ಡಾ.ಕೆ. ಕುಮಾರ್ ಗೆ ಕಾಂಬೋಡಿಯಾಸ್ ಕಲ್ಚರಲ್ ಅಂಬಾಸಿಡರ್ ಪ್ರಶಸ್ತಿ

| Published : Oct 11 2024, 11:55 PM IST

ಸಾರಾಂಶ

ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಮೈಸೂರು ವಿವಿ ಲಲಿತಕಲಾ ಕಾಲೇಜು ಪ್ರಾಧ್ಯಾಪಕ ಹಾಗೂ ಮಂಚೇಗೌಡನ ಕೊಪ್ಪಲು ಕಲೆಮನೆ ಕೇಂದ್ರದ ಸಂಸ್ಥಾಪಕ ಡಾ.ಕೆ. ಕುಮಾರ್ ಅವರು ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕನ್ನಡಪ್ರಭ ವಾರ್ತೆ ಮೈಸೂರು

ಕಾಂಬೋಡಿಯ ದೇಶದ ಸಿಯಾಮ್ ರೀಪ್ ನಲ್ಲಿ ಭಾರತದ ಸಂಗಮಮ್ ಗ್ಲೋಬಲ್ ಅಕಾಡೆಮಿಯು ಅ. 1 ರಿಂದ 6 ರವರೆಗೆ ಮಿನಿಸ್ಟ್ರಿ ಆಫ್ ಕಲ್ಚರ್ ಅಂಡ್ ಫೈನ್ ಆರ್ಟ್ಸ್ ಹತ್ತನೇ ಅಂತಾರಾಷ್ಟ್ರೀಯ ನೃತ್ಯಾಂಜಲಿ ಫೆಸ್ಟಿವಲ್ ಆಯೋಜಿಸಿತ್ತು.

ಈ ಉತ್ಸವವು ಸಿಯಾಮ್ ರೀಪ್‌ ನ ಪ್ರಸಿದ್ಧ ಆಂಕೋರ್ ವತ್ ದೇಗುಲ ಸಮೀಪದ ಪ್ರಸತ್ ಬೇಯಾನ್ ದೇವಾಲಯದ ಉತ್ತರಾಭಿಮುಖದಲ್ಲಿ ನಡೆಯಿತು.

ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಮೈಸೂರು ವಿವಿ ಲಲಿತಕಲಾ ಕಾಲೇಜು ಪ್ರಾಧ್ಯಾಪಕ ಹಾಗೂ ಮಂಚೇಗೌಡನ ಕೊಪ್ಪಲು ಕಲೆಮನೆ ಕೇಂದ್ರದ ಸಂಸ್ಥಾಪಕ ಡಾ.ಕೆ. ಕುಮಾರ್ ಅವರು ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅವರನ್ನು ಸನ್ಮಾನಿಸಿ, ಕಾಂಬೋಡಿಯ ಮಿನಿಸ್ಟ್ರಿ ಆಫ್ ಕಲ್ಚರ್ ಅಂಡ್ ಫೈನ್ ಆರ್ಟ್ಸ್ ವತಿಯಿಂದ ಕಾಂಬೋಡಿಯಾದ ಸಾಂಸ್ಕೃತಿಕ ರಾಯಭಾರಿ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ಇವರ ಎಂಟನೇ ಅಂತಾರಾಷ್ಟ್ರೀಯ ಪ್ರಶಸ್ತಿ ಆಗಿದೆ.

ಕಾರ್ಯಕ್ರಮವನ್ನು ಎಬಿಕ್ಸ್ ಕ್ಯಾಶ್ ಪೇಮೆಂಟ್ ಸೊಲ್ಯೂಷನ್ಸ್‌ ನ ಸಿಇಒ ಹಾಗೂ ಎಂಡಿ ಗುರುಪ್ರಸಾದ್, ಕಾಂಬೋಡಿಯಾದ ಮಿನಿಸ್ಟ್ರಿ ಆಫ್ ಕಲ್ಚರ್ ಅಂಡ್ ಫೈನಾನ್ಸ್‌ ನವ ದೆಹಲಿಯ ಮೌರ್ನ್ ಸೋಫೇಪ್ ನ ಐ.ಸಿ.ಸಿ.ಆರ್.ನ ಹಿರಿಯ ಕಾರ್ಯಕ್ರಮ ನಿರ್ದೇಶಕ ಸುನಿಲ್ ಕುಮಾರ್ ಸಿಂಗ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್, ಮೈಸೂರು ವಿವಿ ಲಲಿತಕಲಾ ಕಾಲೇಜಿನ ನೃತ್ಯ ವಿಭಾಗದ ಮುಖ್ಯಸ್ಥ ಡಾ.ಕೆ. ಕುಮಾರ್, ಅಂತಾರಾಷ್ಟ್ರೀಯ ನೃತ್ಯ ಗುರು ರಮಾ ಪ್ರಸಾದ್, ಉಮಾ ಮಹೇಶ್ವರಿ, ಮಥುರಾ ವಿಶ್ವನಾಥನ್, ಪೂಜಾ ಮಣಿ, ಸಂಯುಕ್ತ ಶಂಕರ್, ಮಾಯಾ ಧನಂಜಯ್ ಅವರಿಂದ ಉದ್ಘಾಟಿಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ಎರಡೂ ದೇಶಗಳ ಕಲಾವಿದರು ಅತ್ಯುತ್ಕೃಷ್ಟ ನೃತ್ಯ ಪ್ರದರ್ಶನ ನೀಡಿದರು. ಸುಮಾರು 300ಕ್ಕೂ ಹೆಚ್ಚು ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು.