ಸಾರಾಂಶ
ಡಾ. ಹೆಗ್ಗಡೆ ಜನ್ಮದಿನ ಪ್ರಯುಕ್ತ ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ತು ಮತ್ತು ಭಜನಾ ಪರಿಷತ್ತು ಇಂದಬೆಟ್ಟು ವಲಯ, ಗ್ರಾಮಾಭಿವೃದ್ಧಿ ಯೋಜನೆ ಇಂದಬೆಟ್ಟು ವಲಯ ಸಹಕಾರ ಹಾಗೂ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ.ಚಂದ್ರಶೇಖರ ಸಾಲ್ಯಾನ್ ನೇತೃತ್ವದಲ್ಲಿ ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ವಿಶೇಷ ಭಜನೆ ನಡೆಯಿತು.
ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಜನ್ಮದಿನ ನ.25ರಂದು ಆಗಿರುತ್ತದೆ.ಇದರ ಅಂಗವಾಗಿ ಶ್ರೀಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕ ಸುಬ್ರಮಣ್ಯ ಪ್ರಸಾದ್ ಮಾರ್ಗದರ್ಶನದಂತೆ ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ತು ಮತ್ತು ಭಜನಾ ಪರಿಷತ್ತು ಇಂದಬೆಟ್ಟು ವಲಯ, ಗ್ರಾಮಾಭಿವೃದ್ಧಿ ಯೋಜನೆ ಇಂದಬೆಟ್ಟು ವಲಯ ಸಹಕಾರ ಹಾಗೂ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ.ಚಂದ್ರಶೇಖರ ಸಾಲ್ಯಾನ್ ನೇತೃತ್ವದಲ್ಲಿ ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ವಿಶೇಷ ಭಜನೆ ನಡೆಯಿತು.ಹೆಗ್ಗಡೆಯವರಿಗೆ ಸುಖ ಶಾಂತಿ ನೆಮ್ಮದಿ ಆರೋಗ್ಯ ಹಾಗೂ ನಿತ್ಯ ನಿರಂತರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಕ್ತಿ ನೀಡುವಂತೆ ಶ್ರೀ ಅರ್ಧನಾರೀಶ್ವರ ದೇವರಿಗೆ ವಿಶೇಷ ಪೂಜೆ ನಡೆಸಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.
ಯೋಜನೆಯ ಮೇಲ್ವಿಚಾರಕಿ ಉಷಾ, ಭಜನಾ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಹಾಗೂ ಇಂದಬೆಟ್ಟು ವಲಯ ಕಾರ್ಯದರ್ಶಿ ಚಂದ್ರಶೇಖರ ಇಂದಬೆಟ್ಟು, ವಲಯಧ್ಯಕ್ಷ ಶಶಿಧರ ಗೌಡ ಮನ್ನಡ್ಕ, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಗೌಡ ಇರ್ತಿಲ್ಲಾಲ್ ಸದಸ್ಯರಾದ ನಾರಾಯಣ ಹಾಗೂ ಭಜಕ ಬಂಧುಗಳು ಇದ್ದರು. ಧರ್ಮಾಧಿಕಾರಿ ಅವರ ಹುಟ್ಟುಹಬ್ಬಕ್ಕೆ ಮೊದಲು ಭಜನಾ ಪರಿಷತ್ ಹಾಗೂ ಗ್ರಾಮಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಹೆಗ್ಗಡೆ ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಿಕೊಳ್ಳುವ ಪ್ರಥಮ ಕಾರ್ಯಕ್ರಮವಾಗಿದ್ದು, ರಾಜ್ಯ ಭಜನಾ ಪರಿಷತ್ತಿನ ನಿರ್ದೇಶನದಂತೆ ಇನ್ನು ಮುಂದಕ್ಕೆ ತಾಲೂಕಿನ ನಾನಾ ದೇವಸ್ಥಾನಗಳಲ್ಲಿ ಹಾಗೂ ಭಜನಾ ಮಂಡಳಿಗಳಲ್ಲಿ ನ. 24ರವರೆಗೆ ಭಜನೆ ನಡೆಸಿ ಪ್ರಾರ್ಥಿಸಿಕೊಳ್ಳುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.;Resize=(128,128))
;Resize=(128,128))
;Resize=(128,128))
;Resize=(128,128))