ಕನ್ನಡಪ್ರಭ ವಾರ್ತೆ ಬಾಗಲಕೋಟೆ ಶಿಕ್ಷಣವೇ ಸಮಾನತೆಯ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದರು ಡಾ.ಅಂಬೇಡ್ಕರ್‌ ಅವರು. ಅಂಬೇಡ್ಕರ ಅವರ ಸಾಧನೆ, ಹೋರಾಟ, ರಾಷ್ಟ್ರಪ್ರೇಮ ನಮಗೆ ಸದಾ ಪ್ರೇರಣೆಯಾಗಿದೆ. ಶಿಕ್ಷಣವೇ ಸಮಾನತೆಯ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದರು ಅವರು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶಿಕ್ಷಣವೇ ಸಮಾನತೆಯ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದರು ಡಾ.ಅಂಬೇಡ್ಕರ್‌ ಅವರು. ಅಂಬೇಡ್ಕರ ಅವರ ಸಾಧನೆ, ಹೋರಾಟ, ರಾಷ್ಟ್ರಪ್ರೇಮ ನಮಗೆ ಸದಾ ಪ್ರೇರಣೆಯಾಗಿದೆ. ಶಿಕ್ಷಣವೇ ಸಮಾನತೆಯ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದರು ಅವರು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.ನಗರದ ಶಿವಾನಂದ ಜಿನ್‌ನಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಅಡಿಪಾಯದ ಮೇಲೆ ನವ ಭಾರತವನ್ನು ಕಟ್ಟಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್. ಅವರ ಸಾಮಾಜಿಕ ನ್ಯಾಯದ ಚಿಂತನೆಗಳು, ಆರ್ಥಿಕ ಸುಧಾರಣೆಯ ದೃಷ್ಟಿಕೋನ ಹಾಗೂ ಸರ್ವರಿಗೂ ಸಮಬಾಳು ನೀಡುವ ಕಾನೂನು ಚೌಕಟ್ಟು ಇಂದಿಗೂ ನಮಗೆ ದಾರಿದೀಪವಾಗಿದೆ ಎಂದರು.

ಈ ವೇಳೆ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮುತ್ತಣ್ಣ ಬೆಣ್ಣೂರ, ರಾಜು ನಾಯ್ಕರ, ಯಲ್ಲಪ್ಪ ಬೇಂಡಿಗೇರಿ, ಬಸವರಾಜ ಕಟಗೇರಿ, ಅರುಣ ಲೋಕಾಪುರ, ದುಂಡಪ್ಪ ಏಳಮ್ಮಿ, ಶಿವಾನಂದ ಟವಳಿ, ಬಸವರಾಜ ಯಂಕಂಚಿ, ಬಸವರಾಜ ಹುನಗುಂದ, ಯಲ್ಲಪ್ಪ ನಾರಾಯಣಿ, ಸವಿತಾ ಲಂಕೆನ್ನವರ, ಶೋಭಾ ರಾವ್, ಪ್ರೇಮಾ ಅಂಬಿಗೇರ, ಶೀವಲಿಲಾ ಸಂಬಣ್ಣವರ, ಸ್ಮಿತಾ ಪವಾರ, ಗುಂಡುರಾವ್‌ ಶಿಂಧೆ, ಮಾನೇಶ ಅಂಬಿಗೇರ, ಗಿರೀಶ ಭಾಂಡಗೆ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ನಗರದಲ್ಲಿರುವ ಬಾಬಾಸಾಹೇಬ ಡಾ.ಅಂಭೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು.