ಡಾ.ಮೋಹನ್ ಅಪ್ಪಾಜಿಗೆ ಸಂಸ್ಕೃತಿ ಸಿರಿ ಬಳಗದಿಂದ ಸನ್ಮಾನ

| Published : Feb 18 2025, 12:35 AM IST

ಸಾರಾಂಶ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತುರ್ತು ಔಷಧೀಯ ವಿಭಾಗದ ಪ್ರಾಧ್ಯಾಪಕರಾಗಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡಿರುವ ಕೊಡಗು ಜಿಲ್ಲಾ ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್‌ ಗೌರವ ಅಧ್ಯಕ್ಷರು ಹಾಗೂ ಸಲಹೆಗಾರ ಮಡಿಕೇರಿಯ ಇಎನ್‌ಟಿ ವೈದ್ಯ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ ಅವರನ್ನು ಬಳಗದ ಪದಾಧಿಕಾರಿಗಳು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತುರ್ತು ಔಷಧೀಯ ವಿಭಾಗದ ಪ್ರಾಧ್ಯಾಪಕರಾಗಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡಿರುವ ಕೊಡಗು ಜಿಲ್ಲಾ ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್‌ ಗೌರವ ಅಧ್ಯಕ್ಷರು ಹಾಗೂ ಸಲಹೆಗಾರ ಮಡಿಕೇರಿಯ ಇಎನ್‌ಟಿ ವೈದ್ಯ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ ಅವರನ್ನು ಬಳಗದ ಪದಾಧಿಕಾರಿಗಳು ಸನ್ಮಾನಿಸಿದರು.ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮೋಹನ್ ಅಪ್ಪಾಜಿ, ಮುಂದಿನ ದಿನಗಳಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಯನ್ನು ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆಯನ್ನಾಗಿಸುವ ಗುರಿ ಹೊಂದಿದ್ದು, ಇದಕ್ಕೆ ಸರ್ವರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.ಕೊಡಗು ಜಿಲ್ಲಾ ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್ ಅಧ್ಯಕ್ಷ ಈರಮಂಡ ಹರಿಣಿ ವಿಜಯ್, ಉಪಾಧ್ಯಕ್ಷ ಕೋಲೆಯಂಡ ನಿಶಾ ಮೋಹನ್, ಕಾರ್ಯದರ್ಶಿ ಕೇಚಂಡ ಸುನೀತಾ ಗಣೇಶ್, ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ, ಟ್ರಸ್ಟಿ ಕೆ.ಎಂ.ಬಿ. ಗಣೇಶ್, ಈರಮಂಡ ವಿಜಯ್ ಉತ್ತಯ್ಯ, ಬಳಗದ ಸದಸ್ಯರಾದ ಮಂಜುಳಾ ಶಿವಕುಮಾರ್, ಡೆನ್ನಿ ಬರೋಸ್, ಸರಿತಾ ಅಯ್ಯಪ್ಪ, ಸೋನಾ ಪ್ರೀತು, ಜಾನ್ಸನ್ ಪಿಂಟೋ, ಸುಶೀಲಾ, ಗಿಲ್ಬರ್ಟ್ ಲೋಬೊ, ಕೃಷ್ಣ ರಾಜು ಎಂ.ಪಿ., ಅನಿಲ್ ಕೃಷ್ಣನ್, ಕಾಂಡಂಡ ಪ್ರಣೀತಿ, ರಾಧಾ ಶೇಖರ್, ಜಾನ್ಸನ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.