ಇಫ್ತಿಯಾರ್ ಕೂಟದಲ್ಲಿ ಡಾ.ಎಸ್ಸೆಸ್‌, ಎಸ್ಸೆಸ್ಸೆಂ ಭಾಗಿ

| Published : Apr 11 2024, 12:48 AM IST

ಸಾರಾಂಶ

ಹಳೇ ದಾವಣಗೆರೆಯ ಬಾಷಾ ನಗರದಲ್ಲಿನ ಕಾಂಗ್ರೆಸ್ ಹಿರಿಯ ಮುಖಂಡ ಜನಾಬ್ ಸೈಯದ್ ಸೈಫುಲ್ಲಾ ಸಾಬ್ ನಿವಾಸದಲ್ಲಿ ಸೌಹಾರ್ದತೆಯ ಇಫ್ತಿಯಾರ್ ಕೂಟ ನಡೆಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ನಾಯಕ, ಶಾಸಕ ಶಾಮನೂರು ಶಿವಶಂಕರಪ್ಪ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆತಿಥ್ಯವನ್ನು ಸ್ವೀಕರಿಸಿದರು.

- ಕಾಂಗ್ರೆಸ್‌ ಮುಖಂಡ ಸೈಯದ್‌ ಸೈಫುಲ್ಲಾ ಸಾಬ್‌ ನಿವಾಸದಲ್ಲಿ ಆಯೋಜನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಹಳೇ ದಾವಣಗೆರೆಯ ಬಾಷಾ ನಗರದಲ್ಲಿನ ಕಾಂಗ್ರೆಸ್ ಹಿರಿಯ ಮುಖಂಡ ಜನಾಬ್ ಸೈಯದ್ ಸೈಫುಲ್ಲಾ ಸಾಬ್ ನಿವಾಸದಲ್ಲಿ ಸೌಹಾರ್ದತೆಯ ಇಫ್ತಿಯಾರ್ ಕೂಟ ನಡೆಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ನಾಯಕ, ಶಾಸಕ ಶಾಮನೂರು ಶಿವಶಂಕರಪ್ಪ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆತಿಥ್ಯವನ್ನು ಸ್ವೀಕರಿಸಿದರು.

ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲೀದ್ ಅಹ್ಮದ್, ಸೈಯದ್ ಸೈಫುಲ್ಲಾ ಅವರು ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಪ್ರತಿ ವರ್ಷವೂ ರಂಜಾನ್ ಹಬ್ಬದ ಹಿನ್ನೆಲೆ ಸೈಯದ್ ಸೈಫುಲ್ಲಾ ಸಾಬ್ ನಿವಾಸದಲ್ಲಿ ಸೌಹಾರ್ದತೆಯ ಇಫ್ತಿಯಾರ್ ಕೂಟ ಆಯೋಜಿಸಲಾಗುತ್ತದೆ. ಈ ಕೂಟದಲ್ಲಿ ಮುಸ್ಲಿಂ ಬಾಂಧವರು ಮಾತ್ರವಲ್ಲ, ಎಲ್ಲ ಧರ್ಮದವರು ಪಾಲ್ಗೊಳ್ಳುವುದು ವಿಶೇಷ.

ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸೈಯದ್ ಸೈಫುಲ್ಲಾ ಸಾಬ್ ಹಾಗೂ ಸೈಯದ್ ಖಾಲೀದ್ ಅಹ್ಮದ್ ಸೇರಿದಂತೆ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಹೇಳಿದರು. ಸೌಹಾರ್ದತೆಯ ಇಫ್ತಿಯಾರ್ ಕೂಟ ಆಯೋಜನೆಗೆ ಸಂತಸ ವ್ಯಕ್ತಪಡಿಸಿದರು.

ಖುಷಿಯಿಂದ ಆಚರಿಸೋಣ:

ಈ ವೇಳೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರು, ಯುಗಾದಿ ಹಾಗೂ ರಂಜಾನ್ ಹಬ್ಬಗಳು ಒಟ್ಟೊಟ್ಟಾಗಿ ಬಂದಿವೆ. ಎಲ್ಲರೂ ಖುಷಿಯಿಂದಲೇ ಹಬ್ಬ ಆಚರಿಸೋಣ. ರಂಜಾನ್ ಹಾಗೂ ಯುಗಾದಿ ಹಬ್ಬದಂದು ಎಲ್ಲ ಧರ್ಮದವರು ಶಾಂತಿಯುತವಾಗಿ, ಖುಷಿ ಖುಷಿಯಾಗಿ ಹಬ್ಬಗಳ ಸಂಭ್ರಮಿಸೋಣ ಎಂದು ಕರೆ ನೀಡಿದರು.

ಎಲ್ಲರಿಗೂ ಒಳಿತಾಗಲಿ:

ಸೈಯದ್ ಸೈಫುಲ್ಲಾ ಸಾಬ್ ಮಾತನಾಡಿ, ನಾವು ಇಫ್ತಿಯಾರ್ ಕೂಟವನ್ನು ಪ್ರತಿ ವರ್ಷವೂ ಆಯೋಜನೆ ಮಾಡುತ್ತೇವೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಆಗಮಿಸಿದ್ದು ಖುಷಿ ತಂದಿದೆ. ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿರುವ ಮಲ್ಲಿಕಾರ್ಜುನ್ ಅವರು ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ. ದಾವಣಗೆರೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಆಗುವಂತೆ ಮಾಡಲಿ. ಮಳೆ, ಬೆಳೆ ಚೆನ್ನಾಗಿ ಆಗಲಿ. ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು.

ಸೈಯದ್ ಖಾಲೀದ್ ಅಹ್ಮದ್, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್, ನಿಖಿಲ್ ಕೊಂಡಜ್ಜಿ, ಧರ್ಮಗುರುಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

- - - ಕೋಟ್‌ ರಂಜಾನ್ ಹಾಗೂ ಯುಗಾದಿ ಹಬ್ಬವನ್ನು ಸೌಹಾರ್ದತಯುತ ಹಾಗೂ ಯಾವುದೇ ಗಲಾಟೆಗಳಿಲ್ಲದೇ ಆಚರಣೆ ಮಾಡೋಣ. ಅಣ್ಣ- ತಮ್ಮಂದಿರಂತೆ ಎಲ್ಲ ಧರ್ಮದವರು ಒಟ್ಟಾಗಿ ಬಾಳೋಣ

- ಸೈಯದ್‌ ಸೈಫುಲ್ಲಾ ಸಾಬ್‌, ಕಾಂಗ್ರೆಸ್‌ ಮುಖಂಡ

- - - -10ಕೆಡಿವಿಜಿ37ಃ:

ದಾವಣಗೆರೆಯಲ್ಲಿ ಸೈಯದ್ ಸೈಫುಲ್ಲಾ ಸಾಬ್ ಮನೆಯಲ್ಲಿ ನಡೆದ ಸೌಹಾರ್ದತೆಯ ಇಫ್ತಿಯಾರ್ ಕೂಟದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭಾಗವಹಿಸಿದ್ದರು.