ಸಾರಾಂಶ
1 ರಿಂದ 5 ವರ್ಷದ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ಎಂದು ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಶ್ರೀ ಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟರು. ಶ್ರೀ ಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಅಡ್ವೊಕೇಟ್ ಜನರಲ್ । ಇಂಟರ್‌ನ್ಯಾಷನಲ್ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಅರಸೀಕೆರೆ
ಮಕ್ಕಳಲ್ಲಿ ಗ್ರಹಿಕಾ ಶಕ್ತಿ ಇರುತ್ತದೆ ಮಕ್ಕಳ ಮುಂದೆ ಪೋಷಕರ ಸಂಭಾಷಣೆ ಮತ್ತು ಮನೆಯಲ್ಲಿನ ವಾತಾವರಣ ಮಕ್ಕಳ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅದರಲ್ಲೂ 1 ರಿಂದ 5 ವರ್ಷದ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ಎಂದು ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಶ್ರೀ ಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟರು.1 ರಿಂದ 5 ವರ್ಷದ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ಎಂದು ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಶ್ರೀ ಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟರು. ಶ್ರೀ ಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದ ಶ್ರೀ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಎರಡು ದಿನಗಳು ನಡೆದ ಶ್ರೀ ಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡವನ್ನು ಹೇರಬಾರದು. ಹೆಚ್ಚು ಅಂಕ ತೆಗೆಯಲು ಒತ್ತಡ ಹಾಕಬೇಡಿ. ಈ ಬಾರಿ ಹೆಚ್ಚು ಅಂಕ ತೆಗೆಯದಿದ್ದರೆ ಮುಂದಿನ ಬಾರಿ ತೆಗೆಯುತ್ತಾನೆ. ಆತ್ಮವಿಶ್ವಾಸವನ್ನು ಅವನಲ್ಲಿ ಮೂಡಿಸಿ ಒತ್ತಡ ಹಾಕಿದಾಗ ಅದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ, ಎಂಬುದನ್ನು ಮನೋಶಾಸ್ತ್ರಜ್ಞರು ಹೇಳಿದ್ದಾರೆ ಎಂದರು.‘ಒಂದರಿಂದ ಐದು ವರ್ಷದ ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಿರುತ್ತದೆ. ಶಾಲೆಯಂತೆ ಮನೆಯಲ್ಲಿಯೂ ಸಹ ಮಕ್ಕಳಿಗೆ ಹೆಚ್ಚಿನ ವಿಷಯಗಳನ್ನು ತಿಳಿಸಿಕೊಡಿ. ಮಕ್ಕಳೊಂದಿಗೆ ನಿಮ್ಮ ನಡವಳಿಕೆ ಉತ್ತಮವಾಗಿರಲಿ. ಒಳ್ಳೆಯ ಮಾತುಗಳನ್ನು ಆಡುತ್ತಿದ್ದರೆ, ಮಕ್ಕಳ ಕುತೂಹಲ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸುವ ಮೂಲಕ ಅವರಲ್ಲಿ ಆತ್ಮಸ್ಥೈ ರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿಕ್ಷಣ ಸಂಯೋಜಕ ಗಿರೀಶ್ ಮಾತನಾಡಿ, ಶಾಲೆಗಳಲ್ಲಿ ಪಠ್ಯಕ್ಕೆ ಸಂಬಂಧಿಸಿದ ಶಿಕ್ಷಣವನ್ನು ನೀಡುವುದು ಸಾಮಾನ್ಯ. ಆದರೆ ಶ್ರೀ ಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಆಗಬಲ್ಲ ಸಂಸ್ಕೃತಿ, ವ್ಯವಹಾರಿಕ ಜ್ಞಾನ, ಆಹಾರಗಳ ಬಗ್ಗೆ ಮಾಹಿತಿ ಮೊದಲಾದವುಗಳನ್ನು ತಿಳಿಸಿಕೊಡಲು ಆಹಾರ ಮೇಳ, ಮೆಟ್ರಿಕ್ ಮೇಳ, ವಿವಿಧ ಕಾರ್ಯಕ್ರಮಗಳನ್ನುಮಾಡುವ ಮೂಲಕ ವಿಶೇಷ ರೀತಿಯಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಪೋಷಕರನ್ನು ಸಹ ಮಕ್ಕಳ ಸ್ಪರ್ಧೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅವರಿಗೂ ವಿವಿಧ ಸ್ಪರ್ಧೆಗಳನ್ನು ಹಾಗೂ ಟಾಸ್ಕ್‌ಗಳನ್ನು ನೀಡುವ ಮೂಲಕ ಪೋಷಕರನ್ನು ಶಾಲೆಗೆ ಇನ್ನೂ ಹತ್ತಿರವಾಗಿ ಈ ಶಾಲೆ ರೂಪಿಸಿಕೊಂಡಿದೆ. ಈ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಕಲ್ಪಿಸಿ ಕೊಡುತ್ತಿದೆ ಎಂದರು.ಸಿಆರ್‌ಪಿ ವಿಷ್ಣುವರ್ಧನ್, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಹಿರಿಯಣ್ಣಯ್ಯ, ಕಾರ್ಯದರ್ಶಿ ನಾರಾಯಣ್(ವೇಣು) ಖಜಾಂಚಿ ಬಿ.ಎ.ರಾಮಚಂದ್ರ ಪಾಲ್ಗೊಂಡಿದ್ದರು
ಕಳೆದ ಸಾರಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿತಮ್ಮ ಪ್ರತಿಭೆಯನ್ನು ತೋರಿದ ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂದಿಸಿದರು. ಸಂಸ್ಥೆಯ ನಿರ್ದೇಶಕಿ ಹಾಗೂ .ನಗರದಲ್ಲಿರುವ ಶ್ರೀ ಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಪ್ರೌಢಶಾಲೆಯ ಪ್ರಾಂಶುಪಾಲೆ, ರೇಖಾ ಕುಮಾರ್ ಪ್ರೌಢ ಶಾಲೆಯ ವಾರ್ಷಿಕ ವರದಿಯನ್ನು ಮಂಡಿಸಿದರು. ಮಕ್ಕಳ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ .ಮುಖ್ಯ ಅತಿಥಿಗಳ ಪೋಷಕರ ಮನ ಸೂರೆಗೊಂಡಿತು. ನಗರದಲ್ಲಿ ಎರಡು ದಿನಗಳು ನಡೆದ ಶ್ರೀ ಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಶ್ರೀ ಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿದರು.