ಸಾರಾಂಶ
ಮಂಗಳೂರಿನ ಡಾ.ಎಂ.ವಿ.ಶೆಟ್ಟಿ ಸ್ಮಾರಕ ಕಾಲೇಜಿನ ಪದವಿ ಪ್ರಾಪ್ತಿ ಕಾರ್ಯಕ್ರಮ ಹಾಗೂ ಸಂಸ್ಥಾದಿನ ಶನಿವಾರ ನಗರದ ಪುರಭವನದಲ್ಲಿ ನಡೆಯಿತು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಅರೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮೊದಲಿಗರಾಗಿರುವ ಹಾಗೂ ವೃತ್ತಿಪರ ವಿಷಯಗಳಲ್ಲಿ ಶೈಕ್ಷಣಿಕವಾಗಿ ಹೆಸರುವಾಸಿಯಾಗಿರುವ ಡಾ.ಎಂ.ವಿ.ಶೆಟ್ಟಿ ಸ್ಮಾರಕ ಕಾಲೇಜಿನ ಪದವಿ ಪ್ರಾಪ್ತಿ ಕಾರ್ಯಕ್ರಮ ಹಾಗೂ ಸಂಸ್ಥಾದಿನ ಶನಿವಾರ ನಗರದ ಪುರಭವನದಲ್ಲಿ ನಡೆಯಿತು.ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜಮುಖಿ ಕರ್ತವ್ಯಗಳನ್ನು ಗುಣಾತ್ಮಕವಾಗಿ ನಿರ್ವಹಿಸಬೇಕು ಹಾಗೂ ತಮ್ಮ ವೃತ್ತಿ ಧರ್ಮವನ್ನು ಸಮರ್ಪಕವಾಗಿ ಪಾಲಿಸಬೇಕು ಎಂದು ಹೇಳಿದರು.
ಡಾ.ಎಂ.ವಿ.ಶೆಟ್ಟಿ ಸ್ಮಾರಕ ಸಂಸ್ಥೆಯ ಅಧ್ಯಕ್ಷೆ ಡಾ.ಹಿಮಾ ಊರ್ಮಿಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಟ್ರಸ್ಟಿಗಳಾದ ಡಾ. ದಿವ್ಯಾಂಜಲಿ ಶೆಟ್ಟಿ, ಡಾ. ರೋಹಿಲ ಶೆಟ್ಟಿ, ಶೈಕ್ಷಣಿಕ ನಿರ್ದೇಶಕರಾದ ಡಾ.ಸುಮ ಎಸ್. ರೈ, ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಆಲಿ ಹಾಗೂ ವಿವಿಧ ಕೋರ್ಸುಗಳ ಪ್ರಾಂಶುಪಾಲರುಗಳಾದ ಡಾ.ಪದ್ಮಪ್ರಿಯ ಎಸ್., ಪ್ರೊ.ಗ್ಲಾಡ್ ಸನ್ ಜೋಸ್, ಡಾ.ಸತೀಶ್ ಕೆ., ಪ್ರೊ. ಎಚ್. ಶ್ರೀಪ್ರಿಯಾ, ಡಾ.ಪ್ರಕಾಶ್ ಅಮೀನ್, ಡಾ. ನಿಶಾ ಸಿ.ಕೆ. ಇದ್ದರು. ಟ್ರಸ್ಟಿ ಡಾ. ರಂಜಿತ್ ಶೆಟ್ಟಿ ಸ್ವಾಗತಿಸಿದರು.
ನರ್ಸಿಂಗ್, ಫಿಸಿಯೋಥೆರಪಿ, ಸ್ಪೀಚ್ ಆಂಡ್ ಹಿಯರಿಂಗ್, ಅಲೈಡ್ ಹೆಲ್ತ್ ಸಯನ್ಸ್ ಸಮಾಜ ಕಾರ್ಯ, ಶಿಕ್ಷಕರ ಶಿಕ್ಷಣ ಹಾಗೂ ಮೆಡಿಕಲ್ ಲ್ಯಾಬ್ ಟೆಕ್ನೋಲಜಿ ವಿಷಯಕ್ಕೆ ಸಂಬಂಧಪಟ್ಟಂತೆ ೩೪೫ ವಿದ್ಯಾರ್ಥಿಗಳಿಗೆ ಪದವಿ ಪ್ರಾಪ್ತಿ ಮಾಡಲಾಯಿತು ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.