ಸಾರಾಂಶ
ವಿದ್ಯಾರ್ಥಿಗಳಿಗೆ ಹೆಚ್ಚು ತಾಳ್ಮೆ ಇರಬೇಕು. ಜೀವನದಲ್ಲಿ ಮಾಡುವ ಕೆಲಸಗಳನ್ನು ಶ್ರದ್ದೆ ಭಕ್ತಿಯಿಂದ ಮಾಡಬೇಕು.
ಕನ್ನಡಪ್ರಭ ವಾರ್ತೆ ಮೈಸೂರುಡಾ.ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಇಂತಹ ಮಹಾನ್ ವ್ಯಕ್ತಿಗಳ ವಚನ ಸಾಹಿತ್ಯಗಳನ್ನು ಯುವ ಪೀಳಿಗೆಗಳು ಹೆಚ್ಚಾಗಿ ಓದಬೇಕು. ಹೆಚ್ಚಾಗಿ ಕನಸುಗಳನ್ನು ಕಾಣಬೇಕು. ಇಂತಹ ಮಹಾನ್ ವ್ಯಕ್ತಿಗಳಿಂದ ಪ್ರೇರಿತರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಆಯೋಜಿಸಿದ್ದ ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳಿಗೆ ಹೆಚ್ಚು ತಾಳ್ಮೆ ಇರಬೇಕು. ಜೀವನದಲ್ಲಿ ಮಾಡುವ ಕೆಲಸಗಳನ್ನು ಶ್ರದ್ದೆ ಭಕ್ತಿಯಿಂದ ಮಾಡಬೇಕು. ಡಾ.ಫ.ಗು. ಹಳಕಟ್ಟಿ ಅವರು ವಕೀಲರಾಗಿದ್ದು, ಸಾಹಿತ್ಯ ಪ್ರಚಾರಕರು ಮತ್ತು ಸಂರಕ್ಷಣಾಕಾರರಾಗಿದ್ದಾರೆ. ಅವರು ವಕೀಲರಾಗಿ, ಸಾಹಿತ್ಯ ಪ್ರಚಾರಕರಾಗಿ ಅನೇಕ ವಚನ ರಚಿಸುವಂತಹ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.ಅವರು ಬರೆದ ಕೆಲವು ಕವನಗಳು, ಕಥೆಗಳು, ಸಾಹಿತ್ಯವನ್ನು ಸಂರಕ್ಷಣೆ ಮಾಡಬೇಕು ಎಂದು ಈ ಒಂದು ಸಂರಕ್ಷಣಾ ಕಾರ್ಯಕ್ರಮ ಆಚರಿಸುತ್ತಿದ್ದೇವೆ. ವಿದ್ಯಾರ್ಥಿಗಳು ನೀವು ಏನಾದರೂ ಸಾಧಿಸಬೇಕು ಎಂದರೆ ಪುಸ್ತಕಗಳನ್ನು ಹೆಚ್ಚಾಗಿ ಓದುವಂತಹ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮಾತನಾಡಿ, ಒಂದು ತ್ಯಾಗಮಯ ಜೀವನವನ್ನು ವಚನ, ಸಾಹಿತ್ಯ ಸಂರಕ್ಷಣೆಗಾಗಿ ಯಾರಾದರೂ ಒಂದು ತಪಸ್ಸಿನ ರೀತಿಯಲ್ಲಿ ತಮ್ಮ ಜೀವನವನ್ನು ಗಂಧದ ರೀತಿಯಲ್ಲಿ ಸವೆಸಿದ್ದಾರೆ ಎಂದರೆ ಅದು ಡಾ. ಫ. ಗು ಹಳಕಟ್ಟಿ ಅವರು ಎಂದು ಹೇಳಿದರು.ವಚನಕಾರರು ಜನಮಾನಸದಲ್ಲಿ ಬೆರೆತು ವಚನಗಳನ್ನು ರಚನೆ ಮಾಡಿದ್ದಾರೆ. ವಚನಗಳ ನಾಲ್ಕು ಸಾಲುಗಳಲ್ಲಿ ಅಪಾರ ಅರ್ಥವನ್ನು ಒಳಗೊಂಡಿರುತ್ತವೆ. ನಾವು ವಚನ ಆಳವಾಗಿ ಅಧ್ಯಯನ ಮಾಡಿ ಅವುಗಳ ಅರ್ಥ ತಿಳಿದುಕೊಳ್ಳಬೇಕು. 12ನೇ ಶತಮಾನದಲ್ಲಿ ವಚನ ಕ್ರಾಂತಿ ಉಂಟಾಯಿತು. ಈ ಕನ್ನಡ ನೆಲವನ್ನು ಇಡೀ ವಿಶ್ವದಲ್ಲಿ ಒಂದು ವಿಶೇಷವಾದಂತಹ ಪ್ರಭಾವಳಿಯಲ್ಲಿ ನಿಲ್ಲಿಸಿದಂತಹ ಸಾಹಿತ್ಯ ಪ್ರಕಾರ ಎಂದರೆ ವಚನ ಸಾಹಿತ್ಯ ಎಂದು ಅವರು ತಿಳಿಸಿದರು.ಜೆ.ಎಸ್.ಎಸ್. ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, 12ನೇ ಶತಮಾನದ ಶರಣರ ವಚನಗಳನ್ನು ಸಂಗ್ರಹಿಸಿ ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಮೊದಲು 50 ವಚನಕಾರರನ್ನು ಮಾತ್ರ ಗುರುತಿಸಲಾಗಿತ್ತು. ಹಳಕಟ್ಟಿ ಅವರ ಸಂಶೋಧನೆಯ ಫಲವಾಗಿ 250ಕ್ಕೂ ವಚನಕಾರರನ್ನು ಬೆಳಕಿಗೆ ತರಲು ಸಾಧ್ಯವಾಯಿತು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಲಾಖೆ ಸಹಾಯಕ ನಿರ್ದೇಶಡಾ.ಎಂ.ಡಿ. ಸುದರ್ಶನ್, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ರಾಜ್ಯಾಧ್ಯಕ್ಷೆ ಎಚ್.ಎಲ್. ಯಮುನಾ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಸಮುದಾಯದ ಮುಖಂಡರು ಇದ್ದರು.