ಡಾ.ಅಂಬೇಡ್ಕರ್‌ರನ್ನು ಸದಾ ಸ್ಮರಿಸಬೇಕು: ಡಿ.ಸುಧಾಕರ್‌

| Published : Mar 10 2025, 12:15 AM IST

ಸಾರಾಂಶ

ಹಿರಿಯೂರು ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕು ಮಹಿಳಾ ಕಾಂಗ್ರೆಸ್ ವತಿಯಿಂದ ಆಚರಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಸಚಿವ ಡಿ.ಸುಧಾಕರ್ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಡಿಸಿದ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ನಾವು ಸದಾ ಸ್ಮರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕು ಮಹಿಳಾ ಕಾಂಗ್ರೆಸ್ ವತಿಯಿಂದ ಆಚರಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಮಹಿಳೆ ಎನ್ನುವುದೇ ಒಂದು ದಿವ್ಯ ಶಕ್ತಿ. ನಾವು ಈ ಸಂದರ್ಭದಲ್ಲಿ ಮಹಿಳೆಯವರಿಗೆ ಮತದಾನದ ಹಕ್ಕನ್ನು ಕೊಡಿಸಿದಂತಹ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ರವರಿಗೆ ಕೃತಜ್ಞತೆ ಸಲ್ಲಿಸಬೇಕು. ಕಾಂಗ್ರೆಸ್ ಮಹಿಳೆಯರಿಗೆ ಮೀಸಲಾತಿ ನೀಡಿದ ಪಕ್ಷವಾಗಿದೆ. ರಾಜಕೀಯದಲ್ಲಿ ಮಹಿಳೆಯು ಗ್ರಾಪಂ ನಿಂದ ಹಿಡಿದು ರಾಷ್ಟ್ರಪತಿ ಹುದ್ದೆಯವರೆಗೂ ತಮ್ಮ ಹೆಜ್ಜೆಯ ಗುರುತುಗಳನ್ನು ಮೂಡಿಸಿದ್ದಾರೆ. ಈ ದೇಶವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 17 ವರ್ಷಗಳ ಕಾಲ ಆಳಿದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುರುಷ ಸಮಾನವಾಗಿ ಆಡಳಿತ ನಡೆಸಿ ಹೆಸರುವಾಸಿಯಾಗಿದ್ದರು. ಅವರ ಆಡಳಿತದ ಅವಧಿಯಲ್ಲಿ ಬರಗಾಲ ಬಂದಾಗ ವಿದೇಶದಿಂದ ಕೆಂಪು ಜೋಳವನ್ನು ತರಿಸಿ ದೇಶಕ್ಕೆ ವಿತರಿಸಿದ ದಿಟ್ಟ ಮಹಿಳೆ ಅವರಾಗಿದ್ದರು.

ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಕಣಿಕವಾಗಿ ಅಭಿವೃದ್ಧಿಪಡಿಸಿದ ಕೀರ್ತಿ ಅವರದ್ದಾಗಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯೆ ಗೀತಾ ನಾಗಕುಮಾರ್ ಮಾತನಾಡಿ, ನಮ್ಮ ಸಚಿವರು ಸೇರಿದಂತೆ ಕಾಂಗ್ರೆಸ್ ಪಕ್ಷವು ಸದಾ ಮಹಿಳೆಯವರಿಗೆ ಯಾವಾಗಲೂ ಬೆಂಬಲವಾಗಿ ನಿಂತಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ನಮ್ಮ ಸರ್ಕಾರ ಇನ್ನಷ್ಟು ಬಲ ತುಂಬಿದೆ ಎಂದರು.

ಈ ವೇಳೆ ಬಗರ್ ಹುಕುಂ ಸಮಿತಿ ಸದಸ್ಯೆ ಡಾ.ಸುಜಾತ, ಗ್ರಾಪಂ ಅಧ್ಯಕ್ಷೆ ರಮ್ಯ ನಾಗರಾಜ್, ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ನಗರಸಭೆ ಸದಸ್ಯರುಗಳಾದ ಕವಿತಾ ಲೋಕೇಶ್, ಮಂಜುಳಮ್ಮ, ದೇವಿರಮ್ಮ, ಮಮತ, ತಾಪಂ ಮಾಜಿ ಸದಸ್ಯೆ ತಿಪ್ಪಮ್ಮ, ಸೇವಾದಳ ಇಂದ್ರಮ್ಮ, ವಾರ್ಡ್ ಮಹಿಳಾ ಅಧ್ಯಕ್ಷರಾದ ಶರ್ಮಿಳಾ, ಸೆಲ್ವರಾಣಿ, ಭಾಗ್ಯಮ್ಮ, ತನುಜಾ, ಕರಿಯಮ್ಮ, ಅಸ್ರಫ್ ಜಾನ್, ಮಂಗಳ, ಮಲ್ಲಿಗೇಮ್ಮ, ಗಿರಿಜಮ್ಮ, ರೇಣುಕಮ್ಮ, ಹಸೀನಾ, ಮಾನಸಗೌಡ, ಸಲ್ಮ, ಮಂಜುಳಾ, ನಿಶಾ ಮುಂತಾದವರು ಹಾಜರಿದ್ದರು.