ಭಾರತ ಸಂವಿಧಾನ ರಚಿಸಿದ ಮಹಾನ್ ಜ್ಞಾನಿ ಡಾ.ಅಂಬೇಡ್ಕರ್: ತಹಸೀಲ್ದಾರ್‌

| Published : Apr 15 2024, 01:20 AM IST

ಭಾರತ ಸಂವಿಧಾನ ರಚಿಸಿದ ಮಹಾನ್ ಜ್ಞಾನಿ ಡಾ.ಅಂಬೇಡ್ಕರ್: ತಹಸೀಲ್ದಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಸಂಪ್ರದಾಯ, ಸಮಾಜದಲ್ಲಿದ್ದ ಅಸಮಾನತೆ, ಶೋಷಣೆಯಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ವಿದ್ಯಾಭ್ಯಾಸವನ್ನು ಮಾಡಿ, ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಮಾನವಾಗಿ ಜೀವಿಸುವ ಹಕ್ಕಿದೆ ಎಂದು ಸಾರಿದ, ದೇಶದ ಪ್ರಗತಿಗೆ ಪೂರಕ ಸಂವಿಧಾನ ರಚಿಸಿದ ಮಹಾನ್ ಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಚನ್ನಗಿರಿಯಲ್ಲಿ ಅಂಬೇಡ್ಕರ್‌, ಜಗಜೀವನ ರಾಂ ಜಯಂತ್ಯುತ್ಸವ - - -

ಚನ್ನಗಿರಿ: ಹಿಂದಿನ ಸಂಪ್ರದಾಯ, ಸಮಾಜದಲ್ಲಿದ್ದ ಅಸಮಾನತೆ, ಶೋಷಣೆಯಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ವಿದ್ಯಾಭ್ಯಾಸವನ್ನು ಮಾಡಿ, ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಮಾನವಾಗಿ ಜೀವಿಸುವ ಹಕ್ಕಿದೆ ಎಂದು ಸಾರಿದ, ದೇಶದ ಪ್ರಗತಿಗೆ ಪೂರಕ ಸಂವಿಧಾನ ರಚಿಸಿದ ಮಹಾನ್ ಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತ್ಯುತ್ಸವ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿ, ಸಂವಿಧಾನಶಿಲ್ಪಿ ತತ್ವ- ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.

ಮನು ಸಂಸ್ಕೃತಿ ಕಾಲದಲ್ಲಿ ಭಾರತದಲ್ಲಿದ್ದ ಜಾತಿ ಪದ್ಧತಿ, ಮೇಲು-ಕೀಳು, ಮಹಿಳೆಯರ ಶೋಷಣೆ ಸೇರಿದಂತೆ ಇನ್ನು ಅನೇಕ ಕೆಟ್ಟ ಆಚರಣೆಗಳ ವಿರುದ್ಧ ಡಾ.ಅಂಬೇಡ್ಕರ್‌ ಹೋರಾಡಿದ ಮಹಾನ್ ಕ್ರಾಂತಿಕಾರಿಯಾಗಿದ್ದಾರೆ. ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರಬುನಾದಿ ಹಾಕಿ, ನಮ್ಮನ್ನಾಳುವ ನಾಯಕರನ್ನು ಮತದಾನದ ಮೂಲಕ ನಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು. ಆ ಮೂಲಕ ಅಂಬೇಡ್ಕರ್ ಅವರು ನಮಗೆ ನೀಡಿರುವ ಹಕ್ಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ತಾಪಂ ಇಒ ಬಿ.ಕೆ.ಉತ್ತಮ ಮಾತನಾಡಿ, ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ದೇಶದಲ್ಲಿ ಹುಟ್ಟದೆ ಹೋಗಿದ್ದರೆ ಶೋಷಿತ ಸಮುದಾಯಗಳ ಜನರ ಸ್ಥಿತಿಗಳು ಇನ್ನು ಶೋಚನೀಯವಾಗಿರುತ್ತಿದ್ದವು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ, ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು, ತಾಲೂಕುಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

- - - -14ಕೆಸಿಎನ್‌ಜಿ1:

ಚನ್ನಗಿರಿ ತಾಲೂಕು ಕಚೇರಿ ಸಭಾಂಗಣದಲ್ಲಿ ಡಾ.ಅಂಬೇಡ್ಕರ್, ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮವನ್ನು ತಹಸೀಲ್ದಾರ್ ಎರ್ರಿಸ್ವಾಮಿ ಉದ್ಘಾಟಿಸಿದರು.