ಸಾರಾಂಶ
ದಕ್ಷಿಣ ಅಮೇರಿಕದ ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ನಡೆದ 15ನೇ ಅಂತಾರಾಷ್ಟ್ರೀಯ ಮಕ್ಕಳ- ಚರ್ಮ ರೋಗ ತಜ್ಞ ವೈದ್ಯರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಮತ್ತು ಚರ್ಮರೋಗ ಖ್ಯಾತ ತಜ್ಞ ಡಾ.ಅರುಣ ಚಂ.ಇನಾಮದಾರ ಅವರಿಗೆ ಪ್ರೊ.ಸುರೀಂದರ ಕೌರ ಭಾರತದ ಅತ್ಯುತ್ತಮ ಚಿಕ್ಕ ಮಕ್ಕಳ ಚರ್ಮ ರೋಗ ತಜ್ಞ-2025 ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ದಕ್ಷಿಣ ಅಮೇರಿಕದ ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ನಡೆದ 15ನೇ ಅಂತಾರಾಷ್ಟ್ರೀಯ ಮಕ್ಕಳ- ಚರ್ಮ ರೋಗ ತಜ್ಞ ವೈದ್ಯರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಮತ್ತು ಚರ್ಮರೋಗ ಖ್ಯಾತ ತಜ್ಞ ಡಾ.ಅರುಣ ಚಂ.ಇನಾಮದಾರ ಅವರಿಗೆ ಪ್ರೊ.ಸುರೀಂದರ ಕೌರ ಭಾರತದ ಅತ್ಯುತ್ತಮ ಚಿಕ್ಕ ಮಕ್ಕಳ ಚರ್ಮ ರೋಗ ತಜ್ಞ-2025 ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಚಿಕ್ಕ ಮಕ್ಕಳ ಚರ್ಮ ರೋಗ ತಜ್ಞ ವೈದ್ಯರ ಸಂಘದ ಅಧ್ಯಕ್ಷೆ ಮತ್ತು ವಿಶ್ವದ ಅತ್ಯಂತ ಪ್ರಭಾವಿ ಚರ್ಮರೋಗ ವೈದ್ಯೆ ಅಮೇರಿಕದ ಪ್ರೊ.ಏಮಿ ಪ್ಯಾಲರ ಮಾತನಾಡಿ, ಡಾ.ಅರುಣ ಚಂ.ಇನಾಮದಾರ ಅವರ ಸೇವೆ ಭಾರತಕ್ಕಲ್ಲದೆ ವಿಶ್ವಕ್ಕೆಲ್ಲ ಹರಡಲಿ ಎಂದು ಶುಭ ಹಾರೈಸಿದರು. ಸಂಘಟನೆಯ ಸೆಕ್ರೆಟರಿ ಜನರಲ್ ಕುವೈತ್ ನ ಡಾ.ಆರತಿ ನಂದಾ ಮತ್ತು ಅರ್ಜೆಂಟೀನಾದ ಡಾ.ಪೌಲಾ ಲೂನಾ ಮಾತನಾಡಿ, ಡಾ. ಅರುಣ ಚಂ.ಇನಾಮದಾರ ಅವರು ಚರ್ಮರೋಗ ವಿಭಾಗಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಅರ್ಜೆಂಟೀನಾದ ಮಾರ್ಗರೀಟಾ, ವಿವಿಗಳ ಪ್ರಾಧ್ಯಾಪಕರ ಜೊತೆ ಡಾ.ಅರುಣ ಇನಾಮದಾರ ಸೇರಿದಂತೆ ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ್ದ ಸುಮಾರು 2000ಕ್ಕಿಂತ ಹೆಚ್ಚಿನ ತಜ್ಞವೈದ್ಯರು ಮುಂತಾದವರು ಭಾಗವಹಿಸಿದ್ದರು.