ಕಲ್ಲೂರು ಗ್ರಾಮದಲ್ಲಿ ಡಾ.ಅಂಬೇಡ್ಕರ್‌ ಜಯಂತಿ

| Published : Apr 17 2024, 01:25 AM IST

ಸಾರಾಂಶ

ಬಾಬಾಸಾಹೇಬರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಅವಮಾನ, ನೋವುಗಳನ್ನು ಅನುಭವಿಸಿದರು ಎಂದು ಗ್ರಾಪಂ ಉಪಾಧ್ಯಕ್ಷೆ ಸುಮಿತ್ರ ಶಿವಯ್ಯ ತಿಳಿಸಿದರು

ಕನ್ನಡಪ್ರಭ ವಾರ್ತೆ ಗುಬ್ಬಿ

ಬಾಬಾಸಾಹೇಬರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಅವಮಾನ, ನೋವುಗಳನ್ನು ಅನುಭವಿಸಿದರು ಎಂದು ಗ್ರಾಪಂ ಉಪಾಧ್ಯಕ್ಷೆ ಸುಮಿತ್ರ ಶಿವಯ್ಯ ತಿಳಿಸಿದರು.

ಗುಬ್ಬಿ ತಾಲೂಕಿನ ಕಲ್ಲೂರು ಗ್ರಾಮದ ಡಾ.ಅಂಬೇಡ್ಕರ್ ಯುವಕ ಸಂಘದ ವತಿಯಿಂದ 133ನೇ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉಧ್ಘಾಟಸಿ ಮಾತನಾಡಿ, ಅಂಬೇಡ್ಕರ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು, ಅವರು ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎರಡರಿಂದಲೂ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದರು ಎಂದು ತಿಳಿಸಿದರು.

ತಾವು ಅನುಭವಿಸಿದ ನೋವುಗಳನ್ನು ತನ್ನ ಸಮಾಜದವರು ಅನುಭವಿಸಬಾರದು ಎಂಬ ದೃಷ್ಟಿಯಿಂದ ಸಾಕಷ್ಟು ಹೋರಾಟಗಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು.ಅವರು ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ. ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಮಹಮದ್ ಯೂಸುಫ್ ಮಾತನಾಡಿ, ಗ್ರಾಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಾಬ ಸಾಹೇಬರ ಜನ್ಮದಿನವನ್ನು ಮನೆಯ ಹಬ್ಬದಂತೆ ಎಲ್ಲರೂ ಶ್ರದ್ಧೆಯಿಂದ ಆಚರಣೆ ಮಾಡುತ್ತಿರುವುದು ನೋಡಿದರೆ ಅಂಬೇಡ್ಕರ್ ರವರ ಆಶಯದಲ್ಲಿ ನಡೆಯುತ್ತಿದ್ದೇವೆ ಎನಿಸುತ್ತಿದೆ. ಶಿಕ್ಷಣ, ಸಂಘಟನೆ,ಹೋರಾಟದ ಹಾದಿಯಲ್ಲಿ ಎಲ್ಲರು ಸಹ ನೆಡೆಯುವಂತೆ ಕಾಣುತ್ತಿರುವುದು ಬಹಳ ಸಂತೋಷ ಸಂಗತಿ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಸಹ ಮೈಗೂಡಿಸಿಕೊಳ್ಳುವ ಮೂಲಕ ಆದರ್ಶ ಪ್ರಾಯವಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರ ಶಿವಯ್ಯ,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾಗ್ಯಮ್ಮ, ಲಕ್ಷ್ಮಯ್ಯ .ತಿಮ್ಮಯ್ಯ. ಚಿಕ್ಕಣ್ಣ. ಶಾಂತರಾಜು.ಶಿಕ್ಷಕರ ಶಿವಯ್ಯ.ನರಸಿಂಹ ಮೂರ್ತಿ. ಹಾಗೂ ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.