ಸಾರಾಂಶ
ರಾಜಕೀಯ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಎಂಬುದು ಸವಕಲಾದ ಈ ಹೊತ್ತಲ್ಲಿ ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣದ ಮಾದರಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಡಾ.ಗುರುರಾಜ ಕರ್ಜಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಕೀಯ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಎಂಬುದು ಸವಕಲಾದ ಈ ಹೊತ್ತಲ್ಲಿ ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣದ ಮಾದರಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಡಾ.ಗುರುರಾಜ ಕರ್ಜಗಿ ಹೇಳಿದರು.ರಾಷ್ಟ್ರೀಯ ನವನಿರ್ಮಾಣ ವೇದಿಕೆಯಿಂದ ಚಿತ್ರಕಲಾ ಪರಿಷತ್ ನಲ್ಲಿ ನಡೆದ ‘ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ- 98’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಮಕೃಷ್ಣ ಹೆಗಡೆ ಅವರದ್ದು ಬಹುಮುಖ ವ್ಯಕ್ತಿತ್ವ. ಸಾಮಾಜಿಕ ಬದ್ಧತೆ, ಹಾಸ್ಯಪ್ರಜ್ಞೆ, ಕಿರಿಯರ ಬೆಳೆಸುವ ಪ್ರವೃತ್ತಿ, ಸಾಹಿತ್ಯ, ಕಲೆ ಸೇರಿದಂತೆ ಹಲವು ವಿಶೇಷಣ ಹೊಂದಿದ್ದರು. ಸೃಜನಶೀಲ ವ್ಯಕ್ತಿತ್ವದ ಮೂಲಕ ತಮ್ಮ ಕಾಲಘಟ್ಟದಲ್ಲಿ ಪ್ರಭಾವಯುತವಾದ ಛಾಪು ಮೂಡಿಸಿದವರು. ಇದೇ ಕಾರಣದಿಂದಲೆ ಮೃತರಾಗಿ ಎರಡು ದಶಕದ ಬಳಿಕವೂ ನಾವು ಅವರ ಜೀವನವನ್ನು ಸಂಭ್ರಮಿಸುತ್ತಿದ್ದೇವೆ ಎಂದರು.
ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಂ.ಪಿ.ನಾಡಗೌಡ, ಮಾಜಿ ಸಭಾಪತಿ ಡಾ. ಬಿ.ಎಲ್.ಶಂಕರ್, ಪ್ರಮೋದ್ ಹೆಗಡೆ, ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹಾಗೂ ರಾಮಕೃಷ್ಣ ಹೆಗಡೆ ಕುಟುಂಬಸ್ಥರು ಇದ್ದರು.