ಸಾರಾಂಶ
ನರಸಿಂಹರಾಜಪುರ, ಜಿಲ್ಲೆಯ ಹಾಗೂ ಕ್ಷೇತ್ರದ ಎಲ್ಲಾ ಜ್ವಲಂತ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಶಾಸಕ ಸಹಯೋಗದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಎಂ.ಎಲ್ಸಿ ಡಾ.ಆರತಿಕೃಷ್ಣ ಭರವಸೆ ನೀಡಿದರು.
- ಬ್ಲಾಕ್ ಕಾಂಗ್ರೆಸ್ ವತಿಯಿಂದ ಡಾ.ಆರತಿ ಕೃಷ್ಣ ಅವರಿಗೆ ಅಭಿನಂದನೆ ಸಮಾರಂಭ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಜಿಲ್ಲೆಯ ಹಾಗೂ ಕ್ಷೇತ್ರದ ಎಲ್ಲಾ ಜ್ವಲಂತ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಶಾಸಕ ಸಹಯೋಗದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಎಂ.ಎಲ್ಸಿ ಡಾ.ಆರತಿಕೃಷ್ಣ ಭರವಸೆ ನೀಡಿದರು.
ಶನಿವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾನು ರಾಜ್ಯಪಾಲರಿಂದ ಆಯ್ಕೆಯಾಗಿರುವ ಎಂ.ಎಲ್ಸಿಯಾಗಿದ್ದೇನೆ. ನಾನು ಯಾವ ಜಿಲ್ಲೆಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಆದರೆ, ನಮ್ಮ ತಂದೆಯವರ ಜಿಲ್ಲೆಯೇ ಬೇಕು ಎಂದು ಈ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡೆ. ನಮ್ಮ ತಂದೆಯ ಜನ್ಮ ಭೂಮಿ ಶೃಂಗೇರಿ. ಆದರೆ, ಕರ್ಮ ಭೂಮಿ ಎನ್.ಆರ್.ಪುರವಾಗಿದೆ. ನಮ್ಮ ತಂದೆಯವರು ಮೊದಲು ವಕೀಲ ವೃತ್ತಿಯನ್ನು ಪ್ರಾರಂಭಿಸಿದ್ದು ಇದೇ ಊರಿನಲ್ಲಿ. ನಾನು ಎಂ.ಎಲ್ಸಿ ಆಗಿ ಆಯ್ಕೆಯಾದ ಬಳಿಕ ಅನಿವಾಸಿ ಭಾರತೀಯ ಉಪಾಧ್ಯಕ್ಷೆ ಹುದ್ದೆಗೆ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಅನಿವಾಸಿ ಭಾರತೀಯ ಉಪಾಧ್ಯಕ್ಷೆ ಅಧಿಕಾರವಿದ್ದಾಗ ಬರೀ ಹೊರದೇಶಗಳ ಸಂಪರ್ಕದಲ್ಲೇ ಇರಬೇಕಾಗಿತ್ತು. ಆದ್ದರಿಂದ ಈ ಭಾಗದಲ್ಲಿ ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ ಕೂಡ ಈ ಭಾಗದ ಜನರು ಬಂದಾಗ ಯಾವುದೇ ಕೆಲಸ ಆಗುವುದಿಲ್ಲ ಎನ್ನದೆ ಕೈಯಲಾದ ಸಹಾಯ ಮಾಡಿದ್ದೇನೆ. ಈಗ ನಾನು ಎಂ.ಎಲ್ಸಿ ಆಗಿರುವುದರಿಂದ ವಿಧಾನ ಪರಿಷತ್ತಿನಲ್ಲಿ ಈ ಭಾಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಅವಕಾಶ ದೊರೆತಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರಕ್ಕಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಆರತಿಕೃಷ್ಣ ಅವರಿಗೆ ಅರ್ಹತೆಗೆ ತಕ್ಕ ಹುದ್ದೆ ಅಧಿಕಾರ ಲಭಿಸಿದೆ. ಇವರನ್ನು ಎಂ.ಎಲ್ಸಿ ಮಾಡಿದ ಮಲ್ಲಿಕಾರ್ಜುನ ಖರ್ಗೆ,ಸೋನಿಯಾಗಾಂಧಿ,ರಾಹುಲ್‌ಗಾಂಧಿ,ಸರ್ಜೆವಾಲ್, ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಆಬಾರಿಯಾಗಿದ್ದೇವೆ. ಕ್ಷೇತ್ರಕ್ಕೆ ಹಾಗೂ ಜಿಲ್ಲೆಗೊಂದು ಸುವರ್ಣಾವಕಾಶ ಲಭಿಸಿದೆ. ಕಾಡಾ ಅಧ್ಯಕ್ಷರು, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ನಮ್ಮ ಕ್ಷೇತ್ರದವರೇ ಆಗಿದ್ದು ಆಗ, ಈಗ ಆರತಿಕೃಷ್ಣ ಅವರು ಎಂ.ಎಲ್ಸಿ ಆಗಿರುವುದು ಇನ್ನಷ್ಟು ಶಕ್ತಿ ಬಂದಂತಾಗಿದೆ. ಕೆಪಿಸಿಸಿ ಹಾಗೂ ಎಐಸಿಸಿ ಇಂದ ಅನೇಕ ಹುದ್ದೆಗಳನ್ನು ನೀಡಲಾಗಿದೆ. ಬೇಗಾನೆ ರಾಮಯ್ಯನವರು ಈ ಕ್ಷೇತ್ರದ ಶಾಸಕರಾದಾಗ ಗ್ರಾಮೀಣಾಭಿವೃದ್ಧಿ ಸಚಿವರಾಗಲು ಅವಕಾಶ ದೊರೆಯಿತು. ಆ ಸಂದರ್ಭದಲ್ಲಿ ಜನಸಂಖ್ಯೆ ಗನುಗುಣವಾಗಿ ಬೋರ್ ವೆಲ್ ಕೊರೆಸಲು ಮಾತ್ರ ಅವಕಾಶವಿತ್ತು. ಇಂತಹ ಸಂದರ್ಭದಲ್ಲೂ ಕೂಡ ನಮ್ಮ ಕ್ಷೇತ್ರದಲ್ಲಿ ಅತೀ ಬೋರ್‌ವೆಲ್ ಕೊರೆಸಿ ರೈತರ ಬಾಳಿಗೆ ಆಶಾಕಿರಣವಾದವರು. ಎಂ.ಶ್ರೀನಿವಾಸ್ ಅವರೂ ಕೂಡ ತಮ್ಮ ಹುಟ್ಟೂರಿನ ಅಭಿಮಾನಕ್ಕಾಗಿ ಧಾರ್ಮಿಕ, ಶೈಕ್ಷಣಿಕ,ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದಾರೆ. ಡಾ.ಆರತಿಕೃಷ್ಣರವರು ನಮ್ಮೊಂದಿಗೆ ಅಭಿವೃದ್ಧಿಗೆ ಕೈಜೋಡಿಸಿದರೆ ಕ್ಷೇತ್ರದಲ್ಲಿ ಐತಿಹಾಸಿಕ ಅಭಿವೃದ್ಧಿಯಾಗಲಿದೆ ಎಂದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಮುಖಂಡರಾದ ಕೆ.ಎಂ.ಸುಂದರೇಶ್, ಎಸ್.ಡಿ.ರಾಜೇಂದ್ರ, ಕೆ.ಪಿ.ಮೀನಾಕ್ಷಿ ಕಾಂತರಾಜ್, ಬಿ.ವಿ.ಉಪೇಂದ್ರ, ಮಾಳೂರು ದಿಣ್ಣೆರಮೇಶ್, ಸುನೀಲ್‌ಕುಮಾರ್, ಅಂಜುಮ್, ದೇವಂತರಾಜ್ ಗೌಡ, ಕೆ.ಎ. ಅಬೂಬೇಕರ್, ಎಚ್.ಬಿ.ರಘುವೀರ್, ಕೆ.ವಿ.ಸಾಜು,ಶ್ರೀಜಿತ್, ರತನ್‌ಗೌಡ, ಉಮಾಕೇಶವ್ ಮತ್ತಿತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))