ಸಾರಾಂಶ
ವೀ ಆರ್ ಯುನೈಟೆಡ್ ಸಂಸ್ಥೆ ವತಿಯಿಂದ ಆಯೋಜಿಸಲಾದ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ -3 ಯಶಸ್ವಿಯಾಗಿ ನಡೆದಿದೆ. ಈ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಘೋಷಣೆ ಮಾಡಲಾದ ‘ಮಂಗಳೂರು ರತ್ನ -2025’ ಪ್ರಶಸ್ತಿಯನ್ನು ಶನಿವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ವೀ ಆರ್. ಯುನೈಟೆಡ್ ಸಂಸ್ಥೆ ಅಧ್ಯಕ್ಷ ಅಜ್ಫರ್ ರಝಕ್ ಪ್ರದಾನ ಮಾಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವೀ ಆರ್ ಯುನೈಟೆಡ್ ಸಂಸ್ಥೆ ವತಿಯಿಂದ ಆಯೋಜಿಸಲಾದ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ -3 ಯಶಸ್ವಿಯಾಗಿ ನಡೆದಿದೆ. ಈ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಘೋಷಣೆ ಮಾಡಲಾದ ‘ಮಂಗಳೂರು ರತ್ನ -2025’ ಪ್ರಶಸ್ತಿಯನ್ನು ಶನಿವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ವೀ ಆರ್. ಯುನೈಟೆಡ್ ಸಂಸ್ಥೆ ಅಧ್ಯಕ್ಷ ಅಜ್ಫರ್ ರಝಕ್ ಪ್ರದಾನ ಮಾಡಿದರು.ಉಭಯ ಜಿಲ್ಲೆಗಳು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಸಹಕಾರಿಯಾಗಿ, ಒಬ್ಬ ದಕ್ಷ ಸಂಘಟನಾ ನೇತಾರರಾಗಿ, ಸಾಮಾಜಿಕ ಸ್ಪಂದನೆಯ ಮೂಲಕ ಆರ್ಥಿಕ ಹಿಂದುಳಿದವರ ಶಕ್ತಿಯಾಗಿ ರಾಜೇಂದ್ರ ಕುಮಾರ್ ಅವರ ಕಾರ್ಯ ನಿರ್ವಹಣೆ ಎಲ್ಲರಿಗೂ ಮಾದರಿಯಾಗಿದೆ. ಇವರ ಕಾರ್ಯ ಸ್ಪಂದನೆ ಯುವ ಸಮುದಾಯಕ್ಕೆ ಮಾರ್ಗದರ್ಶಕ ಆಗಿರುವುದನ್ನು ಗುರುತಿಸಿ ಮಂಗಳೂರು ರತ್ನ ಪ್ರಶಸ್ತಿ ನೀಡಲಾಗಿದೆ.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು, ಕಬಡ್ಡಿ ನಮ್ಮ ರಾಷ್ಟ್ರೀಯ ಕ್ರೀಡೆ ಆಗಿದೆ. ನಮ್ಮ ಯುವ ಸಮುದಾಯವನ್ನು ಕಬಡ್ಡಿ ಒಗ್ಗೂಡಿಸುತ್ತದೆ ಹಾಗೂ ಸೌಹಾರ್ದತೆ ವಾತಾವರಣ ನಿರ್ಮಿಸುತ್ತದೆ.
ವೀ ಆರ್ ಯುನೈಟೆಡ್ ಸಂಸ್ಥೆ ಸತತ ಮೂರು ವರ್ಷಗಳಿಂದ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್‌ನ್ನು ಸಂಘಟಿಸುತ್ತಿದ್ದು ಇದು ಮುಂದಿನ ವರ್ಷ ರಾಜ್ಯ ಮಟ್ಟಕ್ಕೂ ವಿಸ್ತರಣೆಯಾಗಲಿ ಎಂದರು. ಈ ಸಂದರ್ಭ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಉದ್ಯಮಿ ಜಯಪ್ರಕಾಶ್ ತುಂಬೆ, ವೀ ಆರ್ ಯುನೈಟೆಡ್ ಸಂಸ್ಥೆಯ ಅಧ್ಯಕ್ಷ ಅಜ್ಫರ್ ರಝಕ್, ಉಪಾಧ್ಯಕ್ಷ ಮನೋಜ್ ಕುಮಾರ್, ಕಾರ್ಯದರ್ಶಿ ನಿಶಾನ್ ಭಂಡಾರಿ, ಕೋಶಾಧಿಕಾರಿ ಸುದೇಶ್ ಭಂಡಾರಿ ಇರಾ, ಪ್ರಮುಖರಾದ ಶ್ರೀನಿವಾಸ್ ನಾಯಕ್ ಇಂದಾಜೆ, ದೀಪಕ್ ಪಿಲಾರ್, ನಿತಿನ್ ಶೆಟ್ಟಿ, ಸುಜಿತ್ ಭಂಡಾರಿ , ಜಯಂತ್ ಇದ್ದರು.-------------------