ಸಾರಾಂಶ
ಆಧುನಿಕ ವಚನಕಾರ ದಿ.ಡಾ. ಮಹದೇವ ಬಣಕಾರರ ೯೩ನೇ ಜನ್ಮದಿನವನ್ನು ಶುಕ್ರವಾರ ನಗರದ ಡಾ. ಮಹದೇವ ಬಣಕಾರ ರಾಷ್ಟ್ರೀಯ ಸ್ಮಾರಕ ಸಮಿತಿ ವತಿಯಿಂದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಆಚರಿಸಲಾಯಿತು.
ಹಾವೇರಿ: ಆಧುನಿಕ ವಚನಕಾರ ದಿ.ಡಾ. ಮಹದೇವ ಬಣಕಾರರ ೯೩ನೇ ಜನ್ಮದಿನವನ್ನು ಶುಕ್ರವಾರ ನಗರದ ಡಾ. ಮಹದೇವ ಬಣಕಾರ ರಾಷ್ಟ್ರೀಯ ಸ್ಮಾರಕ ಸಮಿತಿ ವತಿಯಿಂದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಆಚರಿಸಲಾಯಿತು.ಸ್ಮಾರಕ ಸಮಿತಿಯ ಅಧ್ಯಕ್ಷ, ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎಫ್.ಎನ್.ಗಾಜಿಗೌಡ್ರ ಹಾಗೂ ಸಮಿತಿಯ ಸದಸ್ಯರು ಡಾ. ಮಹದೇವ ಬಣಕಾರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಎಫ್.ಎನ್.ಗಾಜಿಗೌಡ್ರ ಮಾತನಾಡಿ, ಡಾ. ಮಹದೇವ ಬಣಕಾರ ರಾಷ್ಟ್ರೀಯ ಸ್ಮಾರಕ ಸಮಿತಿ ಹುಟ್ಟುಹಾಕಿ ಬಣಕಾರರ ಹೆಸರು ಅಜರಾಮರವಾಗಿ ಉಳಿಯಲಿ, ಹಾವೇರಿ ನಗರದ ಜನತೆಗೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಡಾ. ಮಹದೇವ ಬಣಕಾರ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಾಗುತ್ತಿದೆ. ಇನ್ನೇನು ಕಟ್ಟಡ ಅಂತಿಮ ಸ್ಪರ್ಶ ಪಡೆದುಕೊಂಡು ಲೋಕಾರ್ಪಣೆಯಾಗುವ ಹಂತಕ್ಕೆ ಬಂದು ತಲುಪಿದ್ದು, ಇದು ನಮ್ಮೆಲ್ಲರಿಗೂ ಸಂತೋಷದ ವಿಷಯವಾಗಿದೆ ಎಂದರು.ಈ ಸಂದರ್ಭದಲ್ಲಿ ಎಂ.ಎಸ್.ಕೋರಿಶೆಟ್ಟರ, ವೈ.ಬಿ. ಆಲದಕಟ್ಟಿ, ಪರಮೇಶ ಶಿವಣ್ಣನವರ, ಅಬ್ದುಲ್ ಹುಬ್ಬಳ್ಳಿ, ವೀರಣ್ಣ ಬೆಳವಡಿ, ಪ್ರಾಧಿಕಾರದ ಆಯುಕ್ತ ವೀರಮಲ್ಲಪ್ಪ ಪೂಜಾರ ಇತರರು ಇದ್ದರು.