ಸಾರಾಂಶ
ಕನ್ನಡ ಸಾಹಿತ್ಯ ಪರಿಷತ್‌ನಿಂದ ದತ್ತಿ ಉಪನ್ಯಾಸ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹಾವೇರಿಚಾರಿತ್ರಿಕ ನೋಟಗಳ ಮೂಲಕ ಜನಸಾಮಾನ್ಯರ ಬದುಕಿನ ಮಗ್ಗುಲಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ತೋರಿಸಿಕೊಟ್ಟ ಸಂಶೋಧಕ ಡಾ. ಭೋಜರಾಜ ಪಾಟೀಲರು ದೇಸಿ ಅಧ್ಯಯನಗಳ ಚಿಂತಕ ಎಂದು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಅಭಿಪ್ರಾಯ ಪಟ್ಟರು.ಇಲ್ಲಿಯ ಗೆಳೆಯರ ಬಳಗದ ಶಾಲಾ ಆವರಣದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳ ಜಂಟಿ ಆಶ್ರಯದಲ್ಲಿ ಜರುಗಿದ ಡಾ.ಭೋಜರಾಜ ಪಾಟೀಲರ ಸಂಶೋಧನೆ ಹಾಗೂ ನೆನಪು ವಿಷಯದಡಿ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಸಂಶೋಧನೆಯಲ್ಲಿ ರಾಜಿಯಾಗದ ಡಾ. ಭೋಜರಾಜ ಪಾಟೀಲರು ಈ ನೆಲದ ಸಿದ್ಧಾಂತವನ್ನು ತಾತ್ವಿಕವಾಗಿ ಅಧ್ಯಯನ ಮಾಡಿದವರು. ಜಾನಪದ ವಿಶ್ವವಿದ್ಯಾಲಯ ಪ್ರಕಟಿಸಿದ ಹಾವೇರಿ ಜಿಲ್ಲಾ ಗ್ರಾಮ ಚರಿತ್ರೆ ಕೋಶ ರಚಿಸುವಾಗ ಸಂಶೋಧನೆಯ ಮಾದರಿಗಳನ್ನು ತೋರಿಸಿಕೊಟ್ಟರು. ೨೫ಕ್ಕೂ ಹೆಚ್ಚು ನಾಟಕಗಳು, ನೂರಾರು ಲೇಖನಗಳು, ನಾಟಕ, ಕಥಾ ಸಂಕಲನ, ಪೌರಾಣಿಕ, ಧಾರ್ಮಿಕ ಸಂಗತಿಗಳ ಬಹು ಆಯಾಮಗಳಲ್ಲಿ ತಮ್ಮನ್ನು ಸಂಶೋಧನೆಗೆ ಅರ್ಪಿಸಿಕೊಂಡಿದ್ದರು. ಸಿದ್ಧ ಮಾದರಿ ಸಂಶೋಧನೆಗೆ ಅಂಟಿಕೊಳ್ಳದೇ ವಿನೂತನ ಪ್ರಯೋಗಗಳಿಗೆ ಕೈ ಹಾಕಿ ಸೈ ಎನಿಸಿಕೊಂಡರು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಮಾತನಾಡಿ, ಸಾತ್ವಿಕ ಮತ್ತು ನಿಷ್ಠುರ ಸ್ವಭಾವದ ಡಾ.ಭೋಜರಾಜ ಪಾಟೀಲರು ಶಿಷ್ಯರ ಶ್ರೇಯಸ್ಸು ಬಯಸಿದವರು. ಕ್ಲಿಷ್ಟಕರವಾಗಿರುವ ಸಂಶೋಧನೆಯಲ್ಲಿ ಉತ್ಸುಕರಾಗಿದ್ದರು. ಜೊತೆಗೆ ಉದಯೋನ್ಮುಖ ಸಂಶೋಧಕರಿಗೆ ಮಾರ್ಗದರ್ಶಿಯೂ ಆಗಿದ್ದರು ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ ಮಾತನಾಡಿ, ನಾಗರ ಖಂಡ-೭೦ ಕೃತಿಯ ಮೂಲಕ ಹೊಸ ಭಾಷ್ಯ ಬರೆದ ಡಾ.ಭೋಜರಾಜ ಪಾಟೀಲರು ಸಂಶೋಧನೆಗೆ ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.ಹಿರಿಯ ಸಾಹಿತಿಗಳಾದ ಕೆ.ಬಿ. ಬಇಕ್ಷಾವರ್ತಿಮಠ, ಲೀಲಾವತಿ ಪಾಟೀಲ, ಪುಷ್ಪಾವತಿ ಕೆರೂಡಿ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಎಸ್.ಎನ್. ದೊಡ್ಡಗೌಡ್ರ, ವಿ.ಪಿ. ದ್ಯಾಮಣ್ಣವರ, ವಿ.ಎಂ. ಪತ್ರಿ, ಅಮೃತಮ್ಮ ಶೀಲವಂತರ, ಎಸ್.ಆರ್. ಹಿರೇಮಠ, ವೀರಣ್ಣ ಬೆಳವಡಿ, ಶಂಕರ ಸುತಾರ, ರೇಣುಕಾ ಗುಡಿಮನಿ, ಶಶಿಕಲಾ ಅಕ್ಕಿ, ಪೃಥ್ವಿರಾಜ ಬೆಟಗೇರಿ, ನಾಗರಾಜ ಹುಡೇದ ಉಪಸ್ಥಿತರಿದ್ದರು. ನಾಗರಾಜ ನಡುವಿನಮಠ ನಿರೂಪಿಸಿದರು. ಡಾ.ಗೀತಾ ಸುತ್ತಕೋಟಿ ಸ್ವಾಗತಿಸಿದರು. ಅಶ್ವಿನಿ ಪಾಟೀಲ ವಂದಿಸಿದರು.ಬಾಕ್ಸ್:ಹಾವೇರಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಟ್ಟಡ ನಿರ್ಮಾಣಕ್ಕೆ ನಮ್ಮ ತಂದೆ ಡಾ.ಭೋಜರಾಜ ಪಾಟೀಲರ ಸ್ಮರಣಾರ್ಥ ೨೫ ಸಾವಿರ ರು. ಕಟ್ಟಡ ನಿಧಿ ಮತ್ತು ಸಂಶೋಧನಾತ್ಮಕ ಕೃತಿ ಪ್ರಕಟಿಸುವ ಉದಯೋನ್ಮುಖ ಸಂಶೋಧಕರಿಗೆ ರಾಜ್ಯಮಟ್ಟದಲ್ಲಿ ಪ್ರತಿ ವರ್ಷ ೧೦ ಸಾವಿರ ರು. ನಗದು ಪುರಸ್ಕಾರ ನೀಡಲು ಬಯಸುವೆ. ಗುಹೇಶ್ವರ ಪಾಟೀಲ, ಗೌರವ ಕಾರ್ಯದರ್ಶಿ ಜ್ಞಾನಗಂಗಾ ಶಿಕ್ಷಣ ಸಮಿತಿ ಹಾವೇರಿ.೧೭ಎಚ್‌ವಿಆರ್೨ಹಾವೇರಿ ನಗರದ ಗೆಳೆಯರ ಬಳಗದ ಶಾಲಾ ಆವರಣದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಶೋಧಕ ಡಾ. ಭೋಜರಾಜ ಪಾಟೀಲರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.