ಸಾರಾಂಶ
ಜನತೆಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಜಾರಿಗೊಳಿಸಿರುವ ಮನೆ ಮನೆಗೆ ಪೊಲೀಸ್ ಯೋಜನೆ ಸಮಾಜಕ್ಕೆ ದಾರಿದೀಪ ಆಗಲಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ ಹೇಳಿದ್ದಾರೆ.
- ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಚರ್ಚೆ
- - -ಹೊನ್ನಾಳಿ: ಜನತೆಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಜಾರಿಗೊಳಿಸಿರುವ ಮನೆ ಮನೆಗೆ ಪೊಲೀಸ್ ಯೋಜನೆ ಸಮಾಜಕ್ಕೆ ದಾರಿದೀಪ ಆಗಲಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ ಹೇಳಿದರು.
ಹೊನ್ನಾಳಿ ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮನೆ ಮನೆಗೆ ಪೊಲೀಸ್ ಭೇಟಿ ನೀಡುವ ಈ ವಿನೂತನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆಯಲಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಮನೆ ಮನೆಗೆ ಪೊಲೀಸರು ಭೇಟಿ, ರಕ್ಷಣೆಗೆ ಸಂಬಂಧಿಸಿದಂತೆ ಕುಂದುಕೊರತೆ ಆಲಿಸಿ, ಸಲಹೆ ಪಡೆದುಕೊಳ್ಳವರು. ಈ ಕಾರ್ಯಕ್ರಮ ಬಗ್ಗೆ ಸ್ವತಃ ಸಾರ್ವಜನಿಕರೇ ಎಸ್‌ಪಿ ಮೇಡಂ ಅವರಿಗೆ ಕರೆ ಮಾಡಿ ಈ ಯೋಜನೆ ಸರಿಯಾಗಿದೆ. ಇದರಿಂದ ಪೊಲಿಸರ ಮೇಲೆ ಮತ್ತಷ್ಟು ಗೌರವ, ನಂಬಿಕೆ ಹಾಗೂ ವಿಶ್ವಾಸ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.ತಮ್ಮ ಮನೆಗಳಿಗೆ ಪೊಲಿಸರು ಭೇಟಿ ನೀಡುವುದರಿಂದ ವಿಶೇಷವಾಗಿ ಕೌಟಂಬಿಕ ಕಲಹಗಳು ಕಡಿಮೆಯಾಗಲಿವೆ. ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತವೆ. ಪೊಲಿಸರು ತಮ್ಮ ಬಳಿ ಬಂದಾಗ ತಮ್ಮ ಮನೆಗಳ ಸುತ್ತಮುತ್ತಲಿನಲ್ಲಿ ಅಪರಾಧಗಳು ನಡೆಯುತ್ತಿದ್ದರೆ ಅಥವಾ ನಡೆದಿದೆ ಎಂಬುದು ನಿಮಗೆ ತಿಳಿದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಮುಂದಾಗುವ ಯಾವುದೇ ಅವಘಡಗಳನ್ನು ತಪ್ಪಿಸಬಹುದು ಎಂದರು.
- - --7ಎಚ್.ಎಲ್.ಐ2:
ದಾವಣಗೆರೆಗೆ ವರ್ಗಾವಣೆಗೊಂಡಿರುವ ನೂತನ ಜಿಲ್ಲಾ ಹೆಚ್ಚುವರಿ ಪೊಲಿಸ್ ವರೀಷ್ಠಾಧಿಕಾರಿ ಪರಮೇಶ್ವರ್ ಹೆಗಡೆ ಹೊನ್ನಾಳಿ ಠಾಣೆಗೆ ಆಗಮಿಸಿ, ಪಿಐ ಸುನೀಲ್‌ಕುಮಾರ್ ಜತೆ ತಾಲೂಕಿನ ಕಾನೂನು ಸುವ್ಯವಸ್ಥೆಗಳ ಕುರಿತು ಚರ್ಚಿಸಿದರು.