ಸಾರಾಂಶ
ಮಕ್ಕಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ತೋರಬೇಕು.
ದಾಂಡೇಲಿ: ಅಂಬೇಡ್ಕರ ಅಭಿಮಾನಿ ಸೇನೆ ಭೀಮ ಧ್ವನಿ ಸಂಸ್ಥೆಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಭೀಮೋತ್ಸವ ಕಾರ್ಯಕ್ರಮವನ್ನು ಸರಳ ಅರ್ಥಪೂರ್ಣವಾಗಿ ಇತ್ತಿಚೇಗೆ ಸಂಘದ ಕಚೇರಿಯಲ್ಲಿ ನಡೆಯಿತು.ಪರಿಜ್ಞಾನಾಶ್ರಮ ಶಾಲೆಯ ಮುಖ್ಯೋದ್ಯಾಪಕಿ ಸುನಿತಾ ನಾಯ್ಕ ಕಾರ್ಯಕ್ರವನ್ನು ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳು ಮುಂದಿನ ಭವ್ಯಭಾರತದ ಪ್ರಜೆಗಳು, ಮಕ್ಕಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ತೋರಬೇಕು. ಬುದ್ದ, ಬಸವ, ಅಂಬೇಡ್ಕರ ಅವರ ಆದರ್ಶ, ತತ್ವಗಳನ್ನು ಪಾಲಿಸಬೇಕು. ಗುರುಹಿರಿಯರನ್ನು ಗೌರವಿಸಬೇಕು. ಎಲ್ಲರ ಜೊತೆ ಪ್ರೀತಿ ವಿಶ್ವಾಸ ಸಾಮರಸ್ಯದಿಂದ ಬದುಕಬೇಕು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು ಎಂದರು.
ಧನುಶ್ರೀ ಮಾಳಕರಿ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ವಿವಿಧ ಶಾಲಾ ಕಾಲೇಜು ಮಕ್ಕಳು ಅಂಬೇಡ್ಕರ ಹಾಗೂ ಸಂವಿಧಾನ ಘೋಷವಾಕ್ಯದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಸಂಘದ ಅಧ್ಯಕ್ಷ ರವಿ ಮಾಳಕರಿ, ಲತಾ ಕಾಂಬಳೆ, ಕವಿತಾ ಸದಬ, ಪೂಜಾ ಮಾಳಕರಿ, ರಾಜಶೇಖರ ನಿಂಬಾಳಕರ, ಇಮಾಮ ಸಾಬ ಬೈಲೂರ, ನಾಗರಾಜ ಕಾಂಬಳೆ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೊನೆಯಲ್ಲಿ ರವಿ ಮಾಳಕರಿ ವಂದಿಸಿದರು.