ಡಾ.ಮಾಧವ ಪೈ ಮಾನವೀಯತೆಯ ಗುಣ ಆದರ್ಶ ಪ್ರಾಯ: ಪ್ರೊ.ಸುರೇಂದ್ರನಾಥ ಶೆಟ್ಟಿ

| Published : May 01 2024, 01:17 AM IST

ಡಾ.ಮಾಧವ ಪೈ ಮಾನವೀಯತೆಯ ಗುಣ ಆದರ್ಶ ಪ್ರಾಯ: ಪ್ರೊ.ಸುರೇಂದ್ರನಾಥ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಕಾಲೇಜಿನ ಸಂಸ್ಥಾಪಕ ಡಾ.ಮಾಧವ ಪೈ ಅವರ 126ನೇ ಜನ್ಮ ದಿನಾಚರಣೆ ಸಂದರ್ಭ ಸಂಸ್ಮರಣ ಕಾರ್ಯಕ್ರಮ ನಡೆಯಿತು. ಎಂ.ಜಿ.ಎಂ.ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಸಂಸ್ಮರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಆಧುನಿಕ ಮಣಿಪಾಲದ ನಿರ್ಮಾತೃ ಡಾ.ಮಾಧವ ಪೈಯವರು ತಮ್ಮ ಬಾಲ್ಯದಿಂದಲೂ ರೂಢಿಸಿಕೊಂಡ ಅತೀ ಶ್ರೇಷ್ಠ ಗುಣವೆಂದರೆ ಮಾನವೀಯತೆಯ ಹೃದಯ. ತಮ್ಮ ಸಂಸಾರದೊಂದಿಗೆ ತಮ್ಮ ಸಮಾಜವನ್ನು ಆರೇೂಗ್ಯ ಪೂರ್ಣವಾಗಿ ಬೆಳೆಸುವಲ್ಲಿ ಡಾ.ಮಾಧವ ಪೈ ಅವರ ಕೊಡುಗೆ ಅನನ್ಯವಾದದ್ದು ಎಂದು ಎಂ.ಜಿ.ಎಂ.ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಹೇಳಿದರು.

ಅವರು ನಗರದ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಹಮ್ಮಿಕೊಂಡ ಕಾಲೇಜಿನ ಸಂಸ್ಥಾಪಕ ಡಾ.ಮಾಧವ ಪೈ ಅವರ 126ನೇ ಜನ್ಮ ದಿನಾಚರಣೆ ಸಂದರ್ಭ ಸಂಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಸಹಭಾಗಿತ್ವದ ಕಲ್ಪನೆಯ ಆಧಾರವಾಗಿಟ್ಟುಕೊಂಡು ತಮ್ಮ ಎಲ್ಲ ಸಂಸ್ಥೆಗಳನ್ನು ಕಟ್ಟಿದ ಮಹಾನ್ ಸಾಧಕ ಡಾ.ಮಾಧವ ಪೈಯವರು. ಹಾಗಾಗಿಯೇ ಅವರು ಕಟ್ಟಿದ ಶಿಕ್ಷಣ ಆರೇೂಗ್ಯ ಬ್ಯಾಂಕಿಂಗ್ ಸಂಸ್ಥೆಗಳು ಇಂದಿನ ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ ಬೆಳೆದು ನಿಲ್ಲಲು ಸಾಧ್ಯವಾಯಿತು ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಿನಾರಾಯಣ ಕಾರಂತ ವಹಿಸಿದ್ದರು. ಎಂ.ಜಿ.ಎಂ. ಪದವಿ ಪೂವ೯ ವಿಭಾಗದ ಪ್ರಾಂಶುಪಾಲೆ ಮಾಲತಿ ದೇವಿ, ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅರುಣ ಕುಮಾರ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಎಂ.ವಿಶ್ವನಾಥ ಪೈ ವಂದಿಸಿದರು.

ಕಾಲೇಜಿನ ಆಡಳಿತ ಸೌಧದ ಮುಂಭಾಗದಲ್ಲಿರುವ ಡಾ.ಮಾಧವ ಪೈ ಅವರ ಪ್ರತಿಮೆಗೆ ಗೌರವಾರ್ಪಣೆ ಮಾಡಲಾಯಿತು