ಡಾ.ಮೆಳವಂಕಿಯವರ ಸೇವೆ ಅನುಪಮವಾದುದು

| Published : Jul 01 2025, 01:47 AM IST / Updated: Jul 01 2025, 01:48 AM IST

ಸಾರಾಂಶ

ಸುಮಾರು 37 ವರ್ಷಗಳವರೆಗೆ ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಇದೀಗ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಿ ಸೇವಾ ವಯೋನಿವೃತ್ತಿ ಹೊಂದುತ್ತಿರುವ ಡಾ.ಕೆ.ಆರ್.ಮೆಳವಂಕಿ ಅವರ ಶಿಕ್ಷಕ ವೃತ್ತಿ ಪಯಣ ಅನುಪಮವಾದುದು ಎಂದು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಸುಮಾರು 37 ವರ್ಷಗಳವರೆಗೆ ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಇದೀಗ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಿ ಸೇವಾ ವಯೋನಿವೃತ್ತಿ ಹೊಂದುತ್ತಿರುವ ಡಾ.ಕೆ.ಆರ್.ಮೆಳವಂಕಿ ಅವರ ಶಿಕ್ಷಕ ವೃತ್ತಿ ಪಯಣ ಅನುಪಮವಾದುದು ಎಂದು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಶ್ಲಾಘಿಸಿದರು.

ಪಟ್ಟಣದ ಕೋಟೆಯ ಆವರಣದಲ್ಲಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತ ಹಮ್ಮಿಕೊಂಡಿದ್ದ ಸೇವಾ ವಯೋನಿವೃತ್ತಿ ಹೊಂದುತ್ತಿರುವ ಡಾ.ಕೆ.ಆರ್.ಮೆಳವಂಕಿಯವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ.ಕೆ.ಆರ್.ಮೆಳವಂಕಿ ಅವರು ಕೇವಲ ಬೋಧನೆಯಲ್ಲಿ ಮಾತ್ರ ನಿರತರಾಗಿರದೇ ಇತರ ಚಟುವಟಕೆಗಳಲ್ಲಿಯೂ ತೊಡಗಿ ಸಾವಿರಾರು ವಿದ್ಯಾರ್ಥಿಗಳ ವೈಕ್ತಿತ್ವ ವಿಕಸನಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಬಣ್ಣಿಸಿದರು.ಎನ್.ಸಿ.ಸಿ ಅಧಿಕಾರಿಗಳಾಗಿ, ವಿಶ್ವವಿದ್ಯಾಲಯದ ಬಿಒಎಸ್ ಸದಸ್ಯರಾಗಿ, ಪರೀಕ್ಷಾ ವಿಚಕ್ಷಕ ದಳದ ಚೇರಮನ್‌ರಾಗಿ ಮೌಲ್ಯಮಾಪನ ಕಾರ್ಯದ ಮುಖ್ಯಸ್ಥರಾಗಿ, ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾಗಿ ಬಹುಮುಖ ಪ್ರತಿಭೆ ಹೊಂದಿದ ಇವರು ತಮ್ಮೊಂದಿಗೆ ಕಾರ್ಯ ನಿರ್ವಹಿಸಿದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತ ಇವರ ವಿಶ್ರಾಂತ ಜೀವನಕ್ಕೆ ಶುಭ ಕೋರಿದರು. ಡಾ.ಕೆ.ಆರ್.ಮೆಳವಂಕಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಐತಿಹಾಸಿಕ ಚನ್ನಮ್ಮನ ಕಿತ್ತೂರಿನಲ್ಲಿ ತಮ್ಮ ಸುದೀರ್ಘ ಅವಧಿಯ ಶಿಕ್ಷಕ ವೃತ್ತಿ ಸಂತಸ ತಂದಿದ್ದು, ಎಲ್ಲ ರೀತಿಯ ಸಹಕಾರ ನೀಡಿದ ಪ್ರತಿಯೊಬ್ಬರನ್ನು ಸ್ಮರಿಸುತ್ತ ಸನ್ಮಾನಿಸಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳನ್ನು ತಿಳಿಸಿ ಬರಲಿರುವ ದಿನಗಳಲ್ಲಿ ಕನ್ನಡ ತಾಯಿಯ ಸೇವೆಯಲ್ಲಿ ಭಾಗಿಯಾಗುವ ಭರವಸೆ ನೀಡಿದರು.ಕಿತ್ತೂರಿನ ವಸ್ತು ಸಂಗ್ರಹಾಲಯದ ಕ್ಯೂರೇಟರ್ ರಾಘವೇಂದ್ರ ಸಮಾರೋಪ ನುಡಿಗಳನ್ನಾಡಿ, ಡಾ.ಕೆ.ಆರ್.ಮೆಳವಂಕಿ ಅವರು ಮೃದು ಸ್ವಭಾವದ ಸೃಜನಶೀಲ ಕನ್ನಡ ಉಪನ್ಯಾಸಕರಾಗಿ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಂಜುನಾಥ ಕಳಸಣ್ಣವರ ಪ್ರಾರ್ಥಿಸಿದರು. ನಾಗಯ್ಯ ಹುಲೆಪ್ಪನವರವಠ ಸ್ವಾಗತಿಸಿದರು. ಮಹೇಶ್ವರ ಹೊಂಗಲ ವಂದಿಸಿದರು. ಬಸವರಾಜ ಬಿದರಿ ನಿರೂಪಿಸಿದರು. ರಾಜಶೇಖರ ರಗಟಿ, ಪ್ರಕಾಶ ಹೊನ್ನಪ್ಪನವರ ಮತ್ತು ಇತರರು ಉಪಸ್ಥಿತರಿದ್ದರು.