ಬಿ.ಕಲ್ಪನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಡಾ.ಪ್ರಭಾ ಭೇಟಿ

| Published : Sep 19 2024, 01:55 AM IST

ಸಾರಾಂಶ

ಬಿ.ಕಲ್ಪನಹಳ್ಳಿ ಅಂಗನವಾಡಿ ಕೇಂದ್ರದ ಸ್ವಚ್ಛ ಪರಿಸರ, ಉತ್ತಮ ವಾತಾವರಣದಲ್ಲಿ ಮಕ್ಕಳ ಕಲವರ ಕಂಡ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಅಂಗನವಾಡಿ ಕೇಂದ್ರದ ಸಿಬ್ಬಂದಿ ಕಾರ್ಯ ಮೆಚ್ಚಿ, ಸಂದರ್ಶಕರ ವಹಿಯಲ್ಲಿ ಸ್ವತಃ ನಾಲ್ಕು ಒಳ್ಳೆಯ ಮಾತುಗಳನ್ನು ಬರೆದು, ಹಸ್ತಾಕ್ಷರ ಮೂಡಿಸುವ ಮೂಲಕ ಪ್ರೋತ್ಸಾಹಿಸಿದ್ದಾರೆ.

- ಸಂದರ್ಶಕರ ವಹಿಯಲ್ಲಿ ಸಿಬ್ಬಂದಿ ಕಾಳಜಿ ಶ್ಲಾಘಿಸಿ, ದಾಖಲಿಸಿದ ಸಂಸದೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಬಿ.ಕಲ್ಪನಹಳ್ಳಿ ಅಂಗನವಾಡಿ ಕೇಂದ್ರದ ಸ್ವಚ್ಛ ಪರಿಸರ, ಉತ್ತಮ ವಾತಾವರಣದಲ್ಲಿ ಮಕ್ಕಳ ಕಲವರ ಕಂಡ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಅಂಗನವಾಡಿ ಕೇಂದ್ರದ ಸಿಬ್ಬಂದಿ ಕಾರ್ಯ ಮೆಚ್ಚಿ, ಸಂದರ್ಶಕರ ವಹಿಯಲ್ಲಿ ಸ್ವತಃ ನಾಲ್ಕು ಒಳ್ಳೆಯ ಮಾತುಗಳನ್ನು ಬರೆದು, ಹಸ್ತಾಕ್ಷರ ಮೂಡಿಸುವ ಮೂಲಕ ಪ್ರೋತ್ಸಾಹಿಸಿದ್ದಾರೆ.

ತಾಲೂಕಿನ ಬಿ.ಕಲ್ಪನಹಳ್ಳಿ ಗ್ರಾಮಕ್ಕೆ ಶ್ರೀ ಗಣೇಶೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸಂಸದೆ ಡಾ.ಪ್ರಭಾ ವಿಘ್ನೇಶ್ವರನ ದರ್ಶನ ಮಾಡಿ, ಪೂಜೆ ಸಲ್ಲಿಸಿದರು. ಅನಂತರ ಅದೇ ಊರಿನ ಅಂಗನವಾಡಿ ಕೇಂದ್ರಕ್ಕೆ ಆಕಸ್ಮಿಕ ಭೇಟಿ ನೀಡಿ, ಪರಿಶೀಲಿಸಿದರು.

ಇಡೀ ಅಂಗನವಾಡಿ ಕೇಂದ್ರದ ಸ್ವಚ್ಛ ಪರಿಸರ, ಅಲ್ಲಿನ ಉತ್ತಮ ವಾತಾವರಣದಲ್ಲಿ ಮಕ್ಕಳ ಕಲರವ ಕಂಡ ಸಂಸದರು ಮಕ್ಕಳ ಜೊತೆಗೆ ಬೆರೆಯುತ್ತಾ, ಅಂಗನವಾಡಿ ಕೇಂದ್ರದ ಬಗ್ಗೆ ಸಿಬ್ಬಂದಿ, ಗ್ರಾಮಸ್ಥರಿಂದ ಮಾಹಿತಿ ಪಡೆದರು. ಕೇಂದ್ರದಲ್ಲಿ ಮಕ್ಕಳ ಆಟ, ಪಾಠದ ಬಗ್ಗೆ, ಮಕ್ಕಳ ಪರಿಕರಗಳು, ಸ್ವಚ್ಛತೆ ಬಗ್ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಶ್ಲಾಘಿಸಿದರು. ಅಂಗನವಾಡಿ ಕೇಂದ್ರದಲ್ಲಿದ್ದ ಸಂದರ್ಶಕರ ವಹಿಯಲ್ಲಿ ಅಂಗನವಾಡಿ ಶಿಕ್ಷಕಿ, ಸಹಾಯಕಿಯರ ಕಾರ್ಯ ಹಾಗೂ ಅಲ್ಲಿ ಸ್ವಚ್ಛತೆ ಬಗ್ಗೆ ಪ್ರಶಂಸೆಯನ್ನು ಬರೆದು, ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭ ಗ್ರಾಮದ ಮುಖಂಡರು, ಅಂಗನವಾಡಿ ಸಿಬ್ಬಂದಿ ಇದ್ದರು.

- - - -18ಕೆಡಿವಿಜಿ11: ದಾವಣಗೆರೆ ತಾಲೂಕಿನ ಬಿ.ಕಲ್ಪನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೇಟಿ ನೀಡಿ, ಅಲ್ಲಿನ ಸುವ್ಯವಸ್ಥೆ ಬಗ್ಗೆ ಶ್ಲಾಘಿಸಿದರು.