ಮನೆ ಬಾಗಿಲಿಗೆ ಪಾಲಿಕೆಯಿಂದ ಇ-ಆಸ್ತಿ ಪತ್ರ ಅಭಿಯಾನ

| Published : Feb 12 2024, 01:32 AM IST

ಮನೆ ಬಾಗಿಲಿಗೆ ಪಾಲಿಕೆಯಿಂದ ಇ-ಆಸ್ತಿ ಪತ್ರ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.13ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ ವಿನೋಬ ನಗರದ 3ನೇ ಮುಖ್ಯ ರಸ್ತೆಯಲ್ಲಿರುವ ವಾರ್ಡ್ ಆಫೀಸ್ ನಲ್ಲಿ ಮನೆ ಮಾಲೀಕರಿಗೆ ಸ್ಥಳದಲ್ಲೇ ಇ-ಆಸ್ತಿ ಪತ್ರ ನೀಡಲಾಗುವುದು. ಈಗಾಗಲೇ ವಾರ್ಡಿನ ಕಸ ವಿಲೇವಾರಿ ವಾಹನದ ಮೂಲಕ ಸಾರ್ವಜನಿಕರು, ಮನೆ ಮಾಲೀಕರಿಗೆ ಇ-ಆಸ್ತಿ ಮಾಡಿಸುವ ಕುರಿತು ಪ್ರಚಾರ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾನಗರ ಪಾಲಿಕೆಯ ವತಿಯಿಂದ ಇ-ಆಸ್ತಿ ಅಭಿಯಾನವನ್ನು ಇಲ್ಲಿನ 16ನೇ ವಾರ್ಡ್‌ನ ವಿನೋಬ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಲಯ ಆಯುಕ್ತ ಕೆ.ನಾಗರಾಜ್ ನೇತೃತ್ವದಲ್ಲಿ ವಾರ್ಡಿನ ಮನೆ ಮನೆಗೆ ತೆರಳಿ ಮನೆ ಮಾಲೀಕರ ಸ್ಥಿರಾಸ್ತಿಗಳ ದಾಖಲೆಗಳ ನೀಡಿ ಇ-ಆಸ್ತಿ ತಂತ್ರಾಂಶದಲ್ಲಿ ಅಳವಡಿಸಿ ಇ-ಆಸ್ತಿ ಪತ್ರ ಪಡೆಯಬಹುದು ಎಂದು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಫೆ.13ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ ವಿನೋಬ ನಗರದ 3ನೇ ಮುಖ್ಯ ರಸ್ತೆಯಲ್ಲಿರುವ ವಾರ್ಡ್ ಆಫೀಸ್ ನಲ್ಲಿ ಮನೆ ಮಾಲೀಕರಿಗೆ ಸ್ಥಳದಲ್ಲೇ ಇ-ಆಸ್ತಿ ಪತ್ರ ನೀಡಲಾಗುವುದು ಎಂದರು.

ಈಗಾಗಲೇ ವಾರ್ಡಿನ ಕಸ ವಿಲೇವಾರಿ ವಾಹನದ ಮೂಲಕ ಸಾರ್ವಜನಿಕರು, ಮನೆ ಮಾಲೀಕರಿಗೆ ಇ-ಆಸ್ತಿ ಮಾಡಿಸುವ ಕುರಿತು ಪ್ರಚಾರ ಮಾಡಲಾಗುತ್ತಿದೆ. ಸ್ವತ್ತಿನ ಮಾಲೀಕರು ತಮ್ಮ ಮನೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳು, ತಮ್ಮ ಫೋಟೋ, ಆಧಾರ್ ಕಾರ್ಡ್, ಮನೆ ಕಂದಾಯ, ನೀರಿನ ಕಂದಾಯ ಪಾವತಿ ರಸೀದಿ, ವಿದ್ಯುತ್ ಮೀಟರ್ ನಂಬರ್, ಆಸ್ತಿಗೆ ಸಂಬಂಧಿಸಿದ ಇತರೆ ದಾಖಲೆಗಳ ತಂದು ನೀಡಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬಹುದು. ನೋಂದಣಿ ನಂತರ ಸ್ಥಳದಲ್ಲೇ ಇ-ಆಸ್ತಿ ದಾಖಲೆ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಕಂದಾಯ ಅಧಿಕಾರಿ ಈರಮ್ಮ, ಕಂದಾಯ ನಿರೀಕ್ಷಕ ಹೊನ್ನಪ್ಪ, ವಿಷಯ ನಿರ್ವಾಹಕ ನಾಗರಾಜ ಸೇರಿ ಪಾಲಿಕೆ ಸಿಬ್ಬಂದಿ, ಇತರರಿದ್ದರು.