ಮಳವಳ್ಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಸಂಘಟನೆಗಳು, ಕಚೇರಿಗಳಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಸಂಘಟನೆಗಳು, ಕಚೇರಿಗಳಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪುರಸಭೆಯಲ್ಲಿ ನಡೆದ ಜಯಂತಿಯಲ್ಲಿ ಬದುಕಿನ ದಾರಿ ತಿಳಿಸಿಕೊಟ್ಟ ಅರ್ಥಿಕ ತಜ್ಞ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೇ ಅವರ ಅದರ್ಶ ಚಿಂತನೆಗಳನ್ನು ಪ್ರತಿನಿತ್ಯವೂ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಪುರಸಭೆಯ ನವೀನಕುಮಾರಿ, ಭೈರಪ್ಪ ಸೇರಿದಂತೆ ಇತರರು ಇದ್ದರು.

ಬಿಜೆಪಿ ಕಚೇರಿಯಲ್ಲಿ ಪಕ್ಷದಿಂದ ಮಂಡಲ ಅಧ್ಯಕ್ಷ ಮಧುಗಂಗಾಧರ್ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಿದರು. ಈ ವೇಳೆ ತಾಲೂಕು ಬಿಜೆಪಿ ಪಕ್ಷದ ಮುಖಂಡರಾದ ಯಮದೂರು ಸಿದ್ದರಾಜು, ಹೆಬ್ಬಣಿ ಬಸವರಾಜ್, ಚಿಕ್ಕಣ್ಣ. ಉಮೇಶ್ , ಕೃಷ್ಣ ಗೌಡ, ವೇಣು, ಜಗ್ಗಣ್ಣ, ಅಶೋಕ್ ಕುಮಾರ್, ಶಿವಲಿಂಗ ಸ್ವಾಮಿ, ಮಹೇಶ್, ಪ್ರಸಾದ್, ವಕ್ಕರಹಳ್ಳಿ ಬಸವರಾಜ್, ಶಶಿಕುಮಾರ್, ಮಲ್ಲಿಕ್, ಮಲ್ಲಪ್ಪ, ಶಿವಕುಮಾರ್, ಮಹೇಶ ಇನ್ನೂ ಹಲವಾರು ಯುವ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಅಂಬೇಡ್ಕರ್ ಜಯಂತಿಯನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ತಾಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ, ಆಡಳಿತಾಧಿಕಾರಿ ಡಾ.ಸಂಜಯ್, ವೈದ್ಯರಾದ ಸುನೀಲ್‌ಕುಮಾರ್ ಸೇರಿದಂತೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.

ಸೆಸ್ಕಾಂ, ತೋಟಗಾರಿ, ಕೃಷಿ ಇಲಾಖೆ, ತಾಲೂಕು ಕಚೇರಿ, ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಜಯಂತಿ ಅಂಗವಾಗಿ ಸರ್ಕಾರಿ ಕಚೇರಿಗಳಿಗೆ ದೀಪಾಲಾಂಕಾರ ಮಾಡಲಾಗಿತ್ತು.