ವೈದ್ಯ ಸಾಹಿತಿ ಡಾ.ಸಿ.ಆರ್‌.ಚಂದ್ರಶೇಖರ್ ಪದ್ಮಶ್ರೀ ಗೌರವ

| Published : Jan 27 2024, 01:18 AM IST

ವೈದ್ಯ ಸಾಹಿತಿ ಡಾ.ಸಿ.ಆರ್‌.ಚಂದ್ರಶೇಖರ್ ಪದ್ಮಶ್ರೀ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಮನೋ ವೈದ್ಯರಾಗಿ ಮತ್ತು ವೈದ್ಯ ಸಾಹಿತಿಗಳಾಗಿ ಸಾಮಾಜಿಕ ಬದ್ಧತೆಯಿಂದ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಲ್ಲಿ ಮುಂಚೂಣಿಯಲ್ಲಿರುವ ಡಾ.ಸಿ.ಆರ್. ಚಂದ್ರಶೇಖರ್‌ (ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್) ಅವರಿಗೆ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

ರಾಮನಗರ: ಮನೋ ವೈದ್ಯರಾಗಿ ಮತ್ತು ವೈದ್ಯ ಸಾಹಿತಿಗಳಾಗಿ ಸಾಮಾಜಿಕ ಬದ್ಧತೆಯಿಂದ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಲ್ಲಿ ಮುಂಚೂಣಿಯಲ್ಲಿರುವ ಡಾ.ಸಿ.ಆರ್. ಚಂದ್ರಶೇಖರ್‌ (ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್) ಅವರಿಗೆ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

ಲಕ್ಷಾಂತರ ಜನರ ಮನಸ್ಸಿನ ಸ್ವಾಸ್ಥ್ಯ ಕಾಪಾಡುವಲ್ಲಿ ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್ ಅವರ ಪುಸ್ತಕಗಳು, ಭಾಷಣಗಳು ಮತ್ತು ಆಪ್ತ ಸಲಹೆ ಜನಜನಿತವಾಗಿವೆ.1948ರ ಆಗಸ್ಟ್ 12ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬಿ.ಎಂ.ರಾಜಣ್ಣಾಚಾರ್ ಮತ್ತು ಎಸ್.ಪಿ.ಸರೋಜಮ್ಮ ದಂಪತಿ ಪುತ್ರರಾಗಿ ಚಂದ್ರಶೇಖರ್ ಜನಿಸಿದರು. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿದರು. ಆಂಗ್ಲ ಮಾಧ್ಯಮದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚನ್ನಪಟ್ಟಣ ತಾಲೂಕಿಗೆ ಪ್ರಥಮ ಸ್ಥಾನ ಪಡೆದರು. ಬೆಂಗಳೂರಿನ ಸರ್ಕಾರಿ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದರು. ಬೆಂಗಳೂರಿನ ವೈದ್ಯಮಹಾಲಯದಿಂದ ಎಂಬಿಬಿಎಸ್ ಮುಗಿಸಿದರು. ನಿಮ್ಹಾನ್ಸ್‌ನಲ್ಲಿ ಡಿಪಿಎಂ(ಮನೋ ವೈದ್ಯಕೀಯದಲ್ಲಿ ಡಿಪ್ಲೊಮ) ಮತ್ತು ಎಂ.ಡಿ. ಪದವಿಗಳು, ನಿಮ್ಹಾನ್ಸ್‌ನ ಮನೋ ವೈದ್ಯ ವಿಭಾಗ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.

ಜನಪ್ರಿಯ ವೈದ್ಯರಾಗಿ, ಲೇಖಕರಾಗಿ, ಮಾನಸಿಕ ಆರೋಗ್ಯ, ಸಾಮಾನ್ಯ ಆರೋಗ್ಯ, ಲೈಂಗಿಕ ವಿಜ್ಞಾನ, ವೈಚಾರಿಕ ಸಾಹಿತ್ಯ, ಕಾದಂಬರಿ, ಸಣ್ಣಕಥೆ ಮುಂತಾದ ಹಲವಾರು ಪ್ರಕಾರಗಳಲ್ಲಿ ದಾಖಲೆ ನಿರ್ಮಿಸುವಷ್ಟು ಕೃತಿಗಳನ್ನು ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್ ರಚಿಸಿದ್ದಾರೆ.

ಆರೋಗ್ಯ ಮತ್ತು ಮನೋವೈದ್ಯಕೀಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಅತ್ಯಂತ ಸರಳವಾಗಿ, ಸುಂದರವಾಗಿ ಓದುಗರ ಮನಮುಟ್ಟುವಂತೆ ಸಾಹಿತ್ಯ ರಚಿಸುವುದರಲ್ಲಿ ಅಗ್ರಮಾನ್ಯರು. ಸುಮಾರು 135 ಪುಸ್ತಕಗಳನ್ನು ರಚಿಸಿದ್ದಾರೆ. ಮೂವತ್ತಕ್ಕೂ ಹೆಚ್ಚು ಪುಸ್ತಕಗಳು ಮರುಮುದ್ರಣ ಕಂಡಿವೆ. "ಬಾನಾಮತಿ " ಪುಸ್ತಕ 7 ಮುದ್ರಣ ಕಂಡಿದ್ದರೆ "ನಿಮ್ಮ ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಿ " ಪುಸ್ತಕ 6 ಮುದ್ರಣ ಕಂಡಿವೆ. ಅಲ್ಲದೆ ತೆಲುಗಿಗೆ ಅನುವಾದಗೊಂಡ ಇವರ ನಾಲ್ಕು ಕೃತಿಗಳು 4 ಮುದ್ರಣಗಳನ್ನು ಕಂಡಿವೆ. ಹತ್ತು ಹಲವು ಪುರಸ್ಕಾರಗಳು ಸಂದಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ. ಎನ್.ಎನ್. ಜಯರಾಂ ಪ್ರಶಸ್ತಿ, ಡಾ.ಎಚ್.ನರಸಿಂಹಯ್ಯ ದತ್ತಿ ಬಹುಮಾನ, ಡಾ. ಪಿ.ಎನ್.ಶಂಕರ್ ಪ್ರಶಸ್ತಿ ಮುಂತಾದವು. ಅಲ್ಲದೇ ಇವೆಲ್ಲಕ್ಕೂ ಗರಿಯಿಟ್ಟಂತೆ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಪ್ರಶಸ್ತಿಯೂ ಚಂದ್ರಶೇಖರ್ ಅವರಿಗೆ ಲಭಿಸಿದೆ.ಬಾಕ್ಸ್ ......

ಕ್ರಿಯಾಶೀಲ ವೈದ್ಯ ಸಿಆರ್‌ಸಿಕನ್ನಡ ವೈದ್ಯ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ರಾಜೀವಗಾಂಧಿ ವೈದ್ಯಾಲಯದ ಪ್ರಸಾರಾಂಗದ ಸಲಹಾ ಸಮಿತಿಯ ಸದಸ್ಯರೂ ಆಗಿದ್ದವರು. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯ ಅಲ್ಪಾವಧಿ ತಜ್ಞ ಸಲಹೆಗಾರರಾಗಿ (1991) ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್ ಕಾರ್ಯ ನಿರ್ವಹಿಸಿದ್ದಾರೆ. ಡಾ.ಸಿ.ಆರ್.ಚಂದ್ರಶೇಖರ್ ಮನೋವೈದ್ಯರಾಗಿ, ಲೇಖಕರಾಗಿ, ಶಿಕ್ಷಕರಾಗಿ ಮತ್ತು ಆಪ್ತ ಸಲಹೆಗಾರರಾಗಿ ಸದಾ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡವರು.

26ಕೆಆರ್ ಎಂಎನ್ 1,2.ಜೆಪಿಜಿ

ಚಂದ್ರಶೇಖರ್ ಚನ್ನಪಟ್ಟಮ ರಾಜಣ್ಣಾಚಾರ್.

(ಚೆನ್ನಾಗಿರುವ ಒಂದು ಫೋಟೋ ಬಳಸಿ)