ಬಡಮಕಾನ್‌ನಲ್ಲಿ ಮನೆ-ಮನೆಗೆ ಪೊಲೀಸ್ ಅಭಿಯಾನ

| Published : Jul 20 2025, 01:15 AM IST

ಸಾರಾಂಶ

ಚನ್ನಪಟ್ಟಣ: ಪೊಲೀಸ್ ಆಡಳಿತವನ್ನು ಜನಸ್ನೇಹಿಯಾಗಿಸಲು ಮನೆ-ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದ್ದು, ಜನರೊಂದಿಗೆ ಸಮನ್ವಯತೆ ಸಾಧಿಸಲು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಡಿವೈಎಸ್‌ಪಿ ಕೆ.ಸಿ.ಗಿರಿ ತಿಳಿಸಿದರು.

ಚನ್ನಪಟ್ಟಣ: ಪೊಲೀಸ್ ಆಡಳಿತವನ್ನು ಜನಸ್ನೇಹಿಯಾಗಿಸಲು ಮನೆ-ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದ್ದು, ಜನರೊಂದಿಗೆ ಸಮನ್ವಯತೆ ಸಾಧಿಸಲು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಡಿವೈಎಸ್‌ಪಿ ಕೆ.ಸಿ.ಗಿರಿ ತಿಳಿಸಿದರು.

ನಗರದ ಪೂರ್ವ ಪೊಲೀಸ್ ಠಾಣೆ ಸರಹದ್ದಿನ ೮ನೇ ಬೀಟ್ಗೆ ಬರುವ ಬಡಮಕಾನ್‌ನಲ್ಲಿ ಮನಗೆಗಳಿಗೆ ತೆರಳಿ ಗುಲಾಬಿ ಹೂ ನೀಡಿ, ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನರೊಂದಿಗೆ ಸಮನ್ವಯತೆ ಸಾಧಿಸಿ, ಪೊಲೀಸ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಈ ಯೋಜನೆ ಸಹಕಾರಿಯಾಗಿದೆ. ಹಿಂದೆ ಪೊಲೀಸ್ ಇಲಾಖೆಯಲ್ಲಿ ಬೀಟ್ ವ್ಯವಸ್ಥೆ ಜಾರಿಯಲ್ಲಿತ್ತು. ನಾಲ್ಕೈದು ಹಳ್ಳಿಗಳಿಗೆ ಒಂದು ಬೀಟ್ ಎಂದು ಮಾಡಿ ಕನಿಷ್ಠ ಇಬ್ಬರು ಪೊಲೀಸರನ್ನು ನೇಮಿಸಲಾಗುತ್ತಿತ್ತು. ಅವರು ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆಗಳನ್ನು ಕೇಳಿ ಠಾಣಾಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದರು. ಈ ಕಾರ್ಯಕ್ರಮದ ಅಡಿಯಲ್ಲಿ ಈಗ ಮನೆ-ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದರು.

ಕಾರ್ಯಕ್ರಮದ ಅನ್ವಯ ನಗರದ ಪ್ರತಿ ಬಡಾವಣೆ ಹಾಗೂ ಹಳ್ಳಿಗಳಲ್ಲಿ ಸುಮಾರು ೫೦ ಮನೆಗಳ ಒಂದು ಲಿಸ್ಟ್ ತಯಾರಿಸಿ, ಒಂದು ಗುಂಪನ್ನು ಸೃಷ್ಟಿಸಬೇಕು. ಪ್ರತಿ ಮನೆಗೆ ಆ ಬೀಟ್‌ನ ಪೇದೆ ತೆರಳಿ ಮನೆಯ ಹಿರಿಯರನ್ನು ಮಾತನಾಡಿಸಿ, ಅವರ ಸಮಸ್ಯೆ ಆಲಿಸಿ, ಅವರಿಗೆ ತಿಳುವಳಿಕೆ ನೀಡುವ ಕೆಲಸ ಮಾಡಬೇಕು. ಕನಿಷ್ಠ ತಿಂಗಳಿಗೆ ಒಮ್ಮೆ ಭೇಟಿ ನೀಡಬೇಕು ಎಂದರು.

ತುರ್ತು ಪರಿಸ್ಥಿಯಲ್ಲಿ 112ಗೆ ಕರೆ ಮಾಡಿದರೆ, ಪೊಲೀಸರು ತುರ್ತಾಗಿ ಆಗಮಿಸುತ್ತಾರೆ. ಈ ವ್ಯವಸ್ಥೆಯ ಬಗ್ಗೆಯೇ ಎಷ್ಟೋ ಜನರಿಗೆ ಅರಿವಿಲ್ಲ. ಇದರ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಗುವುದು. ಇದರಿಂದ ಪೊಲೀಸರ ಬಗ್ಗೆ ಜನರಿಗೆ ಇರುವ ಭಯ ದೂರವಾಗುತ್ತದೆ. ಪೊಲೀಸರು ಇರುವುದೇ ನಮಗಾಗಿ ಎಂಬ ಭಾವನೆ ಮೂಡಿಸಲು ಸಹಕಾರಿಯಾಗಿದೆ ಎಂದರು.

ಪುರಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿಕಿರಣ್ ಮಾತನಾಡಿ, ಮನೆ-ಮನೆಗೆ ಪೊಲೀಸ್ ಯೋಜನೆ ಪೊಲೀಸರು ಹಾಗೂ ಸಾರ್ವಜನಕರಲ್ಲಿ ಉತ್ತಮ ಬಾಂಧ್ಯವ ಮೂಡಿಸಲು ಸಹಕಾರಿಯಾಗಿದೆ. ನೆರೆಹೊರೆಯಲ್ಲಿ ಕಾನೂನುಭಾಹಿರ ಚಟುವಟಿಕೆ ನಡೆಯುತ್ತಿದ್ದರೆ ಅದನ್ನು ಸಾರ್ವಜನಿಕರು ಪೊಲೀಸರಿಗೆ ತಿಳಿಸಲು ಅನುಕೂಲವಾಗುತ್ತದೆ. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗುತ್ತದೆ ಎಂದರು.

ಇದೇ ವೇಳೆ ಮನೆ-ಮನೆಗೆ ತೆರಳಿದ ಪೊಲೀಸರು, ತುರ್ತು ಸಂದರ್ಭಗಳಲ್ಲಿ 112ಗೆ ಉಪಯೋಗಿಸುವಂತೆ ಹಾಗೂ ಇತರ ಇಲಾಖಾ ಸಂಬಂಧ ಮಾಹಿತಿಗಳನ್ನು ನೀಡಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟವಂತೆ ಹಾಗೂ ಬೀಟ್ ಪೊಲೀಸ್, ಠಾಣಾ ಪಿಎಸ್‌ಐ, ಟೋಲ್ ಫ್ರೀ ಹಾಗೂ ಕಂಟ್ರೋಲ್ ರೂಮ್ ನಂಬರ್‌ಗಳ ಮಾಹಿತಿ ನೀಡಲಾಯಿತು.

ಈ ವೇಳೆ ಪಿಎಸ್‌ಐಗಳಾದ ದುರ್ಗಪ್ಪ, ಉಷಾನಂದಿನಿ, ಎಎಸ್‌ಐಗಳಾದ ಕಾವೇರಪ್ಪ, ಫೈರೋಜ್ ಖಾನ್, ಪೇದೆಗಳಾದ ದುರ್ಗಪ್ಪ, ಅನಿಲ್, ಮಂಜುನಾಥ್, ನಾರಾಯಣ್, ಕಾಶಿನಾಥ್, ಕವಣಪ್ಪ, ಶ್ವೇತಾ, ಗೀತಾ, ಬಸವರಾಜೇಶ್ವರಿ ಇತರರು ಇದ್ದರು.

19ಸಿಪಿಟಿ2:ಚನ್ನಪಟ್ಟಣದ ಬಡಾಮಕಾನ್‌ನಲ್ಲಿ ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.