ಡಾ. ಬಾಬುರಾಜೇಂದ್ರ ನಾಯಕ ಕಾಂಗ್ರೆಸ್‌ ಸೇರ್ಪಡೆ

| Published : Apr 24 2024, 02:22 AM IST

ಡಾ. ಬಾಬುರಾಜೇಂದ್ರ ನಾಯಕ ಕಾಂಗ್ರೆಸ್‌ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಸಚಿವ ಶಿವಾನಂದ ಎಸ್. ಪಾಟೀಲ ಸಮ್ಮುಖದಲ್ಲಿ ಡಾ. ಬಾಬುರಾಜೇಂದ್ರ ನಾಯಕ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಸಚಿವ ಶಿವಾನಂದ ಎಸ್. ಪಾಟೀಲ ಸಮ್ಮುಖದಲ್ಲಿ ಡಾ. ಬಾಬುರಾಜೇಂದ್ರ ನಾಯಕ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಜಿಲ್ಲೆಯ ಹಲವು ಬಿಜೆಪಿ, ಜೆಡಿಎಸ್ ಮುಖಂಡರು ಸೇರಿದ್ದರು. ವಕೀಲರುಗಳಾದ ಆಸೀಫ್ ಮುಜಾವರ, ಮಹ್ಮದಪಟೇಲ ಬಗಲಿ, ಮೊಯುದ್ದೀನ ಪೀರಜಾದೆ, ಉಸ್ಮಾನ ಕುರಿ ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರುಗಳಾದ ನಜೀರ ಬಗಲಿ, ರಾಜಅಹ್ಮದ ಬಗಲಿ, ದಾವಲ ಕೊರಬು, ಖಾದರ ಕೊರಬು, ಮುನಾಫ ಬಗಲಿ, ದಾದಾಪೀರ ನದಾಫ್, ಮೈಬೂಬ ಬಗಲಿ, ಯುಸೂಫ ಹೆಬ್ಬಾಳ, ಮಹ್ಮದಪಟೇಲ ಬಗಲಿ, ಸಾಜಿದ ಮುಲ್ಲಾ, ಜಾವೀದ ಅಪಘಾನ ಮುಂತಾದವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ವೇಳೆ ಈ ಸಂದರ್ಭದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ, ಮಾಜಿ ಶಾಸಕ ಮಕ್ಬೂಲ ಬಾಗವಾನ, ಶರಣಪ್ಪ ಶುಣಗಾರ, ಮುಖಂಡರಾದ ಅಬ್ದುಲ್ ಹಮೀದ ಮುಶ್ರೀಫ್, ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ವೀಕ್ಷಕ ಸಯೀದ್ ಬುರಾಹಾನುದ್ದೀನ್ ಮುಂತಾದವರು ಇದ್ದರು.