ದೋರನಹಳ್ಳಿ: ಸಾಂಸ್ಕೃತಿಕ ಕ್ರೀಡೆ, ಎನ್ನೆಸ್ಸೆಸ್‌ ಶಿಬಿರ

| Published : Aug 13 2024, 12:51 AM IST

ದೋರನಹಳ್ಳಿ: ಸಾಂಸ್ಕೃತಿಕ ಕ್ರೀಡೆ, ಎನ್ನೆಸ್ಸೆಸ್‌ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

Doranahalli: Cultural Sports, Ennesses Camp

ಶಹಾಪುರ: ಪ್ರತಿಭೆ ಮತ್ತು ಜ್ಞಾನ ಹೊರಹಾಕಿ ಜಗತ್ತಿಗೆ ಪರಿಚಯಿಸುವುದು ನಿಜವಾದ ವಿದ್ಯೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹೇಳಿದರು. ದೋರನಹಳ್ಳಿ ಗ್ರಾಮದ ಡಿಡಿಯು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಕ್ರೀಡಾ, ಎನ್‌ಎಸ್‌ಎಸ್ ಶಿಬಿರ ಚಟುವಟಿಕೆ ಉದ್ಘಾಟನೆ ಮತ್ತು ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಾಮಾಣಿಕ ಅಧ್ಯಯನ ಮತ್ತು ಗುರುವಿನೊಂದಿಗೆ ಚರ್ಚೆ ಮಾಡುವುದರಿಂದ ಮಾತ್ರ ಜ್ಞಾನ ಹೆಚ್ಚುತ್ತದೆ ಎಂದರು. ಚಿಕ್ಕಮಠದ ಪೀಠಾಧಿಪತಿ ಶಿವಲಿಂಗರಾಜೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಲೇಖಕಿ ಡಾ. ಶೈಲಜಾ ಬಾಗೇವಾಡಿ, ಮುಖ್ಯ ಅತಿಥಿಗಳಾದ ಶಿಕ್ಷಕಿ ಸಂಗೀತಾ ದೇಸಾಯಿ ಮಾತನಾಡಿದರು. ಪತ್ರಕರ್ತ ವಿಶಾಲ ಶಿಂಧೆ ಮತ್ತು ನಾಗರಾಜ ಅಣಬಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಮೇಟಿ ಅಧ್ಯಕ್ಷತೆವಹಿಸಿದ್ದರು. ಮುಖ್ಯಗುರು ಪ್ರಕಾಶ ಬಳ್ಳಾರಿ ಅತಿಥಿ ಸ್ಥಾನ ವಹಿಸಿದ್ದರು. ಪ್ರಾಂಶುಪಾಲ ಮಹೇಶ ಪತ್ತಾರ ಮಾತನಾಡಿದರು.

-------

ಫೋಟೊ: 12ವೈಡಿಆರ್15 :

ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಡಿಡಿಯು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಜರುಗಿತು.

---000---