ಸಾರಾಂಶ
. ಇಲ್ಲಿ ಉದ್ಯಮ, ನಾಯಕತ್ವ ಮತ್ತು ಸೇವೆಗೆ ಒತ್ತು ನೀಡಲಾಗುವುದು
ಕನ್ನಡಪ್ರಭ ವಾರ್ತೆ ಮೈಸೂರುಆರ್.ಬಿ.ಸಿ ಮೈಸೂರು ಸಂಸ್ಥಾಪಕ ಅಧ್ಯಕ್ಷರಾಗಿ ಡಾ. ಮುಳ್ಳೂರು ನಂಜುಂಡಸ್ವಾಮಿ ಅಧಿಕಾರ ಸ್ವೀಕರಿಸಿದರು. ರೋಟರಿ ಬಿಜಿನೆಸ್ ಕಾನ್ ಕ್ಲೇವ್ ಮೈಸೂರು ಘಟಕದ ಸಂಸ್ಥಾಪಕ ಅಧ್ಯಕ್ಷ ಡಾ. ಮುಳ್ಳೂರು ನಂಜುಂಡಸ್ವಾಮಿ ಅವರು ಅಧಿಕಾರ ಸ್ವೀಕರಿಸಿದರು. ರೋಟರಿ ಅಂತರಾಷ್ಟ್ರೀಯ ಜಿಲ್ಲೆ - 3181 ರ ಮಾಜಿ ಜಿಲ್ಲಾ ಗವರ್ನರ್, ಎನ್. ಪ್ರಕಾಶ್ ಕಾರಂತ್ ಅವರು ಆರ್.ಬಿ.ಸಿ ಲಾಂಛನ ವಿರುವ ಕಾಲರ್ ಮತ್ತು ಪಿನ್ನು ಹಾಕುವ ಮೂಲಕ ಪದಗ್ರಹಣ ನೆರವೇರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಡಾ. ಮುಳ್ಳೂರು ನಂಜುಂಡಸ್ವಾಮಿ ಅವರು, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181ರಲ್ಲಿನ ಹಲವು ಕ್ಲಬ್ ಗಳ ಸದಸ್ಯರನ್ನು ಮಾತ್ರ ಆರ್.ಬಿ.ಸಿಗೆ ಸೇರಿಸಲಾಗಿದೆ. ಇಲ್ಲಿ ಉದ್ಯಮ, ನಾಯಕತ್ವ ಮತ್ತು ಸೇವೆಗೆ ಒತ್ತು ನೀಡಲಾಗುವುದು ಎಂದರು.ಉಪಾಧ್ಯಕ್ಷರಾಗಿ ಸ್ವಾಮಿ, ಕಾರ್ಯದರ್ಶಿ ಎನ್. ಭರತ್, ಸಹ ಕಾರ್ಯದರ್ಶಿಯಾಗಿ ಎನ್.ಆರ್. ಹರೀಶ್, ಖಜಾಂಚಿಯಾಗಿ ಸಂತೋಷ್ ಎಸ್. ಗೌಡ, ಎಲ್.ಸಿ. ಧರ್ಮಾನಂದ, ಎಸ್. ನಾಗೇಶ್, ಬಿ. ಶ್ರೀನಾಥ್, ಎಸ್. ಯದುಕೃಷ್ಣ, ಎಸ್. ಶಿವಕುಮಾರ್, ವಿ. ಮಂಜುನಾಥ ಅವರು ನಿರ್ದೇಶಕರಾಗಿ ನೇಮಕವಾದರು.ಮಾಜಿ ಸಹಾಯಕ ಗವರ್ನರ್ ಗಳು, ವಲಯ ಸೇನಾನಿಗಳು, ವಿವಿಧ ರೋಟರಿ ಕ್ಲಬ್ ಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಆರ್.ಬಿ.ಸಿಗೆ ಸೇರ್ಪಡೆಯಾದರು.ಈ ವೇಳೆ ನಂಜುಂಡಸ್ವಾಮಿ ಅವರ ಪತ್ನಿ ಬಿ.ಎಸ್. ಅಶ್ವಿನಿ, ರೋಟರಿ ಮಾಜಿ ಸಹಾಯಕ ಗವರ್ನರ್ ಗಳಾದ ಯಶಸ್ವಿನಿ ಸೋಮಶೇಖರ್, ವಾಸುದೇವ್, ನಂಜಯ್ಯ, ಕಾರ್ಯದರ್ಶಿ ಎನ್. ಭರತ್. ವಲಯ ಸೇನಾನಿ ಜಗದೀಶ್ ಇದ್ದರು. ವೇಣು ನಿರೂಪಿಸಿ, ಭರತ್ ವಂದಿಸಿದರು.