ಮಾನವ ವಿರೋದಿ ಪದ್ಧತಿಗಳು ತುಂಬಿ ತುಳುಕುತ್ತಿದ್ದ ಭಾರತ ದೇಶದಲ್ಲಿ ಅಂಬೇಡ್ಕರ್ ಅಂತಹ ಒಬ್ಬ ವ್ಯಕ್ತಿ-ವ್ಯಕ್ತಿತ್ವ ಹುಟ್ಟದೇ ಇರುತ್ತಿದ್ದರೆ ಅಸ್ಪೃಶ್ಯತೆ, ಜಾತಿ ತಾರತಮ್ಯ, ಪುರುಷ ಪ್ರಾಧಾನ್ಯ, ಅನಿಷ್ಠ ಪದ್ಧತಿಗಳು, ಮಹಿಳೆಯರ ಮೇಲಿನ ಸಾಮಾಜಿಕ ದೌರ್ಜನ್ಯಗಳನ್ನು ಹೊತ್ತ ಭಾರತದ ಪರಿಸ್ಥಿತಿ ಈಗ ಹೇಗೆ ಇರುತ್ತಿತ್ತು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಗತ್ತಿಗೆ ಸಮಾನತೆ ಮತ್ತು ಪ್ರಬುದ್ಧತೆಯ ಸಂದೇಶ ನೀಡಿದ ಮಹಾನ್ ಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ಪಿ.ಪ್ರಕಾಶ್ ಹೇಳಿದರು.ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಹೆರಿಗೆವಾರ್ಡ್ ಬಳಿ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮತ್ತು ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಆಯೋಜಿಸಿದ್ದ ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತಿ ಪ್ರಯುಕ್ತ ಗರ್ಭಿಣಿ ಬಾಣಂತಿ ಮತ್ತು ಅಗತ್ಯಯುಳ್ಳವರಿಗೆ ಪೌಷ್ಟಿಕಾಹಾರ ವಿತರಣೆ ಮತ್ತು ವಿವಿಧ ಸೇವಾ ಕಾರ್ಯಕ್ಕೆ ಚಾಲನೆ ನಿಡಿ ಅವರು ಮಾತನಾಡಿದರು.ಮಾನವ ವಿರೋದಿ ಪದ್ಧತಿಗಳು ತುಂಬಿ ತುಳುಕುತ್ತಿದ್ದ ಭಾರತ ದೇಶದಲ್ಲಿ ಅಂಬೇಡ್ಕರ್ ಅಂತಹ ಒಬ್ಬ ವ್ಯಕ್ತಿ-ವ್ಯಕ್ತಿತ್ವ ಹುಟ್ಟದೇ ಇರುತ್ತಿದ್ದರೆ ಅಸ್ಪೃಶ್ಯತೆ, ಜಾತಿ ತಾರತಮ್ಯ, ಪುರುಷ ಪ್ರಾಧಾನ್ಯ, ಅನಿಷ್ಠ ಪದ್ಧತಿಗಳು, ಮಹಿಳೆಯರ ಮೇಲಿನ ಸಾಮಾಜಿಕ ದೌರ್ಜನ್ಯಗಳನ್ನು ಹೊತ್ತ ಭಾರತದ ಪರಿಸ್ಥಿತಿ ಈಗ ಹೇಗೆ ಇರುತ್ತಿತ್ತು ಎಂದು ನುಡಿದರು.
ಅಂದು ಅಂಬೇಡ್ಕರ್ ಅವರು ಹಠ ಹಿಡಿದು ಶಿಕ್ಷಣವನ್ನು ಪಡೆದು ಶಿಕ್ಷಣವನ್ನೇ ತಮ್ಮ ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡರು. ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಉನ್ನತ ಶಿಕ್ಷಣವನ್ನು ಪಡೆದರು, ಎಷ್ಟೇ ಕಠಿಣ ಸಂದರ್ಭಗಳಿದ್ದರೂ, ದೃಢಸಂಕಲ್ಪವು ಪ್ರತಿಯೊಂದು ಗುರಿಯನ್ನು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದರು ಎಂದು ಸ್ಮರಿಸಿದರು.ಸಂವಿಧಾನ ಮೂಲಕ ಸರ್ವ ಜನಾಂಗವನ್ನು ಉದ್ದರಿಸಿದ ಕೀರ್ತಿ ವಿಶ್ವಜ್ಞಾನಿ ಅಂಬೇಡ್ಕರ್ ಅವರಿಗೆ ಸಲ್ಲಿಸುತ್ತದೆ. ಮೀಸಲಾತಿ ಮೂಲಕ ಉದ್ಯೋಗ, ಆರ್ಥಿಕ ಭದ್ರತೆ, ಮತದಾನದಿಂದ ರಾಜಕೀಯ ಶಕ್ತಿ ನೀಡಿದ ಬಾಬಾಸಾಹೇಬರಿಗೆ ಎಲ್ಲರೂ ಚಿರಋಣಿಗಳಾಗಿರಬೇಕು ಎಂದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಮತ್ತು ಎಸ್ಸಿ ವಿಭಾಗ ಅಧ್ಯಕ್ಷ ಶ್ರೀಧರ್ ಮಾತನಾಡಿದರು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜೈಭೀಮ್ ಘೋಷಣೆ ಕೂಗಿದರು.ಕಾರ್ಯಕ್ರಮದಲ್ಲಿ ಸಂವಿಧಾನಸೇನೆ ಕರ್ನಾðಟಕ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳಾದ ಚಂದಗಾಲು ವಿಜಯ್‌ಕುಮಾರ್, ಮುಡಾ ಮಾಜಿ ಸದಸ್ಯೆ ಕಮಲಾರಾಜ್, ದೇವರಾಜ್, ಯೋಗೇಶ್ ಮಂಗಲ, ದಸಂಸ ಎಂ.ವಿ.ಕೃಷ್ಣ, ಸುವರ್ಣವತಿ, ಸಬ್ರಿನ್‌ತಾಜ್ ಮತ್ತಿತರರಿದ್ದರು.