ಡಾ. ಜಿನದತ್ತ ಹಡಗಲಿ ವ್ಯಕ್ತಿತ್ವದಲ್ಲಿ ಇತರರಿಗೆ ಮಾದರಿ

| Published : Jul 09 2024, 12:48 AM IST

ಡಾ. ಜಿನದತ್ತ ಹಡಗಲಿ ವ್ಯಕ್ತಿತ್ವದಲ್ಲಿ ಇತರರಿಗೆ ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ಬೋಧನೆ, ಭಾಷಣ ಮತ್ತು ಬರಹಗಳನ್ನು ಮೈಗೂಡಿಸಿಕೊಂಡ ಅಪರೂಪದ ಪ್ರಾಧ್ಯಾಪಕರಾದ ಡಾ. ಜಿನದತ್ತ ಹಡಗಲಿ ಧಾರವಾಡದ ಸಾಹಿತ್ಯ ಸಿರಿ ಹಂಚುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಧಾರವಾಡ:

ಸಾಹಿತ್ಯ ಸಂಘಟಕ ಡಾ. ಜಿನದತ್ತ ಹಡಗಲಿ ವ್ಯಕ್ತಿತ್ವದಲ್ಲಿ ಇತರರಿಗೆ ಮಾದರಿ. ಧಾರವಾಡದ ಸಾಹಿತ್ಯ ಸಿರಿ ಹಂಚುವಲ್ಲಿ ಜಿನದತ್ತ ಅವರ ಪಾತ್ರ ಮುಖ್ಯವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಇಲ್ಲಿಯ ಸನ್ನಧಿ ಕಲಾಕ್ಷೇತ್ರದಲ್ಲಿ ಡಾ. ಜಿನದತ್ತ ಹಡಗಲಿ ಅಭಿನಂದನಾ ಸಮಿತಿ ಆಯೋಜಿಸಿದ್ದ ಕವಿ, ಸಾಹಿತಿ, ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಅವರ ಸಾಹಿತ್ಯಾವಲೋಕನ, ಅಭಿನಂದನೆಯಲ್ಲಿ ಅವರು ಮಾತನಾಡಿದರು.

ಸ್ಹೇಹಸಿಂಧು ಅಭಿನಂಧನ ಗ್ರಂಥ ಕುರಿತು ಡಾ. ವೀರಣ್ಣ ರಾಜೂರ ಮಾತನಾಡಿ, ಜಿನದತ್ತ ಹಡಗಲಿ ಅವರು, ಬೋಧನೆ, ಭಾಷಣ ಮತ್ತು ಬರಹಗಳನ್ನು ಮೈಗೂಡಿಸಿಕೊಂಡ ಅಪರೂಪದ ಪ್ರಾಧ್ಯಾಪಕ ಎಂದರು.

ಕವಿಯತ್ರಿ ಸುಜಾತಾ ಜಿನದತ್ತ ಹಡಗಲಿ ರಚಿತ ಭಾವತರಂಗ ಕವನಸಂಕಲನವನ್ನು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕ ಡಾ. ವೈ.ಎಂ. ಭಜಂತ್ರಿ ಅವರು, ಡಾ. ಜಿನದತ್ತ ಹಡಗಲಿ ಅವರ ಪರ ಅಭಿನಂದನಾ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿ ಜೆ.ಎಸ್.ಎಸ್. ಸಂಸ್ಥೆಯ ಕಾರ್ಯದರ್ಶಿ ಡಾ. ಅಜೀತ ಪ್ರಸಾದ ಅವರು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿದರು.