ಸಾರಾಂಶ
ವಿಜಯಪುರ: ಪಟ್ಟಣದ ಬಸ್ ನಿಲ್ದಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಯುವ ಕಾಂಗ್ರೆಸ್ ಮುಖಂಡ ಭಾನುಚಂದರ್, ಕಾಂಗ್ರೆಸ್ ಮುಖಂಡ ಹಾಗೂ ದೇವನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಅನಾವರಣಗೊಳಿಸಿ ಮಾಲಾರ್ಪಣೆ ಮಾಡಿದರು.
ವಿಜಯಪುರ: ಪಟ್ಟಣದ ಬಸ್ ನಿಲ್ದಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಯುವ ಕಾಂಗ್ರೆಸ್ ಮುಖಂಡ ಭಾನುಚಂದರ್, ಕಾಂಗ್ರೆಸ್ ಮುಖಂಡ ಹಾಗೂ ದೇವನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಅನಾವರಣಗೊಳಿಸಿ ಮಾಲಾರ್ಪಣೆ ಮಾಡಿದರು.
ಕಾಂಗ್ರೆಸ್ ಮುಖಂಡ ಎಂ.ನಾರಾಯಣಸ್ವಾಮಿ ಮಾತನಾಡಿ, ಹಿಂದೂಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಹೀಗೆ ಅವರವರ ಧರ್ಮಾನುಸಾರ ಧರ್ಮಗ್ರಂಥಗಳಿರಬಹುದು. ಆದರೆ, ದೇಶದ ಪ್ರಜೆಗಳಿಗೆ ಒಂದೇ ಒಂದು ಗ್ರಂಥವೇ ಅಂತಿಮ. ಅದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಅಸ್ಪೃಶ್ಯತೆಯ ಬೆಂಕಿಯಲ್ಲಿ ಬೆಂದರೂ, ದೇಶದ ಪ್ರಜೆಗಳೆಲ್ಲರೂ ಸಹೋದರರಂತೆ ಬಾಳಬೇಕು, ಅಸ್ಪೃಶ್ಯತೆಯ ಅಂಧಕಾರ ತೊಲಗಬೇಕು. ಶಿಕ್ಷಣವೆಂಬ ದೀಪದಿಂದ ಮಾತ್ರವೇ ಅದನ್ನು ತೊಲಗಿಸಲು ಸಾಧ್ಯ. ಜಾತಿ ಪದ್ಧತಿ ನಿರ್ಮೂಲನೆಯಾಗಬೇಕು. ರಾಜನು ಮಹಾರಾಣಿಯ ಗರ್ಭದಲ್ಲಿ ಜನಿಸುತ್ತಾನೆ. ಆದರೆ, ದೇಶವನ್ನಾಳುವ ನಾಯಕನು ಮತಪೆಟ್ಟಿಗೆಯಿಂದ ಹುಟ್ಟಬೇಕು ಎಂದು ಸಂಕಲ್ಪ ಮಾಡಿದ ಅಂಬೇಡ್ಕರ್, ಕೇವಲ ಒಂದು ಸಮುದಾಯಕ್ಕೆ ನಾಯಕರಲ್ಲ. ದೇಶದ ಆಸ್ತಿ. ಅವರನ್ನು ಪ್ರಮುಖವಾದ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಯುವಜನರಿಗೆ ಅವರ ಸಾಧನೆಗಳು, ಗುರಿಯ ಬಗ್ಗೆ ತಿಳಿಸಿಕೊಡುವಂತಹ ಕೆಲಸವಾಗಬೇಕು ಎಂದರು.ಯುವ ಮುಖಂಡ ಭಾನುಚಂದರ್ ಮಾತನಾಡಿ, ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿ, ತನ್ನ ತಾಯಿಯ ಗರ್ಭದಲ್ಲಿರುವಾಗಲಿಂದ ಸತ್ತು ಮಣ್ಣಿಗೆ ಸೇರುವ ತನಕ ತನ್ನ ರಕ್ಷಣೆ ಮಾಡಿಕೊಳ್ಳಲೆಂದು ಕಾನೂನು ರಚಿಸಿರುವ ಅಗ್ರಗಣ್ಯ ನಾಯಕ, ದೇಶಭಕ್ತ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಸಣ್ಣ ಮಕ್ಕಳಿಂದ ಹಿಡಿದು, ದೊಡ್ಡವರ ತನಕ, ಅವರ ಕುರಿತು ತಿಳಿದುಕೊಳ್ಳಬೇಕು. ವಿಶ್ವದಲ್ಲೆ ಅತ್ಯಂತ ಶ್ರೇಷ್ಠವಾದ ಸಂವಿಧಾನ ಭಾರತಕ್ಕೆ ನೀಡಿದ ಪೂಜನೀಯರು. ಯುವಕರಿಗೆ, ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪಟಾಕಿಗಳು ಸಿಡಿಸಿ, ಸಿಹಿ ಹಂಚಿಕೆ ಮಾಡಿ, ಸಂಭ್ರಮಿಸಿದರು. ನಾರಾಯಣಪ್ಪ, ಸುರೇಶ್, ವೆಂಕಟೇಶ್, ಮುನಿಯಪ್ಪ, ನರಸಿಂಹಮೂರ್ತಿ, ರಾಘವ, ತೇಜಾಶ್ರೀನಿವಾಸ್, ಚಂದ್ರು, ಆಜಾದ್, ರಾಜು, ವೆಂಕಟಸ್ವಾಮಿ, ದೇವರಾಜು ಮುಂತಾದವರು ಹಾಜರಿದ್ದರು.(ಫೋಟೊ ಕ್ಯಾಪ್ಷನ್)
ವಿಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಕಾಂಗ್ರೆಸ್ ಮುಖಂಡ ಎಂ.ನಾರಾಯಣಸ್ವಾಮಿ, ಯುವ ಮುಖಂಡ ಭಾನುಚಂದರ್ ಅನಾವರಣಗೊಳಿಸಿದರು.