ಸಾರಾಂಶ
ವಿದ್ಯಾವಂತ ಹಾಗೂ ಜನಪರ ಕೆಲಸ ಮಾಡುವ ವ್ಯಕ್ತಿಯಾಗಿರುವ ಕಾರಣ ನಾವು ಹತ್ತು ತಿಂಗಳ ಹಿಂದೆ ಡಾ. ನಾಗರಾಜ್ ಅವರನ್ನು ನಮ್ಮ ಜೆಡಿಯು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದೇವೆ. ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ವಿದ್ಯಾವಂತ ಹಾಗೂ ಜನಪರ ಕೆಲಸ ಮಾಡುವ ವ್ಯಕ್ತಿಯಾಗಿರುವ ಕಾರಣ ನಾವು ಹತ್ತು ತಿಂಗಳ ಹಿಂದೆ ಡಾ. ನಾಗರಾಜ್ ಅವರನ್ನು ನಮ್ಮ ಜೆಡಿಯು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದೇವೆ. ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಯು ಪಕ್ಷ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರು ಚುನಾವಣೆ ನೀತಿ ಮತ್ತು ಸಂಘಟನಾ ಬೆಳವಣಿಗೆ ಕುರಿತು ಮಾತನಾಡಿದರು.ನಮ್ಮ ತಂದೆ ಜೆ.ಎಚ್ ಪಟೇಲ್ ಅವರು ರಾಮಕೃಷ್ಣ ಹೆಗಡೆ ೧೯೮೯ರಲ್ಲಿ ಮುಖ್ಯಮಂತ್ರಿಯಾಗಿ ನೈತಿಕ ರಾಜಕೀಯದ ಉದಾಹರಣೆಯಾಗಿದ್ದರು. ಆಗ ಕರ್ನಾಟಕದಲ್ಲಿ ಬಿಜೆಪಿ ಕ್ಷೀಣವಾಗಿದ್ದರೂ, ಹೆಗಡೆ ಮತ್ತು ಜಾರ್ಜ್ ಫನಾಂಡಿಸ್ ಮಾರ್ಗದರ್ಶನದಲ್ಲಿ ಎರಡೂ ಪಕ್ಷಗಳು ಪರಸ್ಪರ ಸಹಕಾರ ನೀಡಿ ರಾಜಕೀಯ ಪರಂಪರೆಯನ್ನು ನಿರ್ಮಿಸಿದ್ದರು ಎಂದರು.ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ ಸಂಘಟನಾ ಬಲವರ್ಧನೆಗೆ ಕೈಗೊಂಡಿರುವ ಪ್ರವಾಸ ಶುಕ್ರವಾರ ಮಾಡಿ ತಾಲೂಕು ನ್ಯಾಯಾಲಯ, ತಹಸೀಲ್ದಾರ್ ಕಚೇರಿ, ಪುರಸಭೆ ಸೇರಿ ಸರ್ಕಾರಿ ಕಚೇರಿಗಳಿಗೆ ನಮ್ಮ ತಂಡ ಭೇಟಿ ನೀಡಿ ಮುಂದೆ ಬರುವ ಆಗ್ನೇಯ ಪದವಿದರ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಹೆಚ್ಚನ ಮತ ನೀಡಲು ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದರು.ಪ್ರಾಯೋಗಿಕ, ವಿದ್ಯಾವಂತ ಹಾಗೂ ಜನಪರ ಕೆಲಸ ಮಾಡುವ ವ್ಯಕ್ತಿಯಾಗಿರುವ ಕಾರಣ ನಾವು ಹತ್ತು ತಿಂಗಳ ಹಿಂದೆ ಡಾ. ನಾಗರಾಜ್ ಅವರನ್ನು ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದೇವೆ. ಇಂದು ಕೇಂದ್ರದಲ್ಲಿ ಬಿಜೆಪಿ-ಜೆಡಿಯು ಒಟ್ಟಾಗಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲೂ ಬೆಂಬಲ ಒಂದಾಗಬೇಕು ಎಂದು ಅವರು ಹೇಳಿದರು.ಜೆಡಿಯು ಅಭ್ಯರ್ಥಿ ಡಾ. ನಾಗರಾಜ್ ಮಾತನಾಡಿ, ನಾನು ಮೂರು ದಶಕಗಳಿಂದ ಕೋಲಾರದ ಮಾಲೂರಿನಲ್ಲಿ ಸೇವೆ ಸಲ್ಲಿಸಿದ ವೈದ್ಯ. ಜನರ ನೋವು,ನಿರುದ್ಯೋಗ, ಪದವೀಧರರ ಸಮಸ್ಯೆಗಳ ಅರಿವು ನನಗೆ ಇದೆ. ಜನಸೇವೆ ನನ್ನ ಬದುಕಿನ ಧ್ಯೇಯ,ಇದೇ ಮನೋಭಾವದೊಂದಿಗೆ ಚುನಾವಣೆಯನ್ನು ಎದುರಿಸುತ್ತಿದ್ದೇನೆ,ಎಂದು ಹೇಳಿದರು.ಮತದಾರರನ್ನು ಸಂಪರ್ಕಿಸಿ ಅವರ ಗೌರವ ಕಾಪಾಡಿ ಮತ ಕೇಳುವುದು ನಮ್ಮ ಹೊಣೆ, ಅಕ್ರಮ ಮೂಲಕ ಗೆಲ್ಲುವುದನ್ನು ನಾವು ಒಪ್ಪುವುದಿಲ್ಲ, ನಿಷ್ಟೆಯಿಂದ ಗೆಲ್ಲೋದು ಮಾತ್ರ ಭವಿ?ದ ನೈತಿಕ ಆಡಳಿತಕ್ಕೆ ಭರವಸೆ ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಘಟಕದ ಕಾರ್ಯದರ್ಶಿ ಪ್ರಕಾಶ್ ಮಾಲಿ, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹಿಜಾ, ಮಹಿಳಾ ಉಪಾಧ್ಯಕ್ಷ ಶಾಂತಕುಮಾರಿ, ಪದಾಧಿಕಾರಿಗಳಾದ ರಂಗನಾಥ್, ಬಿಜೆ ಪ್ರಭು, ನಂಜುಂಡಪ್ಪ, ರಾಮಸ್ವಾಮಿ ಸೇರಿದಂತೆ ಇತರರು ಇದ್ದರು.;Resize=(128,128))
;Resize=(128,128))