ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ನಿಲ್ಲಿಸಿರುವುದರಿಂದ ರೆಸಾರ್ಟ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನಾನುಕೂಲವಾಗಿ ಕುಟುಂಬಗಳು ಬೀದಿ ಪಾಲಾಗಿದೆ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ದಮ್ಮನಕಟ್ಟೆ ಸಫಾರಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ರೆಸಾರ್ಟ್ ಕಾರ್ಮಿಕರು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯದ ಆವರಣದಿಂದ ದಸಂಸ, ಪ್ರಗತಿಪರ ಸಂಘಟನೆಗಳು, ವಾಹನ ಚಾಲಕರು ಹಾಗೂ ರೆಸಾರ್ಟ್ ಗಳ ಕೂಲಿ ಕಾರ್ಮಿಕರ ಸಂಯುಕ್ತ ಆಶ್ರಯದಲ್ಲಿ ಸಫಾರಿ ಪ್ರಾರಂಭಿಸಿ ಎಂದು ಒತ್ತಾಯಿಸಿ ಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ದಾರಿಯುದ್ದಕ್ಕೂ ಸಫಾರಿ ಕೇಂದ್ರ ಪ್ರಾರಂಭಿಸುವಂತೆ ಘೋಷಣೆ ಹಾಕಿ ತಾಲೂಕು ಆಡಳಿತ ಸೌಧದ ಎದುರು ಮಾನವ ಸರಪಳಿ ನಿರ್ಮಿಸಿ ನಂತರ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.ಪ್ರತಿಭಟನೆಗೂ ಮುನ್ನ ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದಿಂದ ಸಾವಿರಾರು ಸಂಖ್ಯೆಯಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೊರಟು ತಾಲೂಕು ಆಡಳಿತ ಸೌಧದ ತಲುಪಿ ಪ್ರತಿಭಟಿಸಿದರುಪ್ರತಿಭಟನೆಯಲ್ಲಿ ರೆಸಾರ್ಟ್ ನ ಕಾರ್ಮಿಕ ಚಾಮರಾಜು ಮಾತನಾಡಿ, ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ನಿಲ್ಲಿಸಿರುವುದರಿಂದ ರೆಸಾರ್ಟ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನಾನುಕೂಲವಾಗಿ ಕುಟುಂಬಗಳು ಬೀದಿ ಪಾಲಾಗಿದೆ, ತಾಲೂಕಿನ ರೆಸಾರ್ಟ್ ಗಳಲ್ಲಿ ಸುಮಾರು ಎರಡು ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಇದರಿಂದ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು, ಆದರೆ ಸಫಾರಿ ಬಂದು ಮಾಡಿರುವ ಹಿನ್ನೆಲೆಯಲ್ಲಿ ಕೆಲಸವನ್ನ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಾಡುಮನೆ ಪ್ರಕಾಶ್ ಮಾತನಾಡಿ, ಸರಗೂರು ತಾಲೂಕಿನಲ್ಲಿ ನಡೆದ ಹುಲಿ ದಾಳಿ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರ ಸಫಾರಿ ಬಂದ್ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದರು.ಕಾಡುಮನೆ ಪ್ರಸನ್ನ, ರೈತ ಮುಖಂಡ ಪ್ರಭಾಕರ್, ರೆಸಾರ್ಟ್ ಕಾರ್ಮಿಕ ಮಹಿಳೆ ಸರಸ್ವತಿ ಮಾತನಾಡಿದರು.ನಂತರ ತಹಸೀಲ್ದಾರ್ ಶ್ರೀನಿವಾಸ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ದಸಂಸ ಸಣ್ಣಕುಮಾರ್, ಚಾ. ಶಿವಕುಮಾರ್, ಹೈರಿಗೆ ಶಿವರಾಜು, ಜಿವಿಕ ಬಸವರಾಜು, ಅನುಷ ಕೋಟೆ, ಪುಟ್ಟಮಾದು, ದೇವಯ್ಯ, ಶಿವಪ್ಪ, ವಿನೋದ್, ವಿಶ್ವ ಆರಾದ್ಯ, ಗೋವಿಂದ, ಸ್ವಾಮಿ, ಪ್ರಕಾಶ್, ಆಟೋ ಕುಮಾರ್, ವಾಹನ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ್, ಮಣಿ ಕಂಠ, ಆಕಾಶ್, ಸದಾಶಿವ, ಮಂಜು, ಚಾಮರಾಜು, ಚಂದ್ರು, ಶರತ್, ಷಣ್ಮುಗಂ, ಉದಯ ಇದ್ದರು.