ವಿದ್ಯೆಗೆ ಹೆಚ್ಚು ಬೆಲೆಯಿದೆ. ಅದರಿಂದ ಎಷ್ಟೆಲ್ಲ ಎತ್ತರಕ್ಕೆ ಏರಬಹುದೆಂಬ ಸಂದೇಶವನ್ನು ನಾಡಿಗೆ ಕೊಟ್ಟವರು ಡಾ. ವಿ.ಕೃ. ಗೋಕಾಕರು. ಉತ್ತರ ಕರ್ನಾಟಕದಲ್ಲಿ ಪಿಎಚ್.ಡಿ. ಮಾಡುವವರ ಸಂಖ್ಯೆ ಬಹಳ ಕಡಿಮೆ ಇದೆ. ಒಳ್ಳೆಯ ಪುಸ್ತಕಗಳನ್ನು ಓದಿ ಸ್ಪರ್ಧಾತ್ಮಕ ಪರೀಕ್ಷೆಗಳ ಬರೆದು ಉನ್ನತ ಸ್ಥಾನಕ್ಕೆ ಹೋಗಲು ದಾವಣಗೆರೆ ಜಿಲ್ಲೆಯ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಾಹಿತ್ಯಾ ಆಲದಕಟ್ಟಿ ಅವರು ಮಾದರಿಯಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹೇಳಿದರು.
ಹಾವೇರಿ: ವಿದ್ಯೆಗೆ ಹೆಚ್ಚು ಬೆಲೆಯಿದೆ. ಅದರಿಂದ ಎಷ್ಟೆಲ್ಲ ಎತ್ತರಕ್ಕೆ ಏರಬಹುದೆಂಬ ಸಂದೇಶವನ್ನು ನಾಡಿಗೆ ಕೊಟ್ಟವರು ಡಾ. ವಿ.ಕೃ. ಗೋಕಾಕರು. ಉತ್ತರ ಕರ್ನಾಟಕದಲ್ಲಿ ಪಿಎಚ್.ಡಿ. ಮಾಡುವವರ ಸಂಖ್ಯೆ ಬಹಳ ಕಡಿಮೆ ಇದೆ. ಒಳ್ಳೆಯ ಪುಸ್ತಕಗಳನ್ನು ಓದಿ ಸ್ಪರ್ಧಾತ್ಮಕ ಪರೀಕ್ಷೆಗಳ ಬರೆದು ಉನ್ನತ ಸ್ಥಾನಕ್ಕೆ ಹೋಗಲು ದಾವಣಗೆರೆ ಜಿಲ್ಲೆಯ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಾಹಿತ್ಯಾ ಆಲದಕಟ್ಟಿ ಅವರು ಮಾದರಿಯಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹೇಳಿದರು.
ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಮತ್ತು ಸವಣೂರಿನ ಚನ್ನಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಗೋಕಾಕರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕವನ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಟ್ರಸ್ಟಿನ ಸದಸ್ಯರಾದ ಲಿಂಗರಾಜ ಸೊಟ್ಟಪ್ಪನವರ, ಕನ್ನಡಕ್ಕೆ ಒಬ್ಬರೇ ಗೋಕಾಕರು ಎಂಬ ನುಡಿ ನಮ್ಮೆಲ್ಲರ ಎದೆಯ ದನಿಯಾಗಬೇಕು. ವಿಶ್ವಮಾನವ ಪ್ರಜ್ಞೆಯ ಧಾರೆಯನ್ನು ಬೆಳೆಸಿದ ಗೋಕಾಕರು ಕರಗದಷ್ಟು ಹಿಮಾಲಯವಿದ್ದಂತೆ. ಕನ್ನಡತನವನ್ನು ಕೊನೆಯತನಕ ಉಳಿಸಿಕೊಂಡ ಧೀಮಂತ ಸಾಹಿತಿ ಎಂದರು.
ಟ್ರಸ್ಟಿನ ಅಧ್ಯಕ್ಷ ಡಾ. ಸತೀಶ ಕುಲಕರ್ಣಿ ಅಧ್ಯಕ್ಷತೆಯನ್ನು ವಹಿಸಿದ್ದರು. ಚಂದ್ರಗೌಡ ಪಾಟೀಲ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಆರ್. ಎನ್. ತೊಂಡೂರು, ಸ್ಥಳೀಯ ನಿರ್ವಹಣಾ ಸಮಿತಿಯ ಸದಸ್ಯರಾದ ಮೈಲಾರಪ್ಪ ತಳ್ಳಿಹಳ್ಳಿ, ಪರಶುರಾಮ ಈಳಗೇರ, ಗುರುಪಾದಯ್ಯ ಆರಾಧ್ಯಮಠ, ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಚೈತ್ರಾ ಎಲ್., ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಹರೀಶ ಭರಮಣ್ಣವರ, ವಿಶ್ವನಾಥ ಹಾವಣಗಿ ಮುಂತಾದವರು ಮಾತನಾಡಿದರು.ಪ್ರಬಂಧ ಸ್ಪರ್ಧೆಯಲ್ಲಿ ಸೌಂದರ್ಯಾ ಬಂಕಾಪುರ, ಶಾಂಭವಿ ಬೆಂಡಿಗೇರಿ, ಬೀಬಿಹಾಜರ ಮುನ್ಸಿ ಹಾಗೂ ಲಕ್ಷಿö್ಮÃ ರಾಠೋಡ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದರು.
ಬಿ.ಎಡ್. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ಸಹನಾ ಬಾಣದ, ವಿದ್ಯಾಶ್ರೀ ಬಡಿಗೇರ, ರೇಣುಕಾ ಶಿಂದೋಳಿಕರ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದರು. ಸುಮಾ ಉಳ್ಳಾಗಡ್ಡಿ, ವೀಣಾ ಹಳ್ಳಿ ಹಾಗೂ ಮೋಸಿನ್ ಅಂಗಡಗಿ ಸಮಾಧಾನಕರ ಬಹುಮಾನಗಳನ್ನು ಪಡೆದರು.ಆರಂಭದಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿ.ಎನ್. ಪಾಟೀಲ ಸ್ವಾಗತಿಸಿದರು. ವಿದ್ಯಾಶ್ರೀ ಬಡಿಗೇರ ನಿರೂಪಿಸಿದರು, ನಾಗವೇಣಿ ವಂದಿಸಿದರು.