ಸಮಾಜ ಕಲ್ಯಾಣ ಇಲಾಖೆಯ ವಿ. ವೆಂಕಟರಾಜುಗೆ ಬೀಳ್ಕೊಡುಗೆ

| Published : May 01 2025, 12:48 AM IST

ಸಾರಾಂಶ

ಕೆಲಸಕ್ಕೆ ಸೇರಿದ ದಿನವೇ ನಿವೃತ್ತಿ ದಿನವು ಗೊತ್ತಾಗಿರುತ್ತದೆ. ವೆಂಕಟರಾಜು ಅವರು ಉತ್ತಮ ಕೆಲಸಗಾರರಾಗಿದ್ದರು. ಸ್ನೇಹ ಬಳಗವನ್ನೇ ಕಟ್ಟಿಕೊಂಡಿದ್ದವರು

ಕನ್ನಡಪ್ರಭ ವಾರ್ತೆ ಮೈಸೂರುಸಮಾಜ ಕಲ್ಯಾಣ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಿ. ವೆಂಕಟರಾಜು ಅವರನ್ನು ಇಲಾಖೆ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ, ಬೀಳ್ಕೊಡಲಾಯಿತು.ಪಡುವಾರಹಳ್ಳಿಯಲ್ಲಿರುವ ಡಾ. ಬಾಬು ಜಗಜೀವನರಾಂ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ ಮಾತನಾಡಿ, ವೆಂಕಟರಾಜು ಅವರು ನಮ್ಮ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅವರು ಇಲಾಖೆಯಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಯಾವುದೇ ಜಯಂತಿಗಳಾಗಲಿ ಕಾರ್ಯಕ್ರಮಗಳಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದರು. ಅವರೊಬ್ಬ ಸ್ನೇಹಜೀವಿಯಾಗಿದ್ದರು ಯಾವುದೇ ಕೆಲಸ ಕೊಟ್ಟರು ಶ್ರದ್ಧೆಯಿಂದ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತಿದ್ದರು. ಮುಖಂಡರುಗಳ ಜೊತೆ ಉತ್ತಮ ಒಡನಾಟವಿಟ್ಟು ಕೊಂಡಿದ್ದರು. ಸರ್ಕಾರಿ ನೌಕರರಿಗೆ ನಿವೃತ್ತಿ ಸಹಜ. ಆದ್ದರಿಂದ ಅವರಿಗೆ ದೇವರು ಒಳ್ಳೆಯ ಆರೋಗ್ಯಆಯುಷ್ಯ ನೀಡಲಿ ಎಂದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಕೆ. ಮಲ್ಲೇಶ್ ಮಾತನಾಡಿ, ಕೆಲಸಕ್ಕೆ ಸೇರಿದ ದಿನವೇ ನಿವೃತ್ತಿ ದಿನವು ಗೊತ್ತಾಗಿರುತ್ತದೆ. ವೆಂಕಟರಾಜು ಅವರು ಉತ್ತಮ ಕೆಲಸಗಾರರಾಗಿದ್ದರು. ಸ್ನೇಹ ಬಳಗವನ್ನೇ ಕಟ್ಟಿಕೊಂಡಿದ್ದವರು ಅವರಿಗೆ ಅವರ ಕುಟುಂಬದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು. ವಿ. ವೆಂಕಟರಾಜು ಮಾತನಾಡಿ, 35 ವರ್ಷ ಇಲಾಖೆಯಲ್ಲಿ ಕೆಲಸ ಮಾಡಲು ಸಹಕರಿಸಿದ ಎಲ್ಲ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಸಹಾಯಕ ನಿರ್ದೇಶಕ ಜನಾರ್ಧನ್, ಪುಟ್ಟಯ್ಯ ಸುಲೋಚನಾ, ಶ್ರೀನಿವಾಸ್‌ ಪ್ರಸಾದ್, ರಮೇಶ್, ಚಿಕ್ಕೀರಯ್ಯ, ನಂಜಪ್ಪ, ಹೇಮಚಂದ್ರ, ಕಾಂತರಾಜ್, ಜಗದೀಶ್, ವೆಂಕಟರಾಜು ಪತ್ನಿ ಮಂಜುಳಾದೇವಿ, ಮಕ್ಕಳಾದ ನಿರಂಜನ್‌ ಕುಮಾರ್, ಪ್ರಫುಲ್ಲಾ, ಸಾಧನಾ, ಪಲ್ಲವಿ ಇದ್ದರು.ನಿವೃತ್ತರಾದ ನಾರಾಯಣಗೌಡ, ನಾಗರತ್ನಮ್ಮ ಅವರನ್ನು ಅಭಿನಂದಿಸಲಾಯಿತು. -----------------