ಸಾರಾಂಶ
ಕೆ.ಎಚ್. ರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಈ ಸಮಾರಂಭ
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ನೃತ್ಯಪಟು ಡಾ.ಕೆ. ಕುಮಾರ್‌ಅವರಿಗೆ ವಿಕಾಸಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕೆ.ಎಚ್. ರಾಮಯ್ಯ ಹುಟ್ಟುಹಬ್ಬದ ಅಂಗವಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೆ.ಎಚ್. ರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿ ಸಾಧನೆಗೈದ ಗಣ್ಯರಿಗೆ, ಯುವಕರಿ, ಮತ್ತು ಬಾಲ ಪ್ರತಿಭೆಗಳಿಗೆ ವಿಕಾಸ ಶ್ರೀ, ಯುವ ವಿಕಾಸ ಶ್ರೀ, ಮತ್ತು ಬಾಲ ವಿಕಾಸ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಜೆಡಿಎಸ್‌ಕಾರ್ಯಾಧ್ಯಕ್ಷ ಎಚ್.ಕೆ. ರಾಮು, ಯಮುನಾ, ಸುಯೋಗ್‌ಆಸ್ಪತ್ರೆ ಸಂಸ್ಥಾಪಕ ಡಾ.ಎಸ್.ಪಿ. ಯೋಗಣ್ಣ, ಹರಿಕೃಷ್ಣಕುಮಾರ್, ಡಾ. ವಸಂತಕುಮಾರ್ ತಿಮಕಾಪುರ, ಎಂ.ಬಿ. ಮಂಜೇಗೌಡ, ಕೆ. ಪ್ರಸನ್ನಕುಮಾರ್, ಎಂ. ನಂದೀಶ್, ಬಲ್ಲೇನಹಳ್ಳಿ ವಿಜಯಕುಮಾರ್, ಕೆ.ಆರ್. ಮಿಲ್ ಶಿವಣ್ಣ, ಟಿ. ಸತೀಶ್ ಜವರೇಗೌಡ ಮೊದಲಾದವರು ಇದ್ದರು.