಾಜೂರ, ಚಂದ್ರಶೇಖರ ಕಲ್ಮನಿ, ವೀರೇಶ್ ಶಿರೂರು, ಜಗದೀಶ ಸೂಡಿ, ಹನುಮಂತಪ್ಪ ಭಂಗಿ, ರಿಜ್ವಾನ್ ಮೂಗುನೂರು, ವಿನಾಯಕ, ಜಾಕೀರ್ ಮಕಾಂದರ್, ಹಫೀಸಾಬ್, ಅಭಿ, ಪಾಪುಸಾಬ್, ಪ್ರಶಾಂತ ಆರ್ , ವಿಶ್ವ ಬಿ., ವಿಜಯ, ಗಣೇಶ, ದೇವು ಇತರರಿದ್ದರು.