ಡಾ. ಕೆ.ಸುಧಾಕರ್‌ ಬಳಿ 33.42 ಕೋಟಿ ರು. ಆಸ್ತಿ

| Published : Apr 02 2024, 01:07 AM IST

ಡಾ. ಕೆ.ಸುಧಾಕರ್‌ ಬಳಿ 33.42 ಕೋಟಿ ರು. ಆಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್‌ ಮತ್ತು ಕುಟುಂಬದವರು ಒಟ್ಟು 33.42 ಕೋಟಿ ರು. ಆಸ್ತಿಯನ್ನು ಹೊಂದಿದ್ದಾರೆ.

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್‌ ಮತ್ತು ಕುಟುಂಬದವರು ಒಟ್ಟು 33.42 ಕೋಟಿ ರು. ಆಸ್ತಿಯನ್ನು ಹೊಂದಿದ್ದಾರೆ. ಅದರಲ್ಲಿ 9.88 ಕೋಟಿ ರು. ಚರಾಸ್ತಿ ಹಾಗೂ 23.54 ಕೋಟಿ ರು. ಸ್ಥಿರಾಸ್ತಿ ಇದೆ. ಒಟ್ಟು 20.34 ಕೋಟಿ ರು. ಸಾಲವನ್ನು ಹೊಂದಿದ್ದು, ಅದರಲ್ಲಿ 9.22 ಕೋಟಿ ರು. ಗೃಹಸಾಲವಾಗಿದೆ. ಉಳಿದಂತೆ ಸುಧಾಕರ್‌ ತಮ್ಮ ಪತ್ನಿ ಡಾ.ಜಿ.ಎ.ಪ್ರೀತಿ ಅವರಿಂದಲೇ 40.33 ಲಕ್ಷ ರು. ಸಾಲ ಪಡೆದಿದ್ದಾರೆ. 1 ಕಾರು, 1 ಸ್ಕೂಟರ್‌ ಹಾಗೂ 3 ಟ್ರ್ಯಾಕ್ಟರ್‌ಗಳನ್ನು ಹೊಂದಿದ್ದಾರೆ.

ಜತೆಗೆ 62 ಲಕ್ಷ ರು. ಮೌಲ್ಯದ 1.160 ಕೆಜಿ ಚಿನ್ನಾಭರಣ ಹಾಗೂ 15.55 ಲಕ್ಷ ರು. ಮೌಲ್ಯದ 30 ಕೆಜಿ ಬೆಳ್ಳಿ ವಸ್ತುಗಳಿವೆ. ಹಾಗೆಯೇ, ಡಾ. ಸುಧಾಕರ್‌ ಕುಟುಂಬದವರು 9.41 ಎಕರೆ ಕೃಷಿ ಭೂಮಿ, 11.05 ಎಕರೆ ಕೃಷಿಯೇತರ ಭೂಮಿಯನ್ನು ಹೊಂದಿದ್ದು, ಎರಡು ವಸತಿ ಕಟ್ಟಡವನ್ನು ಹೊಂದಿದ್ದಾರೆ.

ಇದಲ್ಲದೆ ಡಾ. ಸುಧಾಕರ್‌ ವಿರುದ್ಧ ಹೈಕೋರ್ಟ್‌ನಲ್ಲಿ ಕ್ರಿಮಿನಲ್‌ ಪಿಟಿಷನ್‌ ದಾಖಲಾಗಿದ್ದು, ಅದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.ಪಿ.ಸಿ.ಮೋಹನ್‌ ಆಸ್ತಿ ₹81 ಕೋಟಿ

ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಂಸದ ಪಿ.ಸಿ. ಮೋಹನ್‌ 81.30 ಕೋಟಿ ರು. ಆಸ್ತಿಗೆ ಒಡೆಯರಾಗಿದ್ದಾರೆ. ಪಿ.ಸಿ.ಮೋಹನ್‌ ಬಳಿ 10.46 ಕೋಟಿ ರು. ಚರಾಸ್ತಿ, ಪತ್ನಿ ಶೈಲಾ ಬಳಿ 4.39 ಕೋಟಿ ರು. ಮೌಲ್ಯದ ಚರಾಸ್ತಿ ಇದೆ. ಅದೇ ರೀತಿ ಪಿ.ಸಿ. ಮೋಹನ್‌ 19.18 ಕೋಟಿ ರು.ಮೌಲ್ಯದ ಸ್ಥಿರಾಸ್ತಿ, ಶೈಲಾ 22.21 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ದಂಪತಿ ಬಳಿ 1 ಕೇಜಿ ಚಿನ್ನ, 6 ಕೇಜಿಗೂ ಅಧಿಕ ಬೆಳ್ಳಿ ಇದೆ.ತುಮಕೂರು: ಸೋಮಣ್ಣ 60 ಕೋಟಿಗೆ ಒಡೆಯತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಅವರು 17.74 ಕೋಟಿ ಆಸ್ತಿಗೆ ಒಡೆಯರಾಗಿದ್ದಾರೆ. ಅವರ ಪತ್ನಿ ಶೈಲಜಾ 43 ಕೋಟಿ ಆಸ್ತಿ ಹೊಂದಿದ್ದಾರೆ. ಕೃಷಿ ಸೇರಿ ಸೋಮಣ್ಣ ಅವರ ವಾರ್ಷಿಕ ಆದಾಯ 69.79 ಲಕ್ಷ ರು.ಆಗಿದೆ. ಇನ್ನು, ಎರಡು ಟೊಯೋಟಾ ಇನ್ನೋವಾ, ಒಂದು ಟೊಯೋಟಾ ಕ್ವಾಲಿಸ್ ಸೇರಿ 3 ಕಾರುಗಳನ್ನು ಹೊಂದಿದ್ದಾರೆ. ಸೋಮಣ್ಣಗೆ 6.44 ಕೋಟಿ ಸಾಲವಿದೆ. ಅವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಒಂದು ಪ್ರಕರಣ, ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಎರಡು ಪ್ರಕರಣಗಳಿವೆ.

ಸೋಮಣ್ಣ ಹೆಸರಿನಲ್ಲಿ ಬೆಂಗಳೂರಿನ ವಿಜಯನಗರ ಮತ್ತು ಎಂಆರ್ ಸಿಆರ್ ಲೇಔಟ್ ನಲ್ಲಿ ಎರಡು ವಸತಿ ಕಟ್ಟಡಗಳಿವೆ. ಇನ್ನು, ಪತ್ನಿ ಹೆಸರಲ್ಲಿ ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ 16 ಸಾವಿರ ಚ.ಅಡಿಯ ವಾಣಿಜ್ಯ ಕಟ್ಟಡ, ವಸತಿ ಕಟ್ಟಡ, ಕೆಂಗೇರಿಯಲ್ಲಿ 2.7 ಕೋಟಿಯ ವಸತಿ ಕಟ್ಟಡಗಳಿವೆ. ಇಬ್ಬರು ಮಕ್ಕಳಿಗೆ ಸೋಮಣ್ಣ ಕೈ ಸಾಲ ನೀಡಿದ್ದಾರೆ. ಪುತ್ರ ಅರುಣ್ ಸೋಮಣ್ಣನಿಗೆ 14.52 ಲಕ್ಷ, ಇನ್ನೊಬ್ಬ ಮಗ ನವೀನ್ ಸೋಮಣ್ಣನಿಗೆ 1.56 ಕೋಟಿ ರು. ಸಾಲ ನೀಡಿದ್ದಾರೆ.ಹಾಸನ: ಕೈ ಅಭ್ಯರ್ಥಿ ಶ್ರೇಯಸ್ ಆಸ್ತಿ 41 ಕೋಟಿ

ಹಾಸನ: ಹಾಸನದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ಶ್ರೇಯಸ್‌ ಪಟೇಲ್, 41 ಕೋಟಿ ರು. ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ. 20 ಎಕರೆ ಕೃಷಿ ಭೂಮಿ, ಬೆಂಗಳೂರು ಹಾಗೂ ಹೊಳೆನರಸೀಪುರದ ವಿವಿಧೆಡೆ 39.58 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹಾಗೂ ವಾಣಿಜ್ಯ ಕಟ್ಟಡವನ್ನು ಇವರು ಹೊಂದಿದ್ದಾರೆ. ಇವರ ಬಳಿ ಒಂದು ಇನ್ನೋವಾ ಕಾರು, ಒಂದು ಟ್ರ್ಯಾಕ್ಟರ್ ಇದೆ. ತಮ್ಮ ತಾಯಿ ಬಳಿ 3.64 ಲಕ್ಷ ರು. ಸಾಲ ಪಡೆದುಕೊಂಡಿದ್ದಾರೆ. ಇತರರಿಂದ 1.37 ಕೋಟಿ ರು. ಸಾಲ ಪಡೆದಿದ್ದಾರೆ. ಇನ್ನು, ಶ್ರೇಯಸ್‌ ಪತ್ನಿ ಹೆಸರಿನಲ್ಲಿ ಬೆಂಗಳೂರಿನಲ್ಲಿ 1.36 ಕೋಟಿ ಬೆಲೆ ಬಾಳುವ ಒಂದು ನಿವೇಶನ ಹಾಗೂ ಮನೆ ಇದೆ.