ಮನೆಮನೆಗೆ ಶ್ರೀ ರಾಮ ಮಂತ್ರಾಕ್ಷತೆ ವಿತರಣೆಗೆ ಚಾಲನೆ

| Published : Jan 06 2024, 02:00 AM IST

ಮನೆಮನೆಗೆ ಶ್ರೀ ರಾಮ ಮಂತ್ರಾಕ್ಷತೆ ವಿತರಣೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಂತ್ರಾಕ್ಷತೆ ಮತ್ತು ಶ್ರೀರಾಮನ ಭಾವಚಿತ್ರ ಹಾಗೂ ಕರ ಪತ್ರಿಕೆ ವಿತರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ವಿರಾಜಪೇಟೆ

ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಂತ್ರಾಕ್ಷತೆ ಮತ್ತು ಶ್ರೀರಾಮನ ಭಾವಚಿತ್ರ ಹಾಗೂ ಕರ ಪತ್ರಿಕೆ ವಿತರಣೆ ಕಾರ್ಯಕ್ರಮಕ್ಕೆ ವಿರಾಜಪೇಟೆ ಐಮಂಗಲ ಗ್ರಾಮದ ಬಿಜೆಪಿ ಬೂತ್‌ ಸಮಿತಿಯ ಸದಸ್ಯರು ಚಾಲನೆ ನೀಡಿದರು.

ಗ್ರಾಮದ ಅಧಿದೇವತೆಯಾದ ಶ್ರೀ ಭದ್ರಕಾಳಿ ದೇಗುಲದಲ್ಲಿ ೧೫ ದಿನಗಳ ಕಾಲ ಪೂಜೆ ಸಲ್ಲಿಕೆಯಾದ ನಂತರ ಗ್ರಾಮದ ಮನೆಮನೆಗೆ ಮಂತ್ರಾಕ್ಷೆತೆಯನ್ನು ನೀಡಲಾಯಿತು.

ಮಂತ್ರಾಕ್ಷೆತ ವಿತರಣೆ ವೇಳೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮೇದಪ್ಪ, ಬಿಜೆಪಿ ಬೂತ್‌ ಸಮಿತಿಯ ಅದ್ಯಕ್ಷರಾದ ಮೇಕತಂಡ ರಮೇಶ್, ಸದಸ್ಯರಾದ ಬೊಳ್ಳಚಂಡ ಪ್ರಕಾಶ್, ಸುರೇಶ್, ಪ್ರಜ್ವಲ್, ಕುಂಡ್ರಂಡ ಪಾಪು ಮತ್ತು ಮುದ್ದಯ್ಯ ಅವರು ಇದ್ದರು.ಸುಂಟಿಕೊಪ್ಪ: ಮನೆಮನೆಗೆ ಪವಿತ್ರ ಮಂತ್ರಾಕ್ಷತೆ ವಿತರಣೆ

ಮನೆಮನೆಗೆ ಪವಿತ್ರ ಮಂತ್ರಾಕ್ಷತೆ ವಿತರಣಾ ಅಭಿಯಾನದ ಅಂಗವಾಗಿ ಅಯೋದ್ಯೆಯ ಶ್ರೀ ರಾಮಮಂದಿರದಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಪಟ್ಟಣದ ಮನೆಗಳಿಗೆ ವಿತರಿಸಲಾಯಿತು.ಜ.22 ರಂದು ಅಯೋದ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಯಿತು. ಆರ್.ಎಸ್.ಎಸ್ ನ ರಾಕೇಶ್, ವೇಲು ಮುರುಗನ್, ಸಂಘ ಪರಿವಾರದ ಪೃಥ್ವಿರಾಜ್, ಮನು ಅಚ್ಚಮಯ್ಯ, ವಿಜಯ್, ದರ್ಶನ್, ತ್ರಿಜಲ್, ಸಂತೋಷ್, ಬಿಜೆಪಿ ಮುಖಂಡರಾದ ಸುಧೀಶ್, ಬಿ.ಕೆ. ಪ್ರಶಾಂತ್, ಲೀಲಾವತಿ, ಸಂದೀಪ್, ಪಿ.ಆರ್. ಸುನಿಲ್ ಕುಮಾರ್ ಇತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ನರಿಯಂದಡ ಗ್ರಾಮದಲ್ಲಿ ಅಯೋಧ್ಯೆ ಮಂತ್ರಾಕ್ಷತೆ ಅಭಿಯಾನ

ನಾಪೋಕ್ಲು ಸಮೀಪದ ನರಿಯಂದಡ ಗ್ರಾಮದಲ್ಲಿ ರಾಮಭಕ್ತ ಸಮಿತಿಯ ಸದಸ್ಯರಿಂದ ಅಯೋಧ್ಯೆ ಮಂತ್ರಾಕ್ಷತೆ ಅಭಿಯಾನ ನಡೆಯಿತು.ಗ್ರಾಮದ ಭಗವತಿ ದೇವಾಲಯದಲ್ಲಿ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ, ಗ್ರಾಮದ ಒಂದು ಹಾಗೂ ಎರಡನೇ ಬ್ಲಾಕಿನ ಮನೆ ಮನೆಗೆ ತೆರಳಿ ಮಂತ್ರಾಕ್ಷತೆಯನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಈ ವೇಳೆ ಮಂತ್ರಾಕ್ಷತೆಯ ಉದ್ದೇಶ ಹಾಗೂ ಪಾಲನೆಯ ಬಗ್ಗೆ ವಿವರಿಸಲಾಯಿತು.

ಈ ಸಂದರ್ಭ ಭಗವತಿ ದೇವಸ್ಥಾನದ ಅಧ್ಯಕ್ಷ ಬಟ್ಟಿಯಂಡ ಜಯರಾ೦, ರಾಮಭಕ್ತ ಸಮಿತಿಯ ಸದಸ್ಯರಾಗಿರುವ ಪ್ರಮುಖರಾದ ಕುಕ್ಕೆಮನೆ ನಾರಾಯಣಮೂರ್ತಿ, ಮಕ್ಕಿಮನೆ ಸುಧೀರ್, ಚೆಯ್ಯಂಡ ಲವ ಅಪ್ಪಚ್ಚು, ಮುಂಡಿಯೊಳಂಡಿ ದಿನು ಚಂಗಪ್ಪ, ಬೆಳಿಯ೦ಡ್ರ ಹರಿಪ್ರಸಾದ್, ಶರಣು, ರಾಜಾರಾಮ್, ಬಟ್ಟಿಯಂಡ ಅಶೋಕ್, ಸತೀಶ್, ಸಂಪತ್ ಮತ್ತಿತರರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ತಮ್ಮನ್ನು ತೊಡಗಿಸಿಕೊಂಡಿದ್ದರು.