ಸಾರಾಂಶ
ಡಾ. ಪರ್ವೀಜ್ ಷರೀಫ್ ಬಿ.ಜಿ. ಅಂತಾರಾಷ್ಟ್ರೀಯ ಮೈಕ್ರೋವೇವ್ ವಿಶ್ವ ನಾಯಕರ ಸಮ್ಮೇಳನ (ಐಎಂಡಬ್ಲ್ಯುಎಲ್‌ಸಿ) 2025ರಲ್ಲಿ ನಡೆದ ಪ್ರತಿಷ್ಠಿತ ಮೂರು ನಿಮಿಷಗಳ ಥೀಸಿಸ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ (ಎಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ) ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪರ್ವೀಜ್ ಷರೀಫ್ ಬಿ.ಜಿ. ಅಂತಾರಾಷ್ಟ್ರೀಯ ಮೈಕ್ರೋವೇವ್ ವಿಶ್ವ ನಾಯಕರ ಸಮ್ಮೇಳನ (ಐಎಂಡಬ್ಲ್ಯುಎಲ್‌ಸಿ) 2025ರಲ್ಲಿ ನಡೆದ ಪ್ರತಿಷ್ಠಿತ ಮೂರು ನಿಮಿಷಗಳ ಥೀಸಿಸ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಮೂರು ನಿಮಿಷಗಳ ಅವಧಿಯಲ್ಲಿ ತಮ್ಮ ಸಂಶೋಧನಾ ವಿಚಾರಗಳನ್ನು ಸಂಕ್ಷಿಪ್ತ ಮತ್ತು ಆಕರ್ಷಕವಾಗಿ ಮಂಡಿಸಲು ಅವಕಾಶ ಕಲ್ಪಿಸುವ ಈ ಸ್ಪರ್ಧೆ, ಕಠಿಣ ಮಾನದಂಡಗಳಿಗೆ ಹೆಸರುವಾಸಿಯಾಗಿದೆ. ಡಾ. ಷರೀಫ್ ಅವರ ಪ್ರಸ್ತುತಿಯನ್ನು ಅತ್ಯುತ್ತಮ ಕೌಶಲ್ಯ, ಚಿಂತನೆಯ ಸ್ಪಷ್ಟತೆ ಮತ್ತು ಸಂಶೋಧನಾ ಕಲ್ಪನೆಯನ್ನು ಪರಿಣಾಮಕಾರಿಯಾಗಿ ಸಂವಹನ ಮಾಡಿದ ಸಾಮರ್ಥ್ಯಕ್ಕಾಗಿ ವಿಶೇಷವಾಗಿ ಗುರುತಿಸಲಾಯಿತು.ಐಇಇಇ, ಎಂಟಿಟಿ-ಎಸ್, ಎಪಿಎಸ್ ಸೊಸೈಟಿಗಳು, ಐಇಇಇ ಕೇರಳ, ಐಇಇಇ ಬೆಂಗಳೂರು ವಿಭಾಗ ಮತ್ತು ಎಇಎಸ್ಎಸ್ ಬೆಂಗಳೂರು ಚಾಪ್ಟರ್‌ನಡಿ ಆಯೋಜಿಸಲಾದ ಈ ಸಮ್ಮೇಳನವು ಮೈಕ್ರೋವೇವ್ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಉದಯೋನ್ಮುಖ ಸಂಶೋಧಕರು ಹಾಗೂ ವೃತ್ತಿಪರರಿಗೆ ಪ್ರಮುಖ ವೇದಿಕೆಯಾಯಿತು.